ಕೆಎಸ್‌ಆರ್‌ಟಿಸಿ ತಾಂತ್ರಿಕ ಸಹಾಯಕರ ನೇಮಕಾತಿ ಫೈನಲ್ ಲಿಸ್ಟ್ ಬಿಡುಗಡೆ; ನಿಮ್ಮ ಹೆಸರಿದೆಯೇ ನೋಡಿ!

By Sathish Kumar KH  |  First Published Jan 13, 2024, 6:18 PM IST

ಕೆಎಸ್‌ಆರ್‌ಟಿಸಿ ತಾಂತ್ರಿಕ ಸಹಾಯಕ ಹುದ್ದೆಗಳ ನೇಮಕಾತಿಗೆ ಆಯ್ಕೆಯಾದ ಅಭ್ಯರ್ಥಿಗಳ ಫೈನಲ್‌ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.


ಬೆಂಗಳೂರು (ಜ.12): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಕಳೆದ ಮೂರು ವರ್ಷಗಳ ಹಿಂದೆ ನೇಮಕಾತಿ ಆರಂಭಿಸಿದ್ದರೂ ಕೋವಿಡ್‌ ಕಾರಣದಿಂದ ನೇಮಕಾತಿಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೆ ತಾಂತ್ರಿಕ ಸಹಾಯಕರ ಹುದ್ದೆ ನೇಮಕಾತಿಗೆ ಮರು ಚಾಲನೆ ನೀಡಲಾಗಿತ್ತು. ಇಂದು ಒಟ್ಟು 264 ತಾಂತ್ರಿಕ ಸಹಾಯಕ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕೆಎಸ್ಆರ್‌ಟಿಸಿ ಪ್ರಕಟಿಸಿದೆ.

ಕೆಎಸ್‌ಆರ್‌ಟಿಸಿ ತಾಂತ್ರಿಕ ಸಹಾಯಕ ಹುದ್ದೆಗೆ ಆಯ್ಕೆಗೊಂಡಿದ್ದ ಅಭ್ಯರ್ಥಿಗಳ ಸಂಭವನೀಯ ಆಯ್ಕೆಪಟ್ಟಿಯನ್ನು ಈಗಾಗಲೇ ಪ್ರಕಟಿಸಿ, ಆಕ್ಷೇಪಣೆಗಳನ್ನು ಸಲ್ಲಿಸಲು ಜ12 ರವರಗೆ ಅವಕಾಶ ನೀಡಲಾಗಿತ್ತು. ಅದರಂತೆ ಸ್ವೀಕರಿಸಿದ ಆಕ್ಷೇಪಣಿಗಳನ್ನು ಪರಿಶೀಲಿಸಿ ಅರ್ಹ ಆಕ್ಷೇಪಣೆಗಳನ್ನು ಪರಿಗಣಿಸಿ ಅಂತಿಮ ಆಯ್ಕೆಪಟ್ಟಿಯನ್ನು ಜ13 ರಂದು ನಿಗಮದ ಕೇಂದ್ರ ಕಛೇರಿಯ ಸೂಚನಾ ಫಲಕ ಮತ್ತು ನಿಗಮದ ಅಧಿಕೃತ ವೆಬ್-ಸೈಟ್ ಆದ www.ksrtcjobs.com ನಲ್ಲಿ ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಂತಿಮ ಪಟ್ಟಿಯನ್ನು ನೋಡಿಕೊಳ್ಳುವಂತೆ ಕೆಎಸ್‌ಆರ್‌ಟಿಸಿ ನೇಮಕಾತಿ ವಿಭಾಗದಿಂದ ಸೂಚನೆ ನೀಡಲಾಗಿದೆ.

Tap to resize

Latest Videos

undefined

ಬಿಗ್‌ಬಾಸ್ 'ಟಿಕೆಟ್ ಟು ಫಿನಾಲೆ' ಟಾಸ್ಕ್‌ನಲ್ಲಿ ಮಹಾ ಮೋಸ; ಜಸ್ಟೀಸ್ ಫಾರ್ ಡ್ರೋನ್ ಪ್ರತಾಪ್ ಅಭಿಯಾನ ಆರಂಭ!

ಮೆರಿಟ್‌ ಆಧಾರದಲ್ಲಿ 264 ತಾಂತ್ರಿಕ ಸಹಾಯಕರ ಹುದ್ದೆಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಆದರೆ, ಅಂತಿ, ಆಯ್ಕೆ ಪಟ್ಟಿಯಲ್ಲಿ ಹೆಸರಿದ್ದ ಮಾತ್ರಕ್ಕೆ ನೇಮಕಾತಿಗೆ ಅಥವಾ ಆಯ್ಕೆಗೆ ಯಾವುದೇ ವಿಧವಾದ ಹಕ್ಕನ್ನು ಹೊಂದಿರುವುದಿಲ್ಲ. ಅಭ್ಯರ್ಥಿಗಳು ಸಲ್ಲಿಸಿರುವ ದಾಖಲಾತಿಗಳಾದ ಶೈಕ್ಷಣಿಕ ವಿದ್ಯಾರ್ಹತೆ, ಮೀಸಲಾತಿ, ಮತ್ತು ಇನ್ನಿತರ ದಾಖಲಾತಿಗಳು ಸಂಬಂಧಿಸಿದ ಪ್ರಾಧಿಕಾರದಿಂದ ಪರಿಶೀಲನಾ ವರದಿ ಮತ್ತು ಪೂರ್ವೋತ್ತರ ನಡತೆಯ ತನಿಖಾ ವರದಿಗೆ ಒಳಪಟ್ಟಿರುತ್ತದೆ.

ಜೊತೆಗೆ, ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳಲ್ಲಿ ಎಸ್‌ಎಸ್‌ಎಲ್‌ಸಿ/ತತ್ಸಮಾನ ವಿದ್ಯಾರ್ಹತೆಗಳಲ್ಲಿ ಕನ್ನಡ ವಿಷಯವನ್ನು ಪ್ರಥಮ ಭಾಷೆಯಾಗಿ ಅಥವಾ ದ್ವಿತೀಯ ಭಾಷೆಯಾಗಿ ಅಭ್ಯಸಿಸದ ಅಭ್ಯರ್ಥಿಗಳು ನೇಮಕಾತಿ ಪೂರ್ವದಲ್ಲಿ ನಿಗಮದ ಪದವೃಂದ ಮತ್ತು ನೇಮಕಾತಿ ನಿಯಮಾವಳಿ 4(8) ಅನ್ವಯ ನಿಗಮದ ವತಿಯಿಂದ ನಡೆಸಲಾಗುವ ಕನ್ನಡ ಭಾಷಾ ಜ್ಞಾನ ಪರೀಕ್ಷೆಯಲ್ಲಿ ಒಂದೇ ಬಾರಿಗೆ ಉತ್ತೀರ್ಣರಾಗಬೇಕಾಗುತ್ತದೆ. ಇಲ್ಲದಿದ್ದಲ್ಲಿ ಅವರು ಆಯ್ಕೆಯ ಹಕ್ಕನ್ನು ಕಳೆದುಕೊಳ್ಳುತ್ತಾರೆ.

 

click me!