ಪಿಎಸ್‌ಐ ಹಗರಣ ಮಾದರಿಯಲ್ಲೇ ಸಶಸ್ತ್ರ ಮೀಸಲು ಪೊಲೀಸ್ ನೇಮಕಾತಿಯಲ್ಲಿ ಅಕ್ರಮ: 400 ಹುದ್ದೆ ಗೋಲ್‌ಮಾಲ್

By Sathish Kumar KH  |  First Published Sep 10, 2023, 1:22 PM IST

ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ಮಾದರಿಯಲ್ಲಿಯೇ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಮಾಡಲು ಮುಂದಾಗಿದ್ದ ಗ್ಯಾಂಗ್‌ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಬೆಂಗಳೂರು (ಸೆ.10): ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿ ಹಗರಣದ ಮಾದರಿಯಲ್ಲಿಯೇ ಜಿಲ್ಲಾ ಸಶಸ್ತ್ರ  ಮೀಸಲು ಪಡೆಯ ಪೊಲೀಸ್‌ ನೇಮಕಾತಿಯಲ್ಲೂ ಅಕ್ರಮವಾಗಿ ಪರೀಕ್ಷೆಯನ್ನು ನಡೆಸಲು ಯೋಜನೆ ರೂಪಿಸಿದ್ದ ಗ್ಯಾಂಗ್‌ ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಹೌದು, ರಾಜ್ಯದಲ್ಲಿ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಬೆನ್ನಲ್ಲೇ ಪೊಲೀಸ್ ಇಲಾಖೆಯ ಮತ್ತೊಂದು ಸ್ಕ್ಯಾಮ್ ಬಟಾಬಯಲು ಆಲುತ್ತಿದೆ. ಜಿಲ್ಲಾ ಸಶಸ್ತ್ರ ಮೀಸಲುಪಡೆ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಯೋಜನೆ ರೂಪಿಸಲಾಗಿದೆ. ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗಷ್ಟೇ ನೋಟಿಫಿಕೇಷನ್ ಕರೆಯಲಾಗಿತ್ತು. ಸುಮಾರು 400 ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿತ್ತು. ಇಂದು ರಾಜ್ಯದ ಎಲ್ಲಾ ಕಡೆ ಸಶಸ್ತ್ರ ಮೀಸಲುಪಡೆಯ ಹುದ್ದೆಗೆ ಪರೀಕ್ಷೆ ನಡೆಯುತ್ತಿದೆ. ಆದರೆ, ನಿನ್ನೆಯೇ ಏಜೆಂಟರುಗಳು ಅಭ್ಯರ್ಥಿಗಳನ್ನ ರೆಡಿ ಮಾಡಿಕೊಂಡು ಒಂದೆಡೆ ಸೇರಲು ಯೋಜನೆ ರೂಪಿಸಿದ್ದರು.

Latest Videos

undefined

ಎಸ್‌.ಎಲ್.ಭೈರಪ್ಪ: ತಮ್ಮ ಸತ್ತಾಗ ಅಂತ್ಯಕ್ರಿಯೆಗೆ ಯಾರೂ ಬರಲಿಲ್ಲ, ತಿನ್ನಲು ತುತ್ತು ಆಹಾರವನ್ನೂ ಕೊಡಲಿಲ್ಲ

