IPS Promotion : ವರ್ಷಾಂತ್ಯಕ್ಕೆ ಮೇಜರ್ ಸರ್ಜರಿ.. 10 ಹಿರಿಯ ಅಧಿಕಾರಿಗಳಿಗೆ ಬಹುದೊಡ್ಡ ಗಿಫ್ಟ್!

By Suvarna NewsFirst Published Dec 31, 2021, 11:24 PM IST
Highlights

* ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಇಯರ್ ಎಂಡ್ ಗಿಫ್ಟ್ ಕೊಟ್ಟ ಸರ್ಕಾರ
*10 ಮಂದಿ ಐಪಿಎಸ್ ಅಧಿಕಾರಿಗಳಿಗೆ ಪ್ರಮೋಷನ್ ಸಿಕ್ಕಿದೆ
* ಆಯಕಟ್ಟಿನ ಸ್ಥಾನದಲ್ಲಿ ಪ್ರಮುಖ ಬದಲಾವಣೆ

* ಕಮಿಷನರ್ ವಿಚಾರದಲ್ಲಿ ಯಾವ ತೀರ್ಮಾನ ಇಲ್ಲ

ಬೆಂಗಳೂರು(ಡಿ. 31)  ವರ್ಷದ ಕೊನೆ ದಿನ ಪೊಲೀಸ್ (Karnataka Police) ಇಲಾಖೆಯಲ್ಲಿ ಭಾರೀ ಬದಲಾವಣೆಯಾಗಲಿದೆ ಎನ್ನುವ ಸುದ್ದಿ ನಿಜವಾಗಿದ್ದು ಸರ್ಕಾರ ಅಧಿಕರಿಗಳಿಗೆ ಬಂಪರ್‌ ಕೊಡುಗೆ ಕೊಟ್ಟಿದೆ.

10 ಮಂದಿ ಐಪಿಎಸ್ ಅಧಿಕಾರಿಗಳಿಗೆ ಪ್ರಮೋಷನ್ ಸಿಕ್ಕಿದೆ 10 ಮಂದಿ ಅಧಿಕಾರಿಗಳನ್ನು  ಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.  
* ಎಸ್ ಮುರುಗನ್ - ಎಡಿಜಿಪಿ, ಸಂವಹನ ಹಾಗೂ ಆಧುನಿಕರಣ ವಿಭಾಗ
*  ಶರತ್ ಚಂದ್ರ- ಎಡಿಜಿಪಿ , ಸಿಐಡಿ
*  ನಂಜುಂಡ ಸ್ವಾಮಿ- ಎಡಿಜಿಪಿ , ಕೆಎಸ್ಆರ್ಪಿ ಮತ್ತು ಸಿವಿಲ್ ಡಿಫೆನ್ಸ್
*  ಸೋಮೆಂದು ಮುಖರ್ಜಿ, ಐಜಿಪಿ ರಾಜ್ಯ ಗುಪ್ತಚರ ಇಲಾಖೆ
*  ರವಿ.ಎಸ್ - ಐಜಿಪಿ ಕೆಎಸ್ಆರ್ಪಿ
*  ವಿಫುಲ್ ಕುಮಾರ್- ಐಜಿಪಿ, ಅಂತರಿಕ ಭದ್ರತಾ ವಿಭಾಗ
*  ಸುಬ್ರಹ್ಮಣ್ಯ ರಾವ್ - ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ, ಪೂರ್ವ ವಿಭಾಗ
*  ಲಾಬೂರಾಮ್, ಐಜಿಪಿ ಹುಬ್ಬಳ್ಳಿ ಧಾರವಾಡ ಕಮಿಷನರ್ ಆಗಿ ಮುಂದುವರಿಕೆ
* ಸಂದೀಪ್ ಪಾಟೀಲ್ - ಹೆಚ್ಚುವರಿ ಪೊಲೀಸ್ ಆಯುಕ್ತ ಪಶ್ಚಿಮ ವಿಭಾಗ ಬೆಂಗಳೂರು
*  ಪಿ.ಎಸ್.ಹರ್ಷ- ವಾರ್ತಾ ಇಲಾಖೆ ಆಯುಕ್ತರಾಗಿ ಮುಂದುವರಿಕೆ
* ವಿಕಾಸ್ ಕುಮಾರ್ ವಿಕಾಸ್- ಮೈಸೂರು ಸೆಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಎಂಡಿ
* ರಮಣ್ ಗುಪ್ತ- ಡಿಐಜಿ ಬೆಂಗಳೂರು ಸಿಸಿಬಿ ಜಂಟಿ‌ ಆಯುಕ್ತ
*  ಡಾ.ಕೆ.ತ್ಯಾಗರಾಜನ್- ಡಿಐಜಿ ನೇಮಕಾತಿ ವಿಭಾಗ ಬೆಂಗಳೂರು
* ಬೋರಲಿಂಗಯ್ಯ- ಬೆಳಗಾವಿ ಕಮಿಷನರ್ 

ಹೊಸ ಪೊಲೀಸ್ ಆಯುಕ್ತ?  ಹೊಸ ಪೊಲೀಸ್ ಕಮಿಷನರ್ ನೇಮಕವಾಗಲಿದೆ ಎನ್ನುವ ಸುದ್ದಿಯೂ ಹರಿದಾಡಿತ್ತು ಸರ್ಕಾರ ಅಂತಿಮ ಮುದ್ರೆ ನೀಡಿಲ್ಲ ಕನ್ನಡಿದ ಐಪಿಎಸ್ ಅಧಿಕಾರಿಗೆ ಒಲಿದ ಬೆಂಗಳೂರು ಪೊಲೀಸ್ ಕಮಿಷನರ್ (Police commissioner) ಹುದ್ದೆ ಒಲಿಯುವುದು ಪಕ್ಕಾ ಆಗಿದೆ.  ಬಿ.ದಯಾನಂದ್ (B Dayanand)  ಹೆಸರು ಬೆಂಗಳೂರು ಪೊಲೀಸ್ ಆಯುಕ್ತರ ಹುದ್ದೆಗೆ ಬಹುತೇಕ ಫೈನಲ್ ಆಗಿದ್ದು ಅಧಿಕೃತ ಆದೇಶ ಹೊರ ಬೀಳುವುದಷ್ಟೇ ಬಾಕಿ ಇದೆ.

