ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ವಿವಿಧ ಹುದ್ದೆಗಳ ನೇಮಕಾತಿ: ಜು.25 ರೊಳಗೆ ಅರ್ಜಿ ಸಲ್ಲಿಸಿ

By Sathish Kumar KH  |  First Published Jul 18, 2023, 7:54 PM IST

ಅಂಗವಿಕಲರ ಪುನರ್ವಸತಿ  ಕೇಂದ್ರಕ್ಕೆ ಗೌರವ ಧನದ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.


ಬೆಂಗಳೂರು (ಜು.18): ಅಂಗವಿಕಲರ ಪುನರ್ವಸತಿ  ಕೇಂದ್ರಕ್ಕೆ ಗೌರವ ಧನದ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇನ್ನು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಬೆಂಗಳೂರು ನಗರ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಖಾಲಿಯಿರುವ ಫಿಜಿಯೋಥೆರಪಿಸ್ಟ್, ಆಕ್ಯುಪೇಶನಲ್ ಥೆರಪಿಸ್ಟ್ ಪೂರ್ಣಾವಧಿ, ಲೆದರ್ ವರ್ಕರ್, ಶೂ ಮೇಕರ್, ಸ್ವೀಚ್ ಥೆರಪಿಸ್ಟ್ ಮತ್ತು ಆಡಿಯಾಲಿಜಿಸ್ಟ್, ಮೊಬಿಲಿಟಿ ಇನ್ಸ್ ಟ್ರಕ್ಟರ್, ಇಯರ್ ಮೊಲ್ಡ್ ಟೆಕ್ನಿಷಿಯನ್, ಕೀಲು ಮತ್ತು ಮೂಳೆ ತಜ್ಞರು, ಆಪ್ತಾಲ್ಮೋಲಜಿಸ್ಟ್, ಇ.ಎನ್.ಟಿ ಸ್ಪೇಚಲಿಸ್ಟ್ ಮತ್ತು ಸೈಕಿಯಾಟ್ರಿಸ್ಟ್ ಹುದ್ದೆಗಳಿಗೆ ಗೌರವಧನದ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇನ್ನು ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು 18 ರಿಂದ 45 ವರ್ಷಗಳ ವಯೋಮಿತಿಯಲ್ಲಿರಬೇಕು. 

Latest Videos

undefined

ಕಿಸಾನ್‌ ಸಮ್ಮಾನ್‌ ಯೋಜನೆಗೆ ಎಳ್ಳುನೀರು? : 50 ಲಕ್ಷ ರೈತರಿಗೆ ಬರ್ತಿದ್ದ 4 ಸಾವಿರ ರೂ. ಸ್ಥಗಿತ!

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ?: ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಅರ್ಜಿಗಳನ್ನು ಅಧ್ಯಕ್ಷರು /ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ, ರವಿ ಕಿರ್ಲೋಸ್ಕರ್ ಆಸ್ಪತ್ರೆ ಆವರಣ, ಪೀಣ್ಯ, 1 ಹಂತ, ಬೆಂಗಳೂರು -560058 ಇಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಜುಲೈ 25 ಸಂಜೆ 5 ಗಂಟೆ ರೊಳಗೆ  ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ  ದೂರವಾಣಿ ಸಂಖ್ಯೆ: 804179472, 8431308600, 9164496483 ಗೆ ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂಗವಿಕರಿಗೆ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ:  ಮತ್ತೊಂದೆಡೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ 2023-24ನೇ ಸಾಲಿನ ಅರ್ಹ ವಿಕಲಚೇತನರ ವ್ಯಕ್ತಿಗಳಿಗೆ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ದೈಹಿಕ ವಿಕಲಚೇತನರಿಂದ ಯಂತ್ರಚಾಲಿತ ದ್ವಿಚಕ್ರವಾಹನ, ವಿಕಲಚೇತನ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ, ಎಸ್.ಎಸ್.ಎಲ್.ಸಿ ಹಾಗೂ ಮೇಲ್ಪಟ್ಟ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್ ಹಾಗೂ ಬ್ರೈಲ್‌ಕಿಟ್, ಶ್ರವಣದೋಷವುಳ್ಳವರಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ನೀಡಲು ಅರ್ಜಿ ಆಹ್ವಾನಿಸಲಾಗಿದೆ. 

ಸಾವಿರಾರು ಎಕರೆ ಭೂಮಿಗೆ ಭೂಗಳ್ಳರಿಂದ ಬೇಲಿ: ಕಣ್ಮುಚ್ಚಿ ಕುಳಿತಿದೆಯಾ ಸರ್ಕಾರ..?

ಇನ್ನು ಸಾಮಾನ್ಯ ವ್ಯಕ್ತಿಯು ವಿಕಲಚೇತನರನ್ನು ವಿವಾಹವಾದಲ್ಲಿ ವಿವಾಹ ಪ್ರೋತ್ಸಾಹಧನ ಮತ್ತು ವಿಕಲಚೇತನರಿಗೆ ವಿವಿಧ ರೀತಿಯ ಸಾಧನ ಸಲಕರಣೆ ವಿತರಣೆ ಸೌಲಭ್ಯಗಳನ್ನು ಪಡೆಯಬಹುದು. ಕೂಡಲೇ ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಕೆ ಮಾಡಿ ಸರ್ಕಾರದ ಯೋಜನೆಯ ಲಾಭವನ್ನು ಪಡೆದುಕೊಳ್ಳಬೇಕು ಎಂದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಕೆ ಹೇಗೆ?:  ಅರ್ಹ ವಿಕಲಚೇತನರು ಅರ್ಜಿಗಳನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಳು, ಉಪ ನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸುಧಾರಣಾ ಸಂಸ್ಥೆಗಳ ಸಂಕೀರ್ಣ, ಹೊಸೂರು ರಸ್ತೆ, ಬೆಂಗಳೂರು -560029 ಇಲ್ಲಿ ಪಡೆದುಕೊಂಡು ಸೆಪ್ಟೆಂಬರ್ 17 ರೊಳಗೆ ಕಛೇರಿ ವೇಳೆಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-29752324 ಅನ್ನು ಸಂಪರ್ಕಿಸಬಹುದು.

click me!