KSSRDI Recruitment 2022: ರಾಜ್ಯ ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

By Suvarna News  |  First Published Feb 22, 2022, 12:38 PM IST

ಕರ್ನಾಟಕ  ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ  ಖಾಲಿ ಇರುವ ವಿವಿಧ 9 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿದೆ.


ಬೆಂಗಳೂರು(ಫೆ.22): ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ( Karnataka State Sericulture Research and Development Institute - KSSRDI) ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಹಿರಿಯ ಸಂಶೋಧನಾ ಸಹಾಯಕ (Senior Research Assistants) , ವಿಜ್ಞಾನಿ (Scientist), ಎರಡನೇ ದರ್ಜೆ ಸಹಾಯಕ (Second Division Assistants) ಸೇರಿ ಒಟ್ಟು 9 ಹುದ್ದೆಗಳ ಭರ್ತಿಗೆ ಇಲಾಖೆ ಮುಂದಾಗಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್​ ಮೂಲಕ  ಫೆಬ್ರವರಿ 28 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು  kssrdi.karnataka.gov.in ಗೆ ಭೇಟಿ ನೀಡಲು ಕೋರಲಾಗಿದೆ.

ಒಟ್ಟು 9 ಹುದ್ದೆಗಳ ಮಾಹಿತಿ:
ವಿಜ್ಞಾನಿ - C : 2 ಹುದ್ದೆಗಳು
ವಿಜ್ಞಾನಿ - B : 1 ಹುದ್ದೆ
ಎರಡನೇ ದರ್ಜೆ ಸಹಾಯಕರು : 1 ಹುದ್ದೆ
ಹಿರಿಯ ಸಂಶೋಧನಾ ಸಹಾಯಕರು : 5 ಹುದ್ದೆಗಳು

Tap to resize

Latest Videos

undefined

ಶೈಕ್ಷಣಿಕ ವಿದ್ಯಾರ್ಹತೆ: ಕರ್ನಾಟಕ  ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ  ಹುದ್ದೆಗನುಸಾರವಾಗಿ ವಿದ್ಯಾರ್ಹತೆ ಪಡೆದಿರಬೇಕು.

ವಿಜ್ಞಾನಿ - C ಹುದ್ದೆಗೆ ರೇಷ್ಮೆ ಕೃಷಿ/ಪ್ರಾಣಿಶಾಸ್ತ್ರದಲ್ಲಿ M.Sc, ಕೀಟಶಾಸ್ತ್ರದಲ್ಲಿ M.Sc (ಅಗ್ರಿ), ರೇಷ್ಮೆ ಕೃಷಿ/ಕೀಟಶಾಸ್ತ್ರ/ಪ್ರಾಣಿಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ, ಜವಳಿ ತಂತ್ರಜ್ಞಾನ/ ಜವಳಿ ವಿಜ್ಞಾನ/ಜವಳಿ ರಸಾಯನಶಾಸ್ತ್ರ/ಫೈಬರ್ ಸೈನ್ಸ್ ಇಂಡಸ್ಟ್ರಿಯಲ್ ಮ್ಯಾನೇಜ್ಮೆಂಟ್​​ನಲ್ಲಿ M.Tech ವಿದ್ಯಾರ್ಹತೆ ಪಡೆದಿರಬೇಕು.

ವಿಜ್ಞಾನಿ - B ಹುದ್ದೆಗೆ ರೇಷ್ಮೆ ಕೃಷಿ/ಪ್ರಾಣಿಶಾಸ್ತ್ರದಲ್ಲಿ M.Sc, ಕೀಟಶಾಸ್ತ್ರದಲ್ಲಿ M.Sc (ಅಗ್ರಿ), ರೇಷ್ಮೆ ಹುಳು ಶರೀರಶಾಸ್ತ್ರ ಮತ್ತು ಜೈವಿಕ ರಸಾಯನಶಾಸ್ತ್ರದಲ್ಲಿ Ph.D, ಜವಳಿ ತಂತ್ರಜ್ಞಾನ/ಜವಳಿ ಎಂಜಿನಿಯರಿಂಗ್‌ನಲ್ಲಿ M.Tech ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.