ಹಾವೇರಿ (Haveri) ಜಿಲ್ಲೆಯ ರಾಣೆಬೆನ್ನೂರು ಮೂಲದ ಬಿ.ದಯಾನಂದ್ ಸದ್ಯ ಗುಪ್ತಚರ ಇಲಾಖೆ ಎಡಿಜಿಪಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಮಿಷನರ್ ಹುದ್ದೆಗೆ ಎಡಿಜಿಪಿ ದರ್ಜೆ‌ ಅಧಿಕಾರಿಗಳಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ.  ಉಮೇಶ್ ಕುಮಾರ್,  ಅಲೋಕ್ ಕುಮಾರ್ ,  ಬಿ ದಯಾನಂದ್ ನಡುವೆ ಪೈಪೋಟಿ ಇದೆ. ಪರೋಕ್ಷವಾಗಿ ಸಿಎಂ ಬೊಮ್ಮಾಯಿ ಮೇಲೆಯೂ ಅಧಿಕಾರಿಗಳು ಒತ್ತಡ ತಂದಿದ್ದಾರೆ.  ಸಂಘಪರಿವಾರದ ಮೂಲಕ ಸಿಎಂ ಮೇಲೆ‌ ಒತ್ತಡ ಹಾಕಿಸಿದ್ದಾರೆ ಎನ್ನುವ ವದಂತಿಯೂ ಜೋರಾಗಿ ಹಬ್ಬಿದೆ.

Bollywood Drugs: ಹೀಗೂ ಆಗುತ್ತದೆ...ನಕಲಿ NCB ಅಧಿಕಾರಿಗಳ ಕಾಟಕ್ಕೆ ಪ್ರಾಣ ತೆತ್ತ ನಟಿ!

ಹಿರಿಯ ಅಧಿಕಾರಿಗಳಾದ ಅಮೃತ್ ಪೌಲ್ ,ಪ್ರತಾಪ್ ರೆಡ್ಡಿ, ಹರಿಶೇಖರನ್ ಕೂಡ ರೇಸ್ ನಲ್ಲಿ ಇದ್ದಾರೆ.  ಪೊಲೀಸ್ ಕಮಿಷನರ್ ಆಗಿರುವ ಕಮಲ್‌ ಪಂತ್ ವರ್ಗಾವಣೆಯಾಗುವುದು ಪಕ್ಕಾ ಆಗಿದ್ದು ಆ ಸ್ಥಾನಕ್ಕೆ ಕನ್ನಡಿಗರೇ ನೇಮಕವಾಗಲಿದ್ದಾರೆ ಎನ್ನಲಾಗಿದೆ.

ಡ್ರಗ್ಸ್ ವಿರುದ್ಧ ನಿರಂತರ ಕಾರ್ಯಾಚರಣೆ:  ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಒಂದೇ ದಿನ ಅಂತರ್ ರಾಜ್ಯ ಹಾಗೂ ವಿದೇಶಿ ಪ್ರಜೆ ಸೇರಿ 6 ಮಂದಿ ಡ್ರಗ್ ಪೆಡ್ಲರ್ಸ್ ಅರೆಸ್ಟ್ ಮಾಡಲಾಗಿತ್ತು. ನ್ಯೂ ಇಯರ್ ಗೆ ನಶೆಯ ಮತ್ತೆರಿಸಲು ಸಜ್ಜಾಗಿದ್ದ ಗ್ಯಾಂಗ್ ಅಂದರ್ ನ್ನು ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ತಂಡ ಬಂಧಿಸಿತ್ತು.

ಕೋಣನಕುಂಟೆ ಕೆ.ಎಸ್.ಲೇಔಟ್ ಹಾಗೂ ಗಿರಿನಗರ ಪೊಲೀಸರನ್ನೊಳಂಡ ಸ್ಪೆಷಲ್ ಟೀಂ  ಮಾದಕ ವಸ್ತು ದಂಧೆಕೋರರ ಮೇಲೆ ದಾಳಿ ಮಾಡಿದೆ. ದಕ್ಷಿಣ ವಿಭಾಗದಲ್ಲಿ ಡ್ರಗ್ ಪೆಡ್ಲಿಂಗ್ ಮಾಡಲು ಯತ್ನಿಸಿದ್ದ ಮೂವರು ಅಂತರಾಜ್ಯ ಪೆಡ್ಲರ್ ಹಾಗೂ ಮೂವರು ವಿದೇಶಿ ಪ್ರಜೆಗಳ ಬಂಧನ ಮಾಡಲಾಗಿದೆ. ನ್ಯೂ ಇಯರ್ ಹಿನ್ನಲೆ ಬೆಂಗಳೂರಲ್ಲಿ ಮಾದಕವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇರೋದು ವಿಚಾರಣೆ ವೇಳೆ ಬೆಳಕಿಗೆ ಬಂದಿತ್ತು.

 

click me!