ರೈತರು ತಿರುಗಿಬಿಳ್ತಿದ್ದಂತೆ ಉಲ್ಟಾ ಹೊಡೆದ ಸಚಿವ;10 ಎಕರೆ ಮಾತ್ರ ವಕ್ಫ್ ಆಸ್ತಿ ಉಳಿದಿದ್ದೆಲ್ಲ ರೈತರ ಜಮೀನು ಎಂದ ಎಂಬಿ ಪಾಟೀಲ್

By Ravi Janekal  |  First Published Oct 27, 2024, 1:56 PM IST

ರೈತರ ಕೃಷಿ ಭೂಮಿಯನ್ನ ಸದ್ದಿಲ್ಲದೆ ವಕ್ಫ್ ಮಂಡಳಿಗೆ ಸೇರಿಸಲು ಮುಂದಾಗಿದ್ಯಾ ಸರ್ಕಾರ? ವಿಜಯಪುರ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಭಾರೀ ವಿವಾದಕ್ಕೆ ಕಾರಣವಾಗಿದೆ. ಅಷ್ಟಕ್ಕೂ ವಿಜಯಪುರದಲ್ಲಿ ವಕ್ಫ್ ಆಸ್ತಿ ಎಷ್ಟಿದೆ ಗೊತ್ತ?


ವಿಜಯಪುರ (ಅ.27):  ವಿಜಯಪುರದಲ್ಲಿ ವಕ್ಫ್ ಆಸ್ತಿ ವಿವಾದ ದೇಶಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿದೆ. ರೈತರ ಜಮೀನನ್ನು ವಕ್ಫ್ ಮಂಡಳಿಗೆ ಸೇರಿಸುವ ಹುನ್ನಾರಕ್ಕೆ ಸರ್ಕಾರ ಕೈಹಾಕಿರುವ ಆರೋಪ ಕೇಳಿಬಂದಿದೆ. ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಹೆಸರಿರುವುದು ರೈತರು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಇದರ ಬಿಜೆಪಿ ರೈತರೊಡಗೂಡಿ ಕಾನೂನು ಹೋರಾಟಕ್ಕೆ ಮುಂದಾಗಿರುವ ಬೆನ್ನಲ್ಲೇ ಇದೀಗ ಸಚಿವ ಎಂಬಿ ಪಾಟೀಲ್ ಉಲ್ಟಾ ಹೊಡೆದಿದ್ದಾರೆ.

ರೈತರ ಪಹಣಿಯಲ್ಲಿ ವಕ್ಫ್ ಹೆಸರು ವಿವಾದ ಸಂಬಂಧ ಇಂದು ಸುದ್ದಿಗೋಷ್ಟಿ ನಡೆಸಿದ ಸಚಿವ ಎಂಬಿ ಪಾಟೀಲ್,  ವಕ್ಪ್ ‌ಆಸ್ತಿಗಳ ಬಗ್ಗೆ ವಿಜಯಪುರ ಜಿಲ್ಲೆಯಲ್ಲಿ ಬಹಳಷ್ಟು ಗೊಂದಲ ಸೃಷ್ಟಿ ಮಾಡಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದೆ. ಹೊನವಾಡ ಗ್ರಾಮದಲ್ಲಿ 1200 ಎಕರೆ ರೈತರ ಭೂಮಿ ವಕ್ಫ್ ಆಗಿದೆ ಎಂದು ಸುದ್ದಿ ಹಬ್ಬಿಸಲಾಗಿದೆ. ಹೊನವಾಡದಲ್ಲಿ ಯಾವುದೇ ರೈತರಿಗೆ ನೋಟಿಸ್ ನೀಡಿಲ್ಲ ಎಂದು ಸಚಿವ ಎಂಬಿ ಪಾಟೀಲ್ ಸ್ಪಷ್ಟನೆ ನೀಡಿದರು.

