ಗ್ರಾಮ ಲೆಕ್ಕಿಗರ ನೇರ ನೇಮಕಾತಿ 2020: ಅರ್ಜಿ ಹಾಕಿ

By Suvarna NewsFirst Published Mar 4, 2020, 2:52 PM IST
Highlights

ವಯೋನಿವೃತ್ತಿ, ರಾಜೀನಾಮೆ, ಮುಂಬಡ್ತಿ, ವರ್ಗಾವಣೆ ಮುಂತಾದ ಕಾರಣಗಳಿಂದಾಗಿ ತೆರವಾಗಿರುವ ಗ್ರಾಮಲೆಕ್ಕಾಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ ನೋಡಿ.

ಹಾಸನ, (ಮಾ.04): ಹಾಸನ ಜಿಲ್ಲಾ ಘಟಕದ ತಾಲೂಕುಗಳಲ್ಲಿ ತೆರವಾಗಿರುವ ಗ್ರಾಮ ಲೆಕ್ಕಿಗರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.  

ವಯೋನಿವೃತ್ತಿ, ರಾಜೀನಾಮೆ, ಮುಂಬಡ್ತಿ, ವರ್ಗಾವಣೆ ಮುಂತಾದ ಕಾರಣಗಳಿಂದಾಗಿ ತೆರವಾಗಿರುವ 34 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. 

ಖುದ್ದಾಗಿ ಅಥವ ಅಂಚೆ ಮೂಲಕ ಅರ್ಜಿ ಹಾಕಲು ಅವಕಾಶವಿಲ್ಲ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ದಿನಾಂಕ 31/3/2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. 

ವಿದ್ಯಾರ್ಹತೆ:  ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ಪಿಯುಸಿ ಅಥವಾ ಸಿಬಿಎಸ್‌ಇ, ಐಸಿಎಸ್‌ಇ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗೆ ಕನಿಷ್ಠ 18 ವರ್ಷ ಆಗಿರಬೇಕು. ಪ.ಜಾ/ಪ.ಪಂ/ಪ್ರರ್ಗ-1ರ ಅಭ್ಯರ್ಥಿಗಳಿಗೆ 40, 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷದ ಗರಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ. 

ಅರ್ಜಿ ಶುಲ್ಕ: ಪ.ಜಾ/ಪ.ಪಂ/ಪ್ರವರ್ಗ-1/ಅಂಗವಿಕಲ ಅಭ್ಯರ್ಥಿಗಳಿಗೆ 25 ರೂ., 2ಎ/2ಬಿ/3ಎ/3ಬಿ/ಮಹಿಳಾ/ಮಾಜಿ ಸೈನಿಕರಿಗೆ 150 ರೂ., ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 300 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ.

 ಈ ಬಗ್ಗೆ ಇನ್ನಷ್ಟು  ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!