ರಾಜ್ಯ ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಮತ್ತಷ್ಟು ವಿಳಂಬ!

By Suvarna News  |  First Published Apr 8, 2022, 2:36 PM IST

ಸರ್ಕಾರಿ ಕ್ಷೇತ್ರದಲ್ಲಿನ ಕೆಲ ಹುದ್ದೆಗಳ ರದ್ದತಿಗೆ  ಆಡಳಿತ ಸುಧಾರಣಾ ಆಯೋಗ  ಒತ್ತಾಯಿಸಿರುವುದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.


ಬೆಂಗಳೂರು(ಎ.8): ಸುಮಾರು ಎರಡು ವರ್ಷಗಳ ನಂತರ ಅನೇಕ ಇಲಾಖೆಗಳಲ್ಲಿ ಖಾಲಿಯಿರುವ ಅನೇಕ ಹುದ್ದೆಗಳ ಭರ್ತಿಗಾಗಿ ರಾಜ್ಯ ಸರ್ಕಾರ ನೇಮಕಾತಿಯನ್ನು (karnataka government recruitment ) ಆರಂಭಿಸಿತ್ತು. ಆಡಳಿತ ಸುಧಾರಣಾ ಆಯೋಗ (Administrative Reforms Commission ) ತನ್ನ ವರದಿಯಲ್ಲಿ ಸರ್ಕಾರಿ ಕ್ಷೇತ್ರದಲ್ಲಿನ ಕೆಲ ಹುದ್ದೆಗಳ ರದ್ದತಿಗೆ ಒತ್ತಾಯಿಸಿರುವುದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಈಗ ಇರುವ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚಾಗಿದ್ದು, ವಿಳಂಬವು ನಾಗರಿಕ ಸೇವೆಗಳ ಮೇಲಿನ ಪರಿಣಾಮ ಮುಂದುವರೆಯಲಿದೆ.

ಕೊರೋನಾ ಸಾಂಕ್ರಾಮಿಕ ಆದಾಯ ಸಂಗ್ರಹದಲ್ಲಿ ಬೀರಿದ ಪರಿಣಾಮ ಸೇರಿದಂತೆ ಅನೇಕ ಕಾರಣಗಳಿಂದ ಸರ್ಕಾರ ನೇಮಕಾತಿಯನ್ನು ಸ್ಥಗಿತಗೊಳಿಸಿತ್ತು. ಜನರೊಂದಿಗೆ ನೇರವಾಗಿ ವ್ಯವಹಾರಿಸುವ ಅನೇಕ ವಿಭಾಗಗಳು ಸೇರಿದಂತೆ ಅತ್ಯಂತ ಕಡಿಮೆ ಸಿಬ್ಬಂದಿಯಿಂದ ಕಾರ್ಯ ನಿರ್ವಹಿಸುತ್ತಿವೆ. ನೇಮಕಾತಿ ವಿಳಂಬದಿಂದಾಗಿ ಅನೇಕ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗಲಿದೆ.

Latest Videos

undefined

ವರ್ಗಾವಣೆ ಆದೇಶ ಪ್ರಕಟಿಸಿದ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ, ಏ.8 ರಂದು ಕೌನ್ಸೆಲಿಂಗ್

7. 2 ಲಕ್ಷ ಹುದ್ದೆಗಳು ಮಂಜೂರಾದ ಹುದ್ದೆಗಳಲ್ಲಿ 2.6 ಲಕ್ಷ ಹುದ್ದೆಗಳು ಖಾಲಿ ಇವೆ. ಸಿಬ್ಬಂದಿ ಮೇಲೆ ಯಾವ ರೀತಿಯ ಒತ್ತಡವಿದೆ ಎಂಬುದನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು. ಈ ಹಿಂದೆ ಕರೆಯಲಾದ 40, 000 ಹುದ್ದೆಗಳ ವಿಚಾರ ನ್ಯಾಯಾಲಯದ ಮುಂದಿದ್ದು, ಅದು ಅನುಮತಿ ನೀಡುವವರೆಗೂ ಹುದ್ದೆಗಳ ಭರ್ತಿಯಾಗಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಢಕ್ಷರಿ ಹೇಳಿದ್ದಾರೆ. 

15,000 ಶಾಲಾ ಶಿಕ್ಷಕರು, 1,200 ಸಹಾಯಕ ಪ್ರೊಫೆಸರ್, ಸುಮಾರು 1,500 ಎಂಜಿನಿಯರ್ ಮತ್ತು 2,000 ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹುದ್ದೆಗಳ ಭರ್ತಿಗೆ ಕೆಪಿಎಸ್ ಸಿ ಮೂಲಕ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ಕೆಲ ತಿಂಗಳ ಹಿಂದೆ ನೋಟಿಫಿಕೇಷನ್ ಹೊರಡಿತ್ತು. ಆದರೆ, ಮಾಜಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗ ಕೆಲ ಹುದ್ದೆಗಳ ರದ್ದತಿಗೆ ಶಿಫಾರಸ್ಸು ಮಾಡಿದ್ದು, ನೇಮಕಾತಿ ಮತ್ತಷ್ಟು ವಿಳಂಬವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Udupi District Court Recruitment 2022 : ಒಟ್ಟು 17 ಪಿಯೋನ್ ಹುದ್ದೆಗಳಿಗೆ ನೇಮಕಾತಿ

ನಿವೃತ್ತಿ ಮತ್ತಿತರ ಕಾರಣಗಳಿಂದ ವಿವಿಧ ಅನೇಕ ಹುದ್ದೆಗಳು ಖಾಲಿಯಿದ್ದು, ಕಳೆದ ಎರಡು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ, ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸುಗಳು ಸರ್ಕಾರದ ನೇಮಕಾತಿ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿಲ್ಲ. ನಾವು ನೇಮಕಾತಿ ಪ್ರಕ್ರಿಯೆಯನ್ನು ವಿಳಂಬಗೊಳಿಸಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹೇಳಿದ್ದಾರೆ. 

click me!