ಸ್ಪೋರ್ಟ್ಸ್ ಕೋಟಾದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್‌ ಆಗಿ

By Suvarna News  |  First Published Jun 30, 2021, 3:34 PM IST

ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್(ಐಟಿಬಿಪಿಎಫ್) ಖಾಲಿ ಇರುವ ಕಾನ್ಸ್‌ಟೆಬಲ್ ಹುದ್ದೆಗಳಿಗೆ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಸ್ಪೋರ್ಟ್ಸ್ ಕೋಟಾದಲ್ಲಿ ಈ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 2ರವರೆಗೂ ಕಾಲಾವಕಾಶವಿದೆ.


ಗಡಿ ಭದ್ರತಾ ಪಡೆಯಲ್ಲಿ ಸೇರಿ ಸೇವೆ ಸಲ್ಲಿಸೋ ಕನಸ್ಸಿದ್ಯಾ? ಯೋಧರಂತೆ ಸಮವಸ್ತ್ರ ಧರಿಸಿ ಭದ್ರತಾ ಪಡೆಯಲ್ಲಿ ಗುರುತಿಸಿಕೊಳ್ಳೋ ಆಸೆ ಇದ್ಯಾ? ಅದರಲ್ಲೂ ನೀವು ಕ್ರೀಡಾಪಟುವಾಗಿದ್ದು, ಬಾರ್ಡರ್ ಪೊಲೀಸ್ ಆಗಲು ಬಯಸುತ್ತಿದ್ದೀರಾ? ನಿಮಗೆ ಈಗ ಸುವರ್ಣ ಅವಕಾಶವೊಂದು ಒದಗಿ ಬಂದಿದೆ. ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ ಸೇರುವ ಭಾಗ್ಯ ಬಂದಿದೆ. 

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ, ಖಾಲಿಯಿರುವ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಐಟಿಬಿಪಿಯ ಅಧಿಕೃತ ವೆಬ್ಸೈಟ್ recruitment.itbpolice.nic.in.ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ನೋಂದಣಿ ಪ್ರಕ್ರಿಯೆಯು ಜುಲೈ 5 ರಿಂದ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 2, 2021 ರಂದು ಕೊನೆಗೊಳ್ಳುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Tap to resize

Latest Videos

undefined

ಈ ನೇಮಕಾತಿ ಡ್ರೈವ್‌ನಲ್ಲಿ ಕ್ರೀಡಾ ಕೋಟಾದಡಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯಲ್ಲಿ ತಾತ್ಕಾಲಿಕ ಆಧಾರದ ಮೇಲೆ ‘ಸಿ’ ಗುಂಪಿನಲ್ಲಿರುವ 65 ಕಾನ್‌ಸ್ಟೇಬಲ್ (ಜನರಲ್ ಡ್ಯೂಟಿ) ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ನಾನ್-ಗೆಜೆಟೆಡ್ ಹಾಗೂ ನಾನ್ಮಿನಿಸ್ಟರಿಯಲ್  ಆಗಿರುವ ಸಿ ಗ್ರೂಪ್‌ನಲ್ಲಿ ಮಹಿಳೆ ಹಾಗೂ ಪುರುಷ ಅಭ್ಯರ್ಥಿಗಳನ್ನ ನೇಮಕ ಮಾಡಿಕೊಳ್ಳಲಾಗುವುದು. 

ಆರ್ಥಿಕ ಹಿಂಜರಿತ ಉಂಟಾದ್ರೆ, ಯಾವೆಲ್ಲ ಉದ್ಯೋಗಳು ಉಳಿಯಲಿವೆ?

ರೆಸ್ಲಿಂಗ್, ಕಬಡ್ಡಿ, ಕರಾಟೆ, ಆರ್ಚರಿ, ವುಶು, ಟೇಕ್ವೆಂಡೊ, ಜುಡೋ, ಜಿಮ್ನಾಸ್ಟಿಕ್ಸ್, ಸ್ಪೋರ್ಟ್ಸ್ ಶೂಟಿಂಗ್, ಸ್ಕಿ, ಬಾಕ್ಸಿಂಗ್ ಹಾಗೂ ಐಸ್ ಹಾಕಿ - ಇತರೆ ಕ್ರೀಡಾ ವಿಭಾಗಗಳಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳನ್ನ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು. ಜಿಮ್ನಾಸ್ಟಿಕ್ ಹೊರತುಪಡಿಸಿ ಉಳಿದೆಲ್ಲಾ ಕ್ರೀಡಾ ವಿಭಾಗಗಳಿಂದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಜಿಮ್ನಾಸ್ಟಿಕ್ ಕ್ರೀಡಾ ಕೋಟಾದಡಿ ಕೇವಲ ಪುರುಷ ಅಭ್ಯರ್ಥಿಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವಿದೆ. 

