ಹೈಕೋರ್ಟ್ ಆದೇಶದಂತೆ ತಂದೆಯ ಆದಾಯ ಪ್ರಮಾಣ ಪತ್ರ ನೀಡಿರುವ ಅಭ್ಯರ್ಥಿಗಳನ್ನೂ ಪರಿಗಣಿಸಿ ವಾರದಲ್ಲಿ 15 ಸಾವಿರ ಶಿಕ್ಷಕರ ಹೊಸ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲು ಶಿಕ್ಷಣ ಇಲಾಖೆ ಮಹತ್ವದ ನಿರ್ಧಾರ.
ಬೆಂಗಳೂರು (ಫೆ.24): ಹೈಕೋರ್ಟ್ ಆದೇಶದಂತೆ ತಂದೆಯ ಆದಾಯ ಪ್ರಮಾಣ ಪತ್ರ ನೀಡಿರುವ ಅಭ್ಯರ್ಥಿಗಳನ್ನೂ ಪರಿಗಣಿಸಿ ಇನ್ನೊಂದು ವಾರದಲ್ಲಿ 15 ಸಾವಿರ ಪದವೀಧರ ಶಾಲಾ ಶಿಕ್ಷಕರ ನೇಮಕಾತಿಗೆ ಪರಿಷ್ಕೃತ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರು, ಈ ಮೊದಲು ಇಲಾಖೆ ಪ್ರಕಟಿಸಿದ್ದ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪ ವ್ಯಕ್ತಪಡಿಸಿ ಕೆಲವು ವಿವಾಹಿತ ಮಹಿಳಾ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಭ್ಯರ್ಥಿಗಳ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ , ವಿವಾಹಿತ ಮಹಿಳೆಯರು ಸಲ್ಲಿಸಿರುವ ತಂದೆಯ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಪರಿಗಣಿಸಿ ನೇಮಕಾತಿ ಪ್ರಕ್ರಿಯೆ ಮುಂದುವರೆಸುವಂತೆ ಆದೇಶದಲ್ಲಿ ತಿಳಿಸಿತ್ತು. ಈ ಕುರಿತು ಮುಖ್ಯ ಕಾರ್ಯದರ್ಶಿಯವರು, ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ತಾತ್ಕಾಲಿಕ ಆಯ್ಕೆ ಪಟ್ಟಿಪರಿಷ್ಕರಿಸಲು ತೀರ್ಮಾನಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದ ವೇಳೆಗೆ ಹೊಸ ಶಿಕ್ಷಕರ ಸೇವೆಯನ್ನು ಪಡೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸಂದರ್ಶನ
ಶಿವಮೊಗ್ಗ: ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಗುತ್ತಿಗೆ ಆಧಾರಿತ ಹುದ್ದೆಗಳ ನೇಮಕಾತಿ ಸಂಬಂಧ ಮಾ.1 ರಂದು ಸಂದರ್ಶನ ನಡೆಯಲಿದೆ. ಪಶು ವೈದ್ಯಕೀಯ ಸ್ತ್ರೀ ರೋಗ ಮತ್ತು ಪ್ರಸೂತಿ ಶಾಸ್ತ್ರ ಪಶುವೈದ್ಯಕೀಯ ರೋಗಶಾಸ್ತ್ರ, ಹಾಗೂ ಪಶುವೈದ್ಯಕೀಯ ಚಿಕಿತ್ಸಾ ಸಂಕೀರ್ಣ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ನಿಯಮಾವಳಿ ಹಾಗೂ ಮಾರ್ಗಸೂಚಿಯಂತೆ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ಸಂದರ್ಶನವನ್ನು ಮಾರ್ಚ್ 1 ರಂದು ಬೆಳಗ್ಗೆ 11ರಿಂದ ಡೀನ್ ಕಚೇರಿ, ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ ಇಲ್ಲಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 08182-200872 ಹಾಗೂ ವಿಶ್ವವಿದ್ಯಾಲಯದ ಜಾಲತಾಣ: www.kvafsu.edu.in ಅನ್ನು ಸಂಪರ್ಕಿಸಬಹುದೆಂದು ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ತಿಳಿಸಿದ್ದಾರೆ.
