ಎಕ್ಸಾಮ್‌ ಸೆಂಟರ್‌ನಲ್ಲಿ ಗೊಂದಲ: ಎಸ್‌ಡಿಎ ಪರೀಕ್ಷೆಯಿಂದ ವಂಚಿತರಾದ ಹತ್ತಾರು ಅಭ್ಯರ್ಥಿಗಳು

Suvarna News   | Asianet News
Published : Sep 19, 2021, 12:10 PM ISTUpdated : Sep 19, 2021, 12:21 PM IST
ಎಕ್ಸಾಮ್‌ ಸೆಂಟರ್‌ನಲ್ಲಿ ಗೊಂದಲ: ಎಸ್‌ಡಿಎ ಪರೀಕ್ಷೆಯಿಂದ ವಂಚಿತರಾದ ಹತ್ತಾರು ಅಭ್ಯರ್ಥಿಗಳು

ಸಾರಾಂಶ

*   ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದ ಘಟನೆ *   ಕೇಂದ್ರದ ಹೆಸರಿನಲ್ಲಿ ಗೊಂದಲ *   ಪರೀಕ್ಷೆಯಿಂದ ವಂಚಿತರಾದ 30ಕ್ಕೂ ಹೆಚ್ಚು ಅಭ್ಯರ್ಥಿಗಳು   

ವಿಜಯನಗರ(ಸೆ.19): ಎಸ್‌ಡಿಎ ಪರೀಕ್ಷಾ ಕೇಂದ್ರದಲ್ಲಿ ಗೊಂದಲ ಉಂಟಾದ ಹಿನ್ನಲೆಯಲ್ಲಿ ಮೂವತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. 

ಪರೀಕ್ಷಾ ಕೇಂದ್ರಕ್ಕೆ ಹತ್ತು ನಿಮಿಷ ತವಡವಾಗಿ ಬಂದಿದ್ದಕ್ಕೆ ಅಭ್ಯರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ವಿಜಯನಗರ ಕಾಲೇಜು ಬಳ್ಳಾರಿ ಜಿಲ್ಲೆ ಎಂದು ಕೇಂದ್ರದ ಹೆಸರನ್ನು ಬರೆಯಲಾಗಿದೆ. ಆದರೆ ವಿಜಯನಗರ ಕಾಲೇಜು ಹೊಸಪೇಟೆ ಎಂದಾಗಬೇಕಿತ್ತು. 

ಇಂದು 54 ಕೇಂದ್ರಗಳಲ್ಲಿ ಎಸ್‌ಡಿಎ ಪರೀಕ್ಷೆ

ಕೇಂದ್ರದ ಹೆಸರು ಗೊಂದಲವಾದ ಹಿನ್ನೆಲೆಯಲ್ಲಿ ಬಳ್ಳಾರಿಯಿಂದ ಹೊಸಪೇಟೆಗೆ ಬರಲು ಹತ್ತು ನಿಮಿಷ ವಿಳಂಬವಾಗಿದೆ. ಹೀಗಾಗಿ ಮೂವತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ವಂಚಿತರಾಗಿದ್ದಾರೆ. ನಮಗೆ ನ್ಯಾಯ ಒದಗಿಸಿಕೊಡಿ ಅಂತ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿ ಅಭ್ಯರ್ಥಿಗಳು ಅಂಗಲಾಚಿ ಬೇಡಿಕೊಂಡಿದ್ದಾರೆ. 
 

PREV
click me!

Recommended Stories

ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?
ಸೋಶಿಯಲ್ ಮೀಡಿಯಾದಿಂದ ದೂರವಿದ್ದು 10 ಸರ್ಕಾರಿ ನೌಕರಿ ಪಡೆದು ಸ್ಫೂರ್ತಿಯಾದ ಸಾಧಕ!