Tap to resize

Latest Videos

undefined

ರೈತರ ಪಹಣಿಯಲ್ಲಿ ವಕ್ಫ್ ಹೆಸರು: ಸಚಿವ ಜಮೀರ್, ಎಂಬಿ ಪಾಟೀಲ್ ವಿರುದ್ಧ ಯತ್ನಾಳ್ ವಾಗ್ದಾಳಿ

ಜಿಲ್ಲೆಯ ಯಾವುದೇ ರೈತರಿಗೆ ನೋಟಿಸ್ ನೀಡಿಲ್ಲ. ಗೆಜೆಟ್‌ನಲ್ಲಿ ಗೊಂದಲ ಉಂಟಾಗಿ ಈ ರೀತಿಯಾಗಿದೆ. 10 ಎಕರೆ ಮಾತ್ರ ವಕ್ಫ್  ಹೊಸವಾಡದಲ್ಲಿದೆ. 124 ರೈತರಿಗೆ ನೋಟಿಸ್ ನೀಡಲಾಗಿದೆ. ಚಡಚಣ -3, ಇಂಡಿ ತಹಸೀಲ್ದಾರರು ನೋಟಿಸ್ ನೀಡದೆ ಸರ್ವೇ ನಂಬರ್ 41 ರಲ್ಲಿ ಇಂದೀಕರಣ ಮಾಡಿದ್ದಾರೆ. ಎಸಿ ಅವರು ಈ ಬಗ್ಗೆ ತನಿಖೆ ಮಾಡುತ್ತಾರೆ ಎಂದರು.

ವಿಜಯಪುರ ಜಿಲ್ಲೆಯಲ್ಲಿ 1974, 1978 ಮತ್ತು 2016ರಲ್ಲಿ ವಕ್ಫ್ ಆಸ್ತಿಗಳ ಅಧಿಸೂಚನೆ ಹೊರಬಿದ್ದಿದೆ. ವಕ್ಫ್ ಆಸ್ತಿ ಇರುವುದು ವಿಜಯಪುರನಗರದ ಮಹಾಲಬಾಗಾಯತದಲ್ಲಿ. ಆದ್ರೆ 1974ರ ಗೆಜೆಟ್‌ನಲ್ಲಿ ಮಹಾಲಬಾಗಾಯತದ ಪಕ್ಕ ಬ್ರ್ಯಾಕೆಟ್‌ನಲ್ಲಿ ಹೊನವಾಡ ಎಂದು ಬರೆದು ಬಿಟ್ಟಿದ್ದಾರೆ. ಈ ಆಸ್ತಿ ರೈತರಿಗೆ ಸೇರಿದ್ದು ಅಂತ ಎಂಬಿಪಿ ಸ್ಪಷ್ಟನೆ ನೀಡಿದ್ದಾರೆ.

ವಿಜಯಪುರದಲ್ಲಿ 15000 ಎಕರೆ ಮೇಲೆ ವಕ್ಫ್ ಕಣ್ಣು! ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು!

ಜಿಲ್ಲೆಯಲ್ಲಿ ಒಟ್ಟು ವಕ್ಫ್ ಆಸ್ತಿ ಎಷ್ಟು?

ವಿಜಯಪುರದಲ್ಲಿ ಒಟ್ಟು 14201 ಎಕರೆ  ವಕ್ಫ ಆಸ್ತಿ ಇದೆ. 12083 ಎಕರೆಯಲ್ಲಿ 70% ಮುಸ್ಲಿಂ ಪ್ರಾಪರ್ಟಿ ಇದೆ. ಹಿಂದೂಗಳಿಗೆ 30% ಜಾಗ ಮಾರಾಟ ಮಾಡಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. 1974 ರ ಮೊದಲು ಏನಾದರೂ ಬದಲಾಗಿದೆ ಎಂದು ಅವರು ಚೆಕ್ ಮಾಡುತ್ತಾರೆ. ಹಿಂದಿನಿಂದಲೂ ಎಲ್ಲವೂ ಮುಸ್ಲಿಂ ಆಸ್ತಿಯಾಗಿದೆ. 12083 ಎಕರೆ 70% ಮುಸ್ಲಿಂ ಆಸ್ತಿಯಾಗಿದೆ. ಯರಗಲ್ ಗ್ರಾಮದಲ್ಲಿ ಸೇರ್ವೆ ನಂಬರ್ 138 ನಲ್ಲಿ 13 ಎಕರೆ 1974 ರಲ್ಲಿ ಗೆಜೆಟ್ ನೋಟಿಪಿಕೇಷನ್ ಮಾಡಲಾಗಿದೆ. ಇದನ್ನ ವಕ್ಪ್ ಮಂಡಳಿಯವರು ರೆಟ್ಟಿಫಿಕೇಷನ್ ಮಾಡುತ್ತಿದ್ದಾರೆ. 1029 ಬದಲಾಗಿ 1020 ಆಗಿದೆ. ಹೀಗಾಗಿ  ಗುರುಲಿಂಗ ವಿರಕ್ತಮಠ ಮಠದ ಆಸ್ತಿ ಬಗ್ಗೆ ತಪ್ಪಾಗಿದೆ.

click me!