ಮುಷ್ಕರ ನಿರತ ಸ್ಥಳಕ್ಕೆ ಕಾಂಗ್ರೆಸ್ ಪಕ್ಷದ ಯುವ ಧುರೀಣರದ ಸಂಗಮೇಶ ಬಬಲೇಶ್ವರ ಭೇಟಿ ನೀಡಿ ಉಪನ್ಯಾಸಕರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು ನಿಮ್ಮ ಹೋರಾಟಕ್ಕೆ ನ್ಯಾಯುತ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ವಿಜಯಪುರ(ಡಿ.20): ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಸೇವೆಯನ್ನು ಖಾಯಂಗೊಳಿಸಬೆಕೆಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ 28ನೇ ದಿನಕ್ಕೆ ಕಾಲಿಟ್ಟಿದ್ದು, ಬೇಡಿಕೆಗೆ ಸ್ಪಂದಿಸದ ರಾಜ್ಯ ಸರ್ಕಾರದ ವಿರುದ್ಧ ಉಪನ್ಯಾಸಕರು ಸಾರ್ವಜನಿಕರ ಬೂಟ್ ಪಾಲಿಶ್ ಮಾಡುವ ಮುಖಾಂತರ ತಮ್ಮ ಆಕ್ರೋಶ ಹೊರಹಾಕಿದರು.
ಉಪನ್ಯಾಸಕರಾದ ಶ್ರೀಧರ ಇರಸೂರ, ಶ್ರೀಶೈಲ ಹಡಪದ, ಆರ್.ಬಿ. ಮುದ್ದೇಬಿಹಾಳ ಸಾರ್ವಜನಿಕರ ಬೂಟ್ ಪಾಲಿಶ್ ಮಾಡಿದರು.
ವಿಜಯಪುರ: ಮತ್ತೆ ಚಿಗುರೊಡೆದ ಇಂಡಿ ಜಿಲ್ಲಾ ಕೇಂದ್ರದ ಆಶಯ..!
ಮುಷ್ಕರ ನಿರತ ಸ್ಥಳಕ್ಕೆ ಕಾಂಗ್ರೆಸ್ ಪಕ್ಷದ ಯುವ ಧುರೀಣರದ ಸಂಗಮೇಶ ಬಬಲೇಶ್ವರ ಭೇಟಿ ನೀಡಿ ಉಪನ್ಯಾಸಕರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು ನಿಮ್ಮ ಹೋರಾಟಕ್ಕೆ ನ್ಯಾಯುತ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಮುಷ್ಕರದಲ್ಲಿ ನೂರಾರು ಅತಿಥಿ ಉಪನ್ಯಾಸಕರು ಭಾಗಿಯಾಗಿದ್ದರು.