ಕರ್ನಾಟಕ: ಪಿಕಾರ್ಡ್ ಬ್ಯಾಕ್‌ನಲ್ಲಿ ಬ್ಯಾಕ್‌ಲಾಗ್ ಹುದ್ದೆಗಳು, ಅರ್ಜಿ ಹಾಕಿ

By Suvarna News  |  First Published Mar 17, 2020, 6:42 PM IST

ಕರ್ನಾಟಕದಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳಿಗೆ ಬ್ಯಾಕ್‌ಲಾಗ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದು.


ಬೆಂಗಳೂರು, (ಮಾ.17): ಕರ್ನಾಟಕದಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವಿವಿಧ ಬ್ಯಾಕ್‌ಲಾಗ್ ಹುದ್ದೆಗಳ ನೇರ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ.

ಲೆಕ್ಕಾಧಿಕಾರಿ 5, ಹಿರಿಯ ಲೆಕ್ಕಾಧಿಕಾರಿ 3, ಪ್ರಥಮ ದರ್ಜೆ ಸಹಾಯಕರು 7, ಕಿರಿಯ ಕ್ಷೇತ್ರಾಧಿಕಾರಿ 9, ಬೆರಳಚ್ಚುಗಾರ/ ಗಣಕಯಂತ್ರ ನಿರ್ವಾಹಕರು 7, ಸಹಾಯಕರು 4, ಜವಾನರು 13 ಸೇರಿದಂತೆ ಒಟ್ಟು 43 ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ. 

Tap to resize

Latest Videos

undefined

KPSC ನೇಮಕಾತಿ: 1080 ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ದಿನಾಂಕ 16/4/2020ರೊಳಗೆ ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ. 

ವಿದ್ಯಾರ್ಹತೆ:
* ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿಕಾಂ/ಬಿಬಿಎಂ/ಬಿಬಿಎ/ಬಿಸಿಎ/ಪದವಿ ಪಡೆದಿರಬೇಕು. 
* ಹಿರಿಯ ಲೆಕ್ಕಾಧಿಕಾರಿ ಮತ್ತು ಎಫ್‌ಡಿಎ ಹುದ್ದೆಗೆ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. 
*ಕಿರಿಯ ಕ್ಷೇತ್ರಾಧಿಕಾರಿ ಮತ್ತು ಬೆರಳಚ್ಚುಗಾರ ಹುದ್ದೆಗೆ ದ್ವಿತೀಯ ಪಿಯುಸಿ, 
* ಸಹಾಯಕ ಹುದ್ದೆಗೆ ಎಸ್‌ಎಸ್‌ಎಲ್‌ಸಿ ಮತ್ತು ಜವಾನ ಹುದ್ದೆಗೆ 8ನೇ ತರಗತಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

ವಯೋಮಿತಿ: ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18, ಗರಿಷ್ಠ 40 ವರ್ಷ ದಾಟಿರಬಾರದು. 

ಅರ್ಜಿ ಶುಲ್ಕ:  ಅರ್ಜಿ ಸಲ್ಲಿಸುವವರು 500 ರೂ. ಶುಲ್ಕ ಮತ್ತು 30 ರೂ. ಅಂಚೆ ಶುಲ್ಕವನ್ನು ಯಾವುದೇ ವಿದ್ಯುನ್ಮಾನ ಅಂಚೆ ಕಚೇರಿಯಲ್ಲಿ ಪಾವತಿ ಮಾಡಬಹುದು. ಶುಲ್ಕವನ್ನು  ಪಾವತಿ ಮಾಡಲು 17/4/2020 ಕೊನೆಯ ದಿನವಾಗಿರುತ್ತದೆ.

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

click me!