ಪ್ರಯಾಣಿಕರೇ ಗಮನಿಸಿ: 116 ವಿಶೇಷ ರೈಲು ಗಾಡಿಗಳ ಸಂಖ್ಯೆ ಬದಲು

By Kannadaprabha News  |  First Published Dec 18, 2024, 7:34 AM IST

ಈವರೆಗೆ ವಿಶೇಷ ರೈಲುಗಳ ಸಂಖ್ಯೆ '0' (ಸೊನ್ನೆ) ಸಂಖ್ಯೆಯಿಂದ ಪ್ರಾರಂಭವಾಗುತ್ತಿತ್ತು. ಇನ್ನು ಮುಂದೆ ಈ ರೈಲುಗಳ ಸಂಖ್ಯೆ '5,6,7' ರಿಂದ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದ ನೈಋತ್ಯ ರೈಲ್ವೆ 


ಬೆಂಗಳೂರು(ಡಿ.18):  ಪ್ರಯಾಣಿಕರಲ್ಲಿನ ಗೊಂದಲ ನಿವಾರಿಸಲು ನೈಋತ್ಯ ರೈಲ್ವೆಯು ತನ್ನ 116  ವಿಶೇಷ ಪ್ರಯಾಣಿಕ ರೈಲುಗಳಿಗೆ ಜ.1ರಿಂದ ನಿಯಮಿತ ರೈಲುಗಳ ಸಂಖ್ಯೆ ನೀಡುತ್ತಿದೆ. ಈವರೆಗೆ ವಿಶೇಷ ರೈಲುಗಳ ಸಂಖ್ಯೆ '0' (ಸೊನ್ನೆ) ಸಂಖ್ಯೆಯಿಂದ ಪ್ರಾರಂಭವಾಗುತ್ತಿತ್ತು. ಇನ್ನು ಮುಂದೆ ಈ ರೈಲುಗಳ ಸಂಖ್ಯೆ '5,6,7' ರಿಂದ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. 

ಕೋವಿಡ್ ಸಂದರ್ಭದಲ್ಲಿ ಹಾಗೂ ಇನ್ನಿತರ ಕಾರಣಗಳಿಂದ ರದ್ದುಗೊಂಡು ಬಳಿಕ ಪುನಃ ವಿಶೇಷ ರೈಲುಗಳಾಗಿ ಇವು ಸಂಚಾರ ಮಾಡುತ್ತಿದ್ದವು. ಸಾಮಾನ್ಯ ರೈಲುಗಳಿಗೆ ಹೋಲಿಸಿದರೆ ವಿಶೇಷ ರೈಲುಗಳ ಟಿಕೆಟ್ ಶುಲ್ಕ ಹೆಚ್ಚು ಹಾಗೂ ಪದೇ ಪದೇ ಸಂಚಾರ ಅವಧಿ ವಿಸ್ತರಿಸಬೇಕಾದ ಕಾರಣ ಮುಂಗಡ ಬುಕ್ಕಿಂಗ್ ಕೂಡ ಸಮಸ್ಯೆ ಆಗುತ್ತದೆ. ಕಳೆದ ಲೋಕಸಭೆ ಚುನಾವಣೆ ವೇಳೆ ಸಂದರ್ಭದಲ್ಲಿ ಈ ರೈಲುಗಳನ್ನು ನೈಋತ್ಯ ರೈಲ್ವೆ ವಲಯವು ನಿಯಮಿತ ರೈಲುಗಳಾಗಿ ಪರಿವರ್ತಿಸಿ ಸಂಚಾರ ಮಾಡುತ್ತಿದೆ. 

Tap to resize

Latest Videos

undefined

ಈ ರೈಲು ನಿಲ್ದಾಣದಿಂದ ದೇಶದ ಎಲ್ಲಾ ಭಾಗಕ್ಕೂ ಇದೆ ಟ್ರೈನ್, ದಿನದ 24 ಗಂಟೆಯೂ ಸೇವೆ ಲಭ್ಯ!

ಅದಾಗಲೇ ಈ ರೈಲುಗಳ ದರ ಹಿಂದಿನಂತೆ ಕಡಿಮೆಗೊಂಡಿದೆ. ಆದರೆ, ವಿಶೇಷ ರೈಲುಗಳಂತೆ ಇವುಗಳ ರೈಲ್ವೆ ಸಂಖ್ಯೆ ಈವರೆಗೂ '0' ಯಿಂದಲೇ ಪ್ರಾರಂಭವಾಗುತ್ತಿತ್ತು. ಇದ ರಿಂದ ಪ್ರಯಾಣಿಕರಲ್ಲಿ ಗೊಂದಲ ಉಂಟಾಗಿ ವಿಶೇಷ ರೈಲುಗಳಿಗೆ ದರ ಹೆಚ್ಚೆಂಬ ಕಾರಣದಿಂದ ಈ ರೈಲುಗಳಲ್ಲಿ ಬುಕ್ಕಿಂಗ್ಸ್ ಮಾಡುತ್ತಿರಲಿಲ್ಲ. ಅಲ್ಲದೆ ಮುಂಗಡ ಬುಕ್ಕಿಂಗ್‌ ಮಾಡಲೂ ಜನರು ಹಿಂದೇಟು ಹಾಕುತ್ತಿದ್ದರು. ಈ ಗೊಂದಲ ನಿವಾರಿಸಲು ಜನವರಿಯಿಂದ ರೈಲುಗಳ ಸಂಖ್ಯೆಯನ್ನು '5,6,7' ಸಂಖ್ಯೆಗೆ ಮಾರ್ಪಾಡು ಮಾಡಲಾಗುತ್ತದೆ. ಹೊಸ ನಿಯಮಿತ ರೈಲು ಸಂಖ್ಯೆಗಳನ್ನು ತಿಳಿಯಲು ಪ್ರಯಾಣಿಕರು https://swr. indian-railways.gov.in/view_detail. jsp?lang=0&dcd=8122&id=0,4,268 ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಬೆಂಗಳೂರು-ಮೈಸೂರು ರೈಲು ಕೆಲ ದಿನ 90 ನಿಮಿಷ ತಡವಾಗಿ ಸಂಚಾರ

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು-ಕೆಂಗೇರಿ ನಿಲ್ದಾಣಗಳ ನಡುವೆ ಅಗತ್ಯ ಸುರಕ್ಷತೆ ಮತ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಸಲುವಾಗಿ ಕೆಲ ದಿನಗಳ ಕಾಲ ಬೆಂಗಳೂರು-ಮೈಸೂರು ರೈಲು ತಡವಾಗಿ ಹೊರಡಲಿದೆ. ಎಸ್ ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್‌ ವಿಶೇಷ ರೈಲು (06270) 8. 22, 24, 27, 29, 31,  2025 2 3 2 5 0 2 ಸಮಯಕ್ಕಿಂತ 90 ನಿಮಿಷ ತಡವಾಗಿ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಡಲಿದೆ. ಇದೆ ರೈಲು (06270) ಡಿಸೆಂಬರ್ 26, 2024 ಮತ್ತು ಜನವರಿ 2 ರಂದು 30 ನಿಮಿಷ ತಡವಾಗಿ ಹೊರಡಲಿದೆ ಎಂದು ಪ್ರಕಟಣೆ ತಿಳಿಸಿದೆ.

click me!