ಗಮನಿಸಿ: ಕೆಪಿಎಸ್‌ಸಿಯ ವಿವಿಧ ಇಲಾಖೆ ಹುದ್ದೆಗಳ ಪರೀಕ್ಷೆ ಮುಂದೂಡಿಕೆ

By Suvarna News  |  First Published Mar 31, 2020, 10:16 PM IST

ದೇಶದಾದ್ಯಂತ ಕೊರೋನಾ ವಯರಸ್ ಮಾರಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಇದರಿಂದ ಕರ್ನಾಟಕ ಲೋಕಸೇವಾ ಆಯೋಗದ ವಿವಿಧ ಇಲಾಖೆ ಪರೀಕ್ಷೆ ಮುಂದೂಡಲಾಗಿದೆ.
 


ಬೆಂಗಳೂರು, (ಮಾ.31): ಕೊರೋನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷೆಗಳು ಮುಮದೂಡಲಾಗಿದೆ.

  ಲಾಕ್ ಡೌನ್ ಪರಿಸ್ಥಿತಿ ಇರುವುದರಿಂದ ಏಪ್ರಿಲ್ 11 ರಿಂದ ಮೇ 3ರವರೆಗೆ ಮೂರು ಹಂತಗಳಲ್ಲಿ ನಡೆಯಲು ನಿಗದಿಯಾಗಿದ್ದ ವಿವಿಧ ಇಲಾಖಾ ಪರೀಕ್ಷೆಗಳನ್ನು ಅನಿರ್ಧಷ್ಟಾವಧಿಗೆ ಮುಂದೂಡಿ ಕರ್ನಾಟಕ ಲೋಕಸೇವಾ ಆಯೋಗ ಇಂದು ಪ್ರಕಟಣೆ ಹೊರಡಿಸಿದೆ.

Tap to resize

Latest Videos

undefined

ಕೆಎಸ್‌ಆರ್‌ಟಿಸಿಯಲ್ಲಿನ ವಿವಿಧಗಳ ಹುದ್ದೆಗಳ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಹೊಸ ಪರೀಕ್ಷಾ ದಿನಾಂಕಗಳನ್ನು ಮುಂಬರುವ ದಿನಗಳಲ್ಲಿ ನಿಗದಿಪಡಿಸಿ ಆಯೋಗದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಕೆಪಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ. 

ಈ ಮೊದಲು ಕಳೆದ ವರ್ಷ ಮಾರ್ಚ್ 31ರಂದು ಹೊರಡಿಸಿದ್ದ ಆಯೋಗದ ಅಧಿಸೂಚನೆಯಲ್ಲಿ 2020ರ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿತ್ತು.

click me!