#KarnatakaJobsForKannadigas: ಕೈ ಜೋಡಿಸಿದ ಸಿಎಂ

By Web Desk  |  First Published May 4, 2019, 10:37 PM IST

"ಕರ್ನಾಟಕ ಜಾಬ್ಸ್​​​ ಫಾರ್​​ ಕನ್ನಡಿಗಾಸ್" ಎಂದು ಆಗ್ರಹಿಸಿ ಟ್ವೀಟರ್‌ ಅಭಿಯಾನ ಶುರುವಾಗಿದ್ದು, ಇದಕ್ಕೆ ಸಿಎಂ ಕುಮಾರಸ್ವಾಮಿ ಧ್ವನಿಗೂಡಿಸಿದ್ದಾರೆ.


ಬೆಂಗಳೂರು(ಮೇ.04): 'ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ ಮಾತ್ರ' ಹೀಗೊಂದು ಟ್ವಿಟ್ಟರ್ ಅಭಿಯಾನ ಅಭಿಯಾನವೊಂದು ಶುರುವಾಗಿದೆ.

#KarnatakaJobsForKannadigas ಎನ್ನುವ ಹ್ಯಾಶ್​​​​ ಟ್ಯಾಗ್​​ ಬಳಸುವ ಮೂಲಕ ಕನ್ನಡಿಗರು ಭಾರೀ ಪ್ರಮಾಣದಲ್ಲಿ ಟ್ವೀಟ್​​ ಮಾಡುತ್ತಿದ್ದು, ಸದ್ಯ ಇದೇ ಹ್ಯಾಶ್​​ ಟ್ಯಾಗ್​​ ಟ್ರೆಂಡಿಂಗ್​​ ಆಗಿದೆ. ಅಲ್ಲದೇ ಈ ಹೋರಾಟಕ್ಕೆ ಸಿಎಂ ಎಚ್​​​.ಡಿ ಕುಮಾರಸ್ವಾಮಿಯವರು ಕೂಡ ಬೆಂಬಲ ನೀಡಿದ್ಧಾರೆ.

ಸಾಮಾಜಿಕ ಜಾಲತಾಣದಲ್ಲಿ ನಮ್ಮ ರಾಜ್ಯದ ಯುವ ಜನತೆ ರಾಜ್ಯದಲ್ಲಿ ಸೃಷ್ಟಿಯಾಗುವ ಉದ್ಯೋಗಳು ಕನ್ನಡಿಗರಿಗೆ ದಕ್ಕಬೇಕು ಎಂದು ಹೋರಾಟ ನೆಡೆಸುತ್ತಿರುವುದನ್ನು ಗಮನಿಸಿದ್ದೇನೆ.

ಕನ್ನಡಿಗರ ಹಕ್ಕೊತ್ತಾಯವನ್ನು ಪರಿಗಣಿಸಿ ಕಾನೂನಿನ ಚೌಕಟ್ಟಿನಲ್ಲಿ ಹೇಗೆ ಕಾರ್ಯರೂಪಕ್ಕೆ ತರಬಹುದು ಎಂದು ಸಲಹೆ ಪಡೆಯಲಾಗುವುದು.

— CM of Karnataka (@CMofKarnataka)

Tap to resize

Latest Videos

undefined

 ರಾಜ್ಯದಲ್ಲಿ ಯಾರೇ ಆಗಲಿ ಉದ್ಯೋಗ ನೀಡಬೇಕಾದರೇ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕೆಂದು ಟ್ವಿಟ್ಟರ್​​ನಲ್ಲಿಒಕ್ಕೂರಲಿನ ಕೂಗು ಕೇಳಿಬಂದಿದ್ದು, ಇದಕ್ಕೆ ಟ್ವೀಟ್ ಮಾಡುವ ಮೂಲಕ  ಸಿಎಂ ಕುಮಾರಸ್ವಾಮಿ ಧ್ವನಿಗೂಡಿಸಿದ್ದಾರೆ.

ರಾಜ್ಯದಲ್ಲಿ ಕನ್ನಡಿಗರಿಗೆ ಕಡ್ಡಾಯ ಉದ್ಯೋಗ ಮೀಸಲಾತಿಗೆ ಒತ್ತಾಯಿಸಿ ಹಿಂದಿನಿಂದಲೂ ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಲೇ ಬಂದಿವೆ. 


ಕರ್ನಾಟಕ ರಣಧೀತ ಪಡೆ ಹಾಗೂ ಇನ್ನಿತರ ಕನ್ನಡಪರ ಸಂಘಟನೆಗಳು ಒಕ್ಕೂರಲಿನಿಂದ ಕನ್ನಡಗರಿಗೆ ಖಾಸಗಿ ವಲಯದಲ್ಲೂ ಮೀಸಲಾತಿಯ ಬಗ್ಗೆ ಹೋರಾಟ ಆರಂಭಿಸಿವೆ. ಈ ಹೊರಾಟ ಹೊಸದಲ್ಲದಿದ್ದರೂ ಸಹ ಈ ಬಾರಿ ಇದಕ