ರಾಜ್ಯ ಸರಕಾರ ತನ್ನ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಇನ್ನು ಮುಂದೆ ಆನ್ ಲೈನ್ ಮೂಲಕ ಸಾಲ ಪಡೆಯುವ ಅವಕಾಶವನ್ನು ನೀಡಿದೆ.
ಬೆಂಗಳೂರು (ಜೂನ್ 20): ರಾಜ್ಯ ಸರಕಾರ ತನ್ನ ನೌಕರರಿಗೆ ಇದುವರೆಗೆ ಇದ್ದ ಮ್ಯಾನುಯೆಲ್ ಸಾಲಸೌಲಭ್ಯವನ್ನು ತೆಗೆದು ಹಾಕಿ. ಆನ್ ಲೈನ್ ಮೂಲಕ ಸಾಲ ಪಡೆಯುವ ಅವಕಾಶವನ್ನು ನೀಡಿದೆ. ಆನ್ ಲೈನ್ ಮೂಲಕ ಸಾಲ ಮಂಜೂರಾತಿಗಾಗಿ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲಾಗಿದ್ದು, ಇನ್ಮುಂದೆ ಸರ್ಕಾರಿ ವಿಮಾ ಇಲಾಖೆಯಿಂದ ಜೀವ ವಿಮಾ ಪಾಲಿಸಿಗಳಿಂದ ಸಾಲ ಪಡೆಯಲು ಆನ್ ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಕುರಿತಂತೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ನಿರ್ದೇಶಕರು ಸುತ್ತೋಲೆಯನ್ನು ಹೊರಡಿಸಿದ್ದು, ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲೆ ವಿಮಾದಾರರಿಗೆ ಆನ್ ಲೈನ್ ನಲ್ಲಿ ಸಾಲ ಮಂಜೂರು ಮಾಡೋದಕ್ಕಾಗಿ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲಾಗಿದ್ದು, ಈ ಸಾಫ್ಟ್ ವೇರ್ ಅನ್ನು ಪ್ರಾಯೋಗಿಕವಾಗಿ ಯಾದಗಿರಿ, ಕೊಡಗು, ಧಾರವಾಡ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
undefined
ಈ ಸಂಬಂಧ ಸರ್ಕಾರಿ ನೌಕರರಿಗೆ ತರಬೇತಿ ಕೂಡ ಇರಲಿದೆ. ಸಾಲದ ಅರ್ಜಿಗಳನ್ನು ಆನ್ ಲೈನ್ ನಲ್ಲಿ ಸ್ವೀಕರಿಸಿ, ಸಾಲ ಮಂಜೂರಾತಿ ಪ್ರಕ್ರಿಯೆಯನ್ನು ನಿರ್ವಹಿಸಲು ಸೂಚನೆ ಹೊರಡಿಸಲಾಗಿದೆ. ಮುಂದುವರೆದು , ದತ್ತಾಂಶ ಪರಿಶೀಲನೆ ಮುಗಿದಿರುವ ಪಾಲಿಸಿಗಳ ಮೇಲೆ ಮಾತ್ರ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
AGNIPATH SCHEME; ಅಗ್ನಿವೀರರಿಗೆ ಜಾಬ್ ಆಫರ್ ನೀಡಿದ ಆನಂದ್ ಮಹೀಂದ್ರಾ
5000 ಹೆಚ್ಚುವರಿ ಅತಿಥಿ ಶಿಕ್ಷಕರ ನೇಮಕ, ಗೌರವ ಧನ ಹೆಚ್ಚಳ: ಅತಿಥಿ ಶಿಕ್ಷಕರಿಗೆ ( guest teachers ) ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ ನೀಡಿದ್ದು ಸಂಭಾವನೆ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಕೊನೆಗೂ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರ ಗೌರವ ಧನವನ್ನು 6 ವರ್ಷದ ಬಳಿಕ ಪರಿಷ್ಕೃತಗೊಳಿಸಿ ಶನಿವಾರ ಆದೇಶ ಹೊರಡಿಸಿದ್ದು ಅತಿಥಿ ಶಿಕ್ಷಕರಿಗೆ ಹೆಚ್ಚಳ ಆಗಿರುವ ಗೌರವ ಧನ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಈ ಮೊದಲು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 7500 ರು. ಹಾಗೂ ಪ್ರೌಢ ಶಾಲೆಗಳಲ್ಲಿ ಪಾಠ ಮಾಡುವ ಅತಿಥಿ ಶಿಕ್ಷಕರಿಗೆ 8000 ರು, ಗೌರವ ಧನವನ್ನು ಸರ್ಕಾರ ನಿಗಧಿಗೊಳಿಸಿತ್ತು. ಆದರೆ ಅತಿಥಿ ಶಿಕ್ಷಕರಿಗೆ 6 ವರ್ಷದಿಂದ ಗೌರವ ಧನ ಹೆಚ್ಚಳ ಮಾಡದ ಬಗ್ಗೆ ಅತಿಥಿ ಶಿಕ್ಷಕರಲ್ಲಿ ತೀವ್ರ ಅಸಮಾಧಾನ ಇತ್ತು.
IBPS Recruitment 2022; ಬರೋಬ್ಬರಿ 8106 ಹುದ್ದೆಗಳಿಗೆ ನೇಮಕಾತಿ
2500 ರು. ಗೌರವ ಧನ ಹೆಚ್ಚಳ: ಶಿಕ್ಷಣ ಇಲಾಖೆ ಅಧಿಕಾರಿಗಳು ಅತಿಥಿ ಶಿಕ್ಷಕರ ಗೌರವ ಧನವನ್ನು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಲಾ 12000 ರು ಹಾಗೂ ಪ್ರೌಢ ಶಾಲಾ ಅತಿಥಿ ಶಿಕ್ಷಕರಿಗೆ 15,000 ರು, ಹೆಚ್ಚಳ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸದ್ಯ ನೀಡುತ್ತಿರುವ 7500 ರು, ಜೊತೆಗೆ 2,500 ರು, ಹೆಚ್ಚಳ ಮಾಡಿ ಒಟ್ಟು 10,000 ರು, ಹಾಗೂ ಪ್ರೌಢ ಶಾಲೆಗಳಿಗೆ ನೀಡುತ್ತಿರುವ 8000 ರು, ಜೊತೆಗೆ 2,500 ರು. ಹೆಚ್ಚಳ ಮಾಡಿ ಒಟ್ಟು 10,500 ರು, ಗೌರವ ಧನ ನೀಡಲು ಆದೇಶಿಸಿದೆ.
ಜೂ.24ರಂದು ಶಿಕ್ಷಕರ ನೇಮಕಕ್ಕೆ ಕೌನ್ಸೆಲಿಂಗ್: 2021-22 ನೇ ಸಾಲಿಗೆ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳ ಆಯ್ಕೆಗೆ ಮೆರಿಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗಿದೆ. ಹೆಚ್ಚಿನ ವಿವರಕ್ಕೆ https://www.schooleducation.kar.nic.in/ಗೆ ಭೇಟಿ ನೀಡಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.