ಇಂದಿನಿಂದ 100 ರು. ಗೆ 5 ಕೇಜಿ ತರಕಾರಿ ಲಭ್ಯ

By Web DeskFirst Published Oct 5, 2018, 9:27 AM IST
Highlights

ಹಾಪ್‌ಕಾಮ್ಸ್‌ ಅ.6ರಿಂದ 8ರ ವರೆಗೆ ಮೂರು ದಿನಗಳ ಕಾಲ ರಿಯಾಯಿತಿ ದರದಲ್ಲಿ ತರಕಾರಿ ಮಾರಾಟ ಮೇಳ ಆಯೋಜಿಸಿದೆ.

ಬೆಂಗಳೂರು :  ಬೆಲೆ ಕುಸಿತದಿಂದ ಸಂಕಷ್ಟದಲ್ಲಿರುವ ತರಕಾರಿ ಬೆಳೆಗಾರರಿಗೆ ಸಹಕರಿಸುವ ಉದ್ದೇಶದಿಂದ ಹಾಪ್‌ಕಾಮ್ಸ್‌ ಅ.6ರಿಂದ 8ರ ವರೆಗೆ ಮೂರು ದಿನಗಳ ಕಾಲ ರಿಯಾಯಿತಿ ದರದಲ್ಲಿ ತರಕಾರಿ ಮಾರಾಟ ಮೇಳ ಆಯೋಜಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಪ್‌ಕಾಮ್ಸ್‌ ಅಧ್ಯಕ್ಷ ಎ.ಎಸ್‌.ಚಂದ್ರೇಗೌಡ, ಮೇಳದಲ್ಲಿ ಕೇವಲ ನೂರು ರುಪಾಯಿಗೆ 5 ಕೆ.ಜಿ. ತರಕಾರಿ ಮಾರಾಟ ಮಾಡಲಾಗುತ್ತಿದೆ. ಮೇಳದಲ್ಲಿ 13 ವಿವಿಧ ಬಗೆಯ ತರಕಾರಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್ನಲ್ಲಿರುವ ಮೂರು ಮಳಿಗೆ ಸೇರಿದಂತೆ ನಗರದ 325 ಹಾಪ್‌ಕಾಮ್ಸ್‌ ಕೇಂದ್ರಗಳಲ್ಲಿ ರಿಯಾಯಿತಿ ಮಾರಾಟದ ವ್ಯವಸ್ಥೆ ಮಾಡಲಾಗಿದೆ. .100ಗೆ ಖರೀದಿ ಮಾಡಬೇಕೆಂಬ ನಿರ್ಬಂಧವಿಲ್ಲ. ಅರ್ಧ ಕೆ.ಜಿ. ತರಕಾರಿಯನ್ನೂ ಖರೀದಿ ಮಾಡಬಹುದು. ಜತೆಗೆ .10 ಒಂದು ಕೆ.ಜಿ ಟೊಮೆಟೋ, .15ಗೆ ಒಂದು ಕೆ.ಜಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ ಎಂದು ವಿವರಿಸಿದರು.

ಯಾವ-ಯಾವ ತರಕಾರಿ ಸಿಗಲಿದೆ?  ಬದನೇಕಾಯಿ, ಬೀಟ್‌ರೋಟ್‌, ನವಿಲುಕೋಸು, ಸೌತೇಕಾಯಿ, ಸೀಮೆಬದನೆಕಾಯಿ, ಎಲೆಕೋಸು, ಮೂಲಂಗಿ, ಸೋರೇಕಾಯಿ, ಪಡುವಲಕಾಯಿ, ಹಾಗಲಕಾಯಿ, ಬಜ್ಜಿಮೆಣಸಿಕಾಯಿ, ಸಾಂಬಾರು ಸೌತೇಕಾಯಿ ರಿಯಾಯಿತಿ ದರದಲ್ಲಿ ಸಿಗಲಿದೆ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರಗಳ ಹಾಪ್‌ಕಾಮ್ಸ್‌ಗಳಲ್ಲಿ ಮಾರಾಟ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್‌.ಪ್ರಸಾದ್‌ ಉಪಸ್ಥಿತರಿದ್ದರು.

click me!