ಆಯ್ಕೆಯಾದ ಅಭ್ಯರ್ಥಿಗಳಿಗೆ ೭ನೇ ವೇತನ ಆಯೋಗದ ಪ್ರಕಾರ ಲೆವೆಲ್- ೩ನೇ ವೇತನ ಶ್ರೇಣಿಯಡಿ 21,700 ರಿಂದ 69100 ರೂಪಾಯಿ ವೇತನ ಸಿಗಲಿವೆ. ಇನ್ನಿತರೆ ಎಲ್ಲಾ ಭತ್ಯೆಗಳು ಕೂಡ ಅನ್ವಯವಾಗಲಿವೆ. 

10ನೇ ತರಗತಿ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ತತ್ಸಮಾನ ವಿದ್ಯಾಭ್ಯಾಸ ಆಗಿರಬೇಕು. ಅಭ್ಯರ್ಥಿಯ ವಯೋಮಿತಿ 18 ವರ್ಷದಿಂದ 23 ವರ್ಷದೊಳಗೆ ಇರಬೇಕು. ಅಭ್ಯರ್ಥಿಯ ವಯೋಮಿತಿ ದೃಢೀಕರಣಕ್ಕಾಗಿ ಮೆಟ್ರಿಕ್ಯುಲೇಷನ್ ಅಥವಾ 10ನೇ ತರಗತಿ ಸರ್ಟಿಫಿಕೇಟ್ ಅನ್ನು ಕಡ್ಡಾಯವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. 

NCC ಸ್ಪೆಷಲ್ ಎಂಟ್ರಿ ಸ್ಕೀಮ್: ಸೇನೆ ಸೇರಲು ಸುವರ್ಣ ಅವಕಾಶ, ಅರ್ಜಿ ಹಾಕಿ

ಕ್ರೀಡಾಪಟುಗಳು ಯಾವ ರೀತಿಯ ಅರ್ಹತೆಯನ್ನ ಹೊಂದಿರಬೇಕು ಅಂತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.  ವೈಯಕ್ತಿಕ ಈವೆಂಟ್ (ಅಂತರರಾಷ್ಟ್ರೀಯ / ರಾಷ್ಟ್ರೀಯ) - ಕಳೆದ 2 ವರ್ಷಗಳಲ್ಲಿ ಭಾರತೀಯ ತಂಡದ ಸದಸ್ಯರಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ ಮಾನ್ಯತೆ ಪಡೆದ ಯಾವುದೇ ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿರಬೇಕು ಅಥವಾ ಪದಕ ಗೆದ್ದ ಕ್ರೀಡಾಪಟು ಆಗಿರಬೇಕು. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸ್ಪೋರ್ಟ್ಸ್ ಫೆಡರೇಶನ್ ನಡೆಸುವ ಕ್ರೀಡೆಗಳಲ್ಲಿ ಪಾಲ್ಗೊಂಡವರು ಅರ್ಜಿ ಸಲ್ಲಿಸಬಹುದು. 

ಟೀಮ್ಈವೆಂಟ್(ಅಂತರರಾಷ್ಟ್ರೀಯ / ರಾಷ್ಟ್ರೀಯ) -ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥವಾ ಆಯಾ ಒಕ್ಕೂಟದ ಯಾವುದೇ ಮಾನ್ಯತೆ ಪಡೆದ ಕ್ರೀಡಾ ಸಭೆ ಅಥವಾ ಸಚಿವಾಲಯ ನಡೆಸುವ ಕ್ರೀಡಾಕೂಟಗಳಲ್ಲಿ ಯಾವುದೇ ತಂಡವನ್ನ ಪ್ರತನಿಧಿಸಿದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. 

ಆಯ್ಕೆಯಾದ ಅಭ್ಯರ್ಥಿಗಳು, ನೇಮಕಾತಿ ಪ್ರಕ್ರಿಯೆಯಲ್ಲಿ ದೈಹಿಕ ಗುಣಮಟ್ಟ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಯ ವಿವರವುಳ್ಳ ದಾಖಲಾತಿ ಸಮೇತ ಪಾಲ್ಗೊಳ್ಳಬೇಕು. ಎಲ್ಲ ಕೆಟಗರಿಯಲ್ಲಿ  ಕನಿಷ್ಟ ೮ ಅಂಕಗಳನ್ನ ಪಡೆದವರು ಅರ್ಹರಾಗಿರುತ್ತಾರೆ.

SSLC ಪಾಸಾದ ಹೆಣ್ಣುಮಕ್ಕಳಿಗೆ ಮಿಲಿಟರಿ ಸೇರಲು ಅವಕಾಶ, ಅರ್ಜಿ ಹಾಕಿ

ಸಾಮಾನ್ಯ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಪುರುಷ ಅಭ್ಯರ್ಥಿಗಳು ಕ್ರೀಡಾ ಕೋಟಾದಡಿ ಕಾನ್ಸ್ಟೇಬಲ್ (ಜನರಲ್ ಡ್ಯೂಟಿ) ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಐಟಿಬಿಪಿಯ ನೇಮಕಾತಿ ವೆಬ್ಸೈಟ್ ಮೂಲಕ 100 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.

click me!