ಹಿರಿಯ ಸಂಶೋಧನಾ ಸಹಾಯಕ ಹುದ್ದೆಗೆ ರೇಷ್ಮೆ ಕೃಷಿ/ಸಸ್ಯಶಾಸ್ತ್ರ/ಪ್ರಾಣಿಶಾಸ್ತ್ರ/ಕೀಟಶಾಸ್ತ್ರದಲ್ಲಿ M.Sc, M.Sc. (ಅಗ್ರಿ) ಕೀಟಶಾಸ್ತ್ರ/ಸಿರಿಕಲ್ಚರ್‌, ಜವಳಿ, ರೇಷ್ಮೆ ತಂತ್ರಜ್ಞಾನದಲ್ಲಿ B.E ಅಥವಾ B.Tech, ಜವಳಿ ರಸಾಯನಶಾಸ್ತ್ರದಲ್ಲಿ B.Sc ಪೂರ್ಣಗೊಳಿಸಿರಬೇಕು.

ಎರಡನೇ ದರ್ಜೆ ಸಹಾಯಕರು ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಪಿಯುಸಿ ಉತ್ತೀರ್ಣರಾಗಿರಬೇಕು.

Karnataka Stamp Registration Department Recruitment 2022: 10ನೇ ತರಗತಿ ಪಾಸ್ ಆಗಿದ್ದರೆ ಈ ಹುದ್ದೆಗ ಅರ್ಜಿ ಸಲ್ಲಿಸಿ

ವಯೋಮಿತಿ: ಕರ್ನಾಟಕ  ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಸಾರವಾಗಿ ವಯೋಮಿತಿ ನಿಗದಿಯಾಗಿದೆ.  ಪ್ರವರ್ಗ 2ಎ ಅಭ್ಯರ್ಥಿಗಳಿಗೆ 3 ವರ್ಷ,  SC ಅಭ್ಯರ್ಥಿಗಳಿಗೆ 5 ವರ್ಷಗಳ: ವಯೋಮಿತಿ ಸಡಿಲಿಕೆ ನೀಡಲಾಗಿದೆ.
ವಿಜ್ಞಾನಿ - C : 45 ವರ್ಷ
ವಿಜ್ಞಾನಿ - B : 40 ವರ್ಷ
ಎರಡನೇ ದರ್ಜೆ ಸಹಾಯಕರು : ನಿಯಮಾನುಸಾರ
ಹಿರಿಯ ಸಂಶೋಧನಾ ಸಹಾಯಕರು : 35 ವರ್ಷ

ಅರ್ಜಿ ಶುಲ್ಕ: ಕರ್ನಾಟಕ  ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ  ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವ SC/ST ಅಭ್ಯರ್ಥಿಗಳಿಗೆ 250 ರೂ, ಪ್ರವರ್ಗ 1 ಅಭ್ಯರ್ಥಿಗಳಿಗೆ 500 ರೂ., ಮಿಕ್ಕ ಎಲ್ಲಾ ಅಭ್ಯರ್ಥಿಗಳಿಗೆ 1000 ರೂ. ಅರ್ಜಿ ಶುಲ್ಕ ನಿಗದಿಯಾಗಿದೆ.

ವೇತನ ವಿವರ: ಕರ್ನಾಟಕ  ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ  ಖಾಲಿ ಇರುವ ವಿವಿಧ ಹುದ್ದೆಗಳಿಗೆ  ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗನುಸಾರ ಮಾಸಿಕ ವೇತನ ದೊರೆಯಲಿದೆ. 
ವಿಜ್ಞಾನಿ - C :  56,800 ರಿಂದ 99,600 ರೂ
ವಿಜ್ಞಾನಿ - B : 52,650 ರಿಂದ  97,100 ರೂ
ಎರಡನೇ ದರ್ಜೆ ಸಹಾಯಕರು :  21,400 ರಿಂದ 42,000 ರೂ
ಹಿರಿಯ ಸಂಶೋಧನಾ ಸಹಾಯಕರು :  27,650 ರಿಂದ 52,650 ರೂ

NHAI Recruitment 2022: ನವದೆಹಲಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ

ಅರ್ಜಿ ಸಲ್ಲಿಸಬೇಕಾದ ವಿಳಾಸ: ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ನಿರ್ದೇಶಕರು
ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ
ತಲಗಟ್ಟಾಪುರ, ಕನಕಪುರ ರಸ್ತೆ,
ಬೆಂಗಳೂರು - 560109

click me!