ಹೆಡ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ: ತ್ವರೆ ಮಾಡಿ

By Suvarna News  |  First Published Dec 24, 2019, 3:18 PM IST

ಪುರುಷ ಮತ್ತು ಮಹಿಳಾ  ಹೆಡ್ ಕಾನ್ ಸ್ಟೇಬಲ್ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ. 


ನವದೆಹಲಿ, (ಡಿ.24): ಆನ್ ಲೈನ್ ಮೂಲಕ ದೆಹಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವಂತ ಹೆಡ್ ಕಾನ್ ಸ್ಟೇಬರ್ ಹುದ್ದೆಗಾಗಿ ಅರ್ಹ ಪುರುಷ ,ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ . 

ಸಹಾಯಕ ವೈರ್ ಲೆಸ್ ಆಪರೇಟರ್, ಟೆಲಿ ಪ್ರಿಂಟರ್ ಆಪರೇಟರ್ ಒಟ್ಟು  649 ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Tap to resize

Latest Videos

undefined

ಜಾಬ್ಸ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಡಿ. 28-12-2019ರಿಂದ ಅರ್ಜಿ ಆರಂಭವಾಗಲಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು  ದಿನಾಂಕ 27-01-2020ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. 

ವಯೋಮಿತಿ: 18 ರಿಂದ 27 ವರ್ಷ ವಯಸ್ಸಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿ. ಒಬಿಸಿ ಅಭ್ಯರ್ಥಿಗಳಿಗೆ 30 ವರ್ಷ , ಎಸ್ಸಿ , ಎಸ್ಟಿ ಅಭ್ಯರ್ಥಿಗಳಿಗೆ 32 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ .

ವಿದ್ಯಾರ್ಹತೆ: 10+2 ಅಂದರೇ ಸೀನಿಯರ್ ಸೆಕೆಂಡರಿ ಅಥವಾ ಮೆಕಾನಿಕಲ್ ಕಂ ಆಪರೇಟರ್ ಎಲೆಕ್ಟ್ರಾನಿಕ್ ಕಮ್ಯೂನಿಕೇಷನ್ ಸಿಸ್ಟಮ್ ವಿದ್ಯಾರ್ಹತೆ ಹೊಂದಿರಬೇಕು . ಅಥವಾ ನ್ಯಾಷನಲ್ ಟ್ರೇಟ್ ಸರ್ಟಿಫಿಕೇಟ್ ( ಎನ್ ಟಿ ಸಿ ) ಹೊಂದಿರುವಂತ ಮೆಕ್ಯಾನಿಕಲ್ ಕಂ ಆಪರೇಟರ್ ಎಲೆಕ್ಟ್ರಾನಿಕ್ ಕಮ್ಯೂನಿಕೇಷನ್ ಸಿಸ್ಟಂ ಐಟಿಐ ಹೊಂದಿರಬೇಕು

ವೇತನ ಶ್ರೇಣಿ: 25,500 ರಿಂದ 81,100 ರು. ತಿಂಗಳಿಗೆ.

ಅರ್ಜಿ ಶುಲ್ಕ: ಸಾಮಾನ್ಯ  ಅಭ್ಯರ್ಥಿಗಳಿಗೆ 00 ರು. ಎಸ್ಸಿ , ಎಸ್ಟಿ , ಎಕ್ಸ್ ಸರ್ವಿಸ್ ಮೆನ್ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ www.delhipolice.nic.in ಸಂಪರ್ಕಿಸಿ

click me!