ಶಿಕ್ಷಕರ ಅರ್ಹತಾ ಪರೀಕ್ಷೆ (TET) ಪಾಸಾದವರಿಗೆ ಗುಡ್‌ ನ್ಯೂಸ್..!

By Suvarna News  |  First Published Oct 26, 2020, 2:43 PM IST

ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಉತ್ತೀರ್ಣರಾದವರಿಗೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು ಭರ್ಜರಿ ಸಿಹಿಸುದ್ದಿ ಇಲ್ಲಿದೆ.


ಬೆಂಗಳೂರು, (ಅ.26) : ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪ್ರಮಾಣ ಪತ್ರದ ಮಾನ್ಯತೆಯ ಅವಧಿಯನ್ನು ನಿರ್ದಿಷ್ಟ ವರ್ಷಗಳ ಬದಲಾಗಿ ಜೀವಿತಾವಧಿಯವರೆಗೆ ವಿಸ್ತರಿಸಿದೆ.

ಶಿಕ್ಷಕರಾಗಲು ಟಿಇಟಿಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯ ಮಾಡಲಾಗಿದ್ದು, ಒಮ್ಮೆ ಉತ್ತೀರ್ಣರಾದರೆ 7 ವರ್ಷಗಳವರೆಗೆ ಮಾತ್ರ ಮಾನ್ಯತೆ ಇರುತ್ತಿತ್ತು. ಆದರೆ ಇತ್ತೀಚೆಗೆ ನಡೆದ ಎನ್ ಸಿಟಿ 50ನೇ ಸಾಮನ್ಯ ಸಭೆಯಲ್ಲಿ ಟಿಇಟಿ ಪ್ರಮಾಣ ಪತ್ರದ ಮಾನ್ಯತೆಯ ಅವಧಿಯನ್ನು ಜೀವಿತಾವಧಿಯವರೆಗೆ ವಿಸ್ತರಿಸಿದೆ.

Tap to resize

Latest Videos

undefined

ಜಾಬ್ಸ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ಇತ್ತೀಚಿಗೆ ಟಿಇಟಿ ಪರೀಕ್ಷೆ ನಡೆದಿದ್ದು, 2 ಲಕ್ಷಕ್ಕೂ ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಹೊಸ ನಿಯಮ ಈ ವರ್ಷದಿಂದಲೇ ಅನ್ವಯವಾಗುವ ಸಾಧ್ಯತೆ ಇದೆ.

click me!