ಕರ್ನಾಟಕದಲ್ಲಿ ಮತ್ತೊಂದು ಕೊರೋನಾ ವೈರಸ್ ಪಾಸಿಟಿವ್ ಪತ್ತೆಯಾಗಿದ್ದು, ಈ ಮೂಲಕ ಕರುನಾಡಲ್ಲಿ ಕೊರೋನಾ ಸೋಂಕು ತಗಲಿದವರ ಸಂಖ್ಯೆ 8ಕ್ಕೆ ಏರಿಕೆಯಾದಂತಾಗಿದೆ.
ಬೆಂಗಳೂರು, [ಮಾ.16]: ಕರ್ನಾಟಕದಲ್ಲಿ ಇಂದು [ಸೋಮವಾರ] ಮತ್ತೊಂದು ಕೊರೋನಾ ವೈರಸ್ ಕೇಸ್ ಪತ್ತೆಯಾಗಿದೆ. ಇದನ್ನು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಖಚಿತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿರುವ ಡಾ.ಕೆ.ಸುಧಾಕರ್, ಅವರು ಅಮೆರಿಕಾದಿಂದ ಬಂದಿರುವ ವ್ಯಕ್ತಿಗೆ ಕೊರೋನಾ ವೈರಸ್ ಪಾಸಿಟಿವ್ ಇರುವುದು ಕಂಡುಬಂದಿದೆ ಎಂದು ಮಾಹಿತಿ ನೀಡಿದರು.
ಮುಗಿಯದ ಕರೋನಾ ಕಾಟ, ಏನು ಹೇಳೋದು ದಿಶಾ ಮೈಮಾಟ..ಮಾ. 16 ರ ಟಾಪ್ 10 ಸುದ್ದಿಗಳು
ಅಮೆರಿಕಾದಿಂದ ಬಂದಿದ್ದ ವ್ಯಕ್ತಿಯ ಸಹೋದ್ಯೋಗಿಗೂ ಕೊರೋನಾ ಇರುವುದು ಕನ್ಫರ್ಮ್ ಆಗಿದ್ದು, ಈತನ ಜತೆಗೆ ಸೆಕೆಂಡರಿ ಕಾಂಟ್ಯಾಕ್ಟ್ ಇದ್ದವರಿಗೆ ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದರು.
ಅಮೆರಿಕಾದಿಂದ ಬಂದಿದ್ದ ಇಬ್ಬರು ಬಂದಿದ್ದವರನ್ನ ಮೊದಲು ಪ್ರತ್ಯೇಕವಾಗಿ ಇರಿಸಿ ಅಬ್ಸರ್ವೇಷನ್ ನಲ್ಲಿ ಇಡಲಾಗಿತ್ತು. ನಂತರ ಆಸ್ಪತ್ರೆಗೆ ಕರೆಯಿಸಿ ಐಸೋಲೇಷನ್ ಮಾಡಲಾಗಿತ್ತು ಎಂದರು. ಆದ್ರೆ, ವ್ಯಕ್ತಿ ಯಾರು? ಏನು? ಎನ್ನುವುದನ್ನ ಮಾತ್ರ ತಿಳಿಸಿಲ್ಲ.
ಮೊದಲು ಸಾವನ್ನಪ್ಪಿದ್ದ ಕಲಬುರಗಿಯ ವೃದ್ಧನ ಪುತ್ರಿಗೆ ಕೊರೋನಾ ಇರುವುದು ಭಾನುವಾರ ದೃಢವಾಗಿತ್ತು. ಇದೀಗ ಸೋಮವಾರ ಮತ್ತೊಂದು ಕೇಸ್ ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾದಂತಾಯ್ತು.