ಫೆ.25 ಮತ್ತು 26 ರಂದು KPSC EXAM, ಧಾರವಾಡ-ಹುಬ್ಬಳ್ಳಿಯಲ್ಲಿ 51 ಪರೀಕ್ಷಾ ಕೇಂದ್ರಗಳು
ಉರ್ದು ಶಾಲೆಯ ಮುಖ್ಯ ಶಿಕ್ಷಕಿ ವರ್ಗಾವಣೆಗೆ ಆಗ್ರಹ
ಖಾನಾಪುರ:ಪಿಸಿ ಸ್ಥಳೀಯ ಸ್ಟೇಶನ್ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಯಾಸ್ಮಿನ್ ತಹಸೀಲ್ದಾರ್ ತಮ್ಮ ಕೆಲಸದಲ್ಲಿ ಬೇಜವಾಬ್ದಾರಿ ತೋರಿದ್ದಾರೆ ಮತ್ತು ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಅಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಶಾಲೆಯ ಎಸ್ಡಿಎಂಸಿ ಪದಾಧಿಕಾರಿಗಳು ಮತ್ತು ಪಾಲಕರು ಮುಖ್ಯ ಶಿಕ್ಷಕಿ ವಿರುದ್ಧ 6 ಪುಟಗಳ ತಕರಾರು ಅರ್ಜಿಯನ್ನು ಗುರುವಾರ ಬೆಳಗಾವಿ ಜಿಪಂ ಸಿಇಒ, ಡಿಡಿಪಿಐ, ಅಕ್ಷರ ದಾಸೋಹ ಯೋಜನೆಯ ಜಿಲ್ಲಾಧಿಕಾರಿ ಮತ್ತು ಬಿಇಒ ಅವರಿಗೆ ನೀಡಿದ್ದಾರೆ.
ವೃತ್ತಿ ಜೀವನ ರೂಪಿಸಿಕೊಳ್ಳುವ ಮಹಿಳೆಯರಿಗೆ ವಿಎಂವೇರ್ ಸಂಸ್ಥೆ ವತಿಯಿಂದ ಉಚಿತ ತರಬೇತಿ
ತಕರಾರು ಅರ್ಜಿಯ ಮೂಲಕ ಮುಖ್ಯ ಶಿಕ್ಷಕಿ ಯಾಸ್ಮಿನ್ ಮಕ್ಕಳ ಶಿಕ್ಷಣದ ಕಡೆ ನಿರ್ಲಕ್ಷ ವಹಿಸಿದ್ದಾರೆ, ಮೇಲಧಿಕಾರಿಗಳ ಅನುಮತಿ ಪಡೆಯದೇ ವಿದೇಶ ಪ್ರಯಾಣಕ್ಕೆ ತೆರಳಿದ್ದಾರೆ, ರಜೆ ತೆರಳುವಾಗ ತಮ್ಮ ಪ್ರಭಾರವನ್ನು ಇತರರಿಗೆ ವಹಿಸಿಲ್ಲ, ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಎಸ್ಡಿಎಂಸಿ ಜೊತೆ ಸ್ಪಂದಿಸುತ್ತಿಲ್ಲ, ವಿದ್ಯಾರ್ಥಿಗಳಿಗೆ ಸ್ಕಾಲರಶಿಪ್ ನೀಡಲು ಹಣ ಪಡೆದಿದ್ದಾರೆ, ಶಾಲೆಯ ಆವರಣದಲ್ಲಿ ಅಂಗಡಿಯೊಂದನ್ನು ಇರಿಸಿ ಅದರ ಬಾಡಿಗೆ ಪಡೆಯುತ್ತಿದ್ದಾರೆ, ಶಾಲೆಯ ಕ್ರೀಡಾ ಉಪಕರಣಗಳು, ನಕಾಶೆ ಮತ್ತು ಇತರೆ ಪರಿಕರಗಳನ್ನು ಸಂರಕ್ಷಿಸದೇ ಹಾಳು ಮಾಡಿದ್ದಾರೆ, ಶಾಲೆಯ ಶೌಚಾಲಯಕ್ಕೆ ಬೀಗ ಜಡಿದಿದ್ದಾರೆ, ಶಾಲೆಯ ಮಕ್ಕಳಿಗೆ ಗುಣಮಟ್ಟದ ಊಟ ವಿತರಿಸುತ್ತಿಲ್ಲ, ಬಿಸಿಯೂಟದ ಪಡಿತರವನ್ನು ಖಾಸಗಿ ವ್ಯಕ್ತಿಗೆ ನೀಡಿದ್ದಾರೆ ಎಂದು ವಿವರಿಸಿದ್ದು, ಇವರನ್ನು ಕೂಡಲೇ ಶಾಲೆಯಿಂದ ವರ್ಗಗೊಳಿಸಬೇಕು ಎಂದು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಮನವಿ ಸಲ್ಲಿಸುವ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಎ.ಎನ್ ಮುಜಾವರ, ಸಮೀರ್ ಅತ್ತಾರ, ಅಹ್ಮದ ಬಾಗವಾನ, ಹೀನಾ ಬಿಚ್ಚುನವರ, ಮುದಸ್ಸರ್ ರಾಹೂತ್, ಫಜಲ್ ಅಹ್ಮದ್ ರಾಹೂತ್, ಖ್ವಾಜಾ ಮುಲ್ಲಾ ಮತ್ತಿತರರು ಇದ್ದರು.