ಪಿಯುಸಿ ಉಪನ್ಯಾಸಕರ‌ ನೇಮಕಾತಿ ಕೌನ್ಸಿಲಿಂಗ್‌ಗೆ ದಿನಾಂಕ ನಿಗದಿ

By Suvarna News  |  First Published Jun 24, 2020, 6:03 PM IST

ಕೊರೋನಾ ಲಾಕ್‌ಡೌನ್‌ನಿಂದ ವಿಳಂಬವಾಗಿದ್ದ ಪಿಯುಸಿ ಉಪನ್ಯಾಸಕರ‌ ನೇಮಕಾತಿ ಕೌನ್ಸಿಲಿಂಗ್ ಪ್ರಕ್ರಿಯೆಗೆ ಇದೀಗ ದಿನಾಂಕ ಪ್ರಕಟಿಸಲಾಗಿದೆ. ಯಾವಾಗ? ಹೇಗೆ..? ಈ ಕೆಳಗಿನಂತಿದೆ ಮಾಹಿತಿ.


ಬೆಂಗಳೂರು, (ಜೂನ್.24) : ಪಿಯುಸಿ ಉಪನ್ಯಾಸಕರ‌ ನೇಮಕಾತಿ ಕೌನ್ಸಿಲಿಂಗ್ ನ್ನು ಜುಲೈ 8 ರಂದು‌ ನಡೆಸಲು  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ  ಹಾಗೂ ಸಕಾಲ ಸಚಿವರು ಆದ ಎಸ್‌ ಸುರೇಶ್ ಕುಮಾರ್ ಅವರು ಸೂಚಿಸಿ ಆದೇಶ ಹೊರಿಡಿಸಿದ್ದಾರೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗೆ ಆಯ್ಕೆಯಾಗಿ ನೇಮಕಾತಿಗೆ ನಿರೀಕ್ಷಿಸಿರುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ವಿತರಿಸಲು ದಿನಾಂಕ 8-7-2020ರಂದು ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲು ಸುರೇಶ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.

Tap to resize

Latest Videos

undefined

 ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರಗಳೊಂದಿಗೆ ನಡೆಸಲು ಸೂಚಿಸಲಾಗಿದ್ದು, ಆನ್ ಲೈನ್ ಮೂಲಕ ಕೌನ್ಸಿಲಿಂಗ್ ಪ್ರಕ್ರಿಯೆ ಮುಗಿಸಿ ನೇಮಕಾತಿ ಆದೇಶವನ್ನು ವಿತರಿಸಲು ಸುರೇಶ್ ಕುಮಾರ್ ಅವರು ನಿರ್ದೇಶಿಸಿದ್ದಾರೆ.

ಕೌನ್ಸೆಲಿಂಗ್ ಸಂದರ್ಭದಲ್ಲಿ ಕೋವಿಡ್ ಸುರಕ್ಷಾ ಕ್ರಮಗಳನ್ನು ಪಾಲಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಆದೇಶ ನೀಡಿದ್ದಾರೆ.

click me!