ಬೆಂಗಳೂರಿನಿಂದ ಬಸ್ಸಿನ ಮೂಲಕ ಹಣ ಕೊಟ್ಟ ಅಭ್ಯರ್ಥಿಗಳನ್ನ ಕರೆದೊಯ್ಯಲು ಯೋಜನೆ ರೂಪಿಸಿದ್ದರು. ಒಂದು ಕಡೆ ಅಭ್ಯರ್ಥಿಗಳನ್ನ ಕೂರಿಸಿ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ನೀಡಲು ಖದೀಮರ ತಂಡವು ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಇದೀಗ ಸಿಸಿಬಿ ತಂಡವು ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲು ಮುಂದಾಗಿದ್ದ ನಾಲ್ವರು ಬ್ರೋಕರ್‌ಗಳನ್ನ ಬಂಧಿಸಿದೆ. ಕುಷ್ಠಗಿಯ ಬಸವರಾಜ್, ಚಿಕ್ಕನಾಯಕನಹಳ್ಳಿಯ ಹರಿಪ್ರಸಾದ್, ದಿಲೀಪ್ ಹಾಗೂ ತಿಮ್ಮೇಗೌಡ ಬಂಧಿತರು. ಈ ಎಲ್ಲಾ ಆರೋಪಿಗಳು 2018 ರ ಪೊಲೀಸ್ ಕಾನ್ಸ್ ಟೇಬಲ್ ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪಿಗಳು ಆಗಿದ್ದಾರೆ. ಇದೀಗ ಮತ್ತೆ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮರುಪರೀಕ್ಷೆ ಮಾಡದೇ ನೇಮಕಾತಿ ಮುಂದುವರೆಸಿ:  ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಅಕ್ರಮದಲ್ಲಿ ತನಿಖೆ ನಡೆದು ತಪ್ಪಿತಸ್ಥರನ್ನು ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸದೆ, ನೈತಿಕ ಹಾದಿಯಲ್ಲಿ ಆಯ್ಕೆಯಾದವರಿಗೆ ಷರತ್ತು ಬದ್ಧವಾಗಿಯಾದರೂ ನೇಮಕಾತಿ ಆದೇಶ ನೀಡುವಂತೆ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ. ಈ ಬಗ್ಗೆ ಕಳೆದ ತಿಂಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭ್ಯರ್ಥಿಗಳು, ಆಯ್ಕೆಯಾದ ಬಹುತೇಕ ಅಭ್ಯರ್ಥಿಗಳು ತಮ್ಮ ಹಿಂದಿನ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಮರು ಪರೀಕ್ಷೆಯಲ್ಲಿ ಆಯ್ಕೆಯಾಗದಿದ್ದರೆ ಮಾಡದ ತಪ್ಪಿಗೆ ಶಿಕ್ಷೆ ನೀಡಿದಂತಾಗುತ್ತದೆ ಎಂದು ಅಳಲು ತೋಡಿಕೊಂಡಿದ್ದರು.

ಮರುಪರೀಕ್ಷೆ ನಡೆಸದೆ ನೇಮಕ ಮಾಡಿ: ಎಸ್‌ಐ ಅಭ್ಯರ್ಥಿಗಳು

ಯಯುತವಾಗಿ ಆಯ್ಕೆಯಾದವರಿಗೆ ಮೋಸ ಮಾಡಬೇಡಿ: ಆಯ್ಕೆಗೊಂಡಿದ್ದ ಅಭ್ಯರ್ಥಿ ಚಂದನ್‌ ಮಾತನಾಡಿ, ‘ಪಿಎಸ್‌ಐ ಹುದ್ದೆಗೆ ನೇಮಕವಾಗಿದ್ದ 545 ಅಭ್ಯರ್ಥಿಗಳಲ್ಲಿ ಈಗಾಗಲೇ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 53 ಮಂದಿಯನ್ನು ಪೊಲೀಸ್‌ ಇಲಾಖೆ ಪರೀಕ್ಷೆಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಅನರ್ಹಗೊಳಿಸಲಾಗಿದೆ. ಜಾರಿಯಲ್ಲಿರುವ ಸಿಐಡಿ, ನ್ಯಾಯಾಂಗ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧ. ಹೀಗಿರುವಾಗ ನ್ಯಾಯಯುತವಾಗಿ ಆಯ್ಕೆಯಾದ ನಮ್ಮನ್ನು ಸರ್ಕಾರ ಕಡೆಗಣಿಸಬಾರದು’ ಎಂದರು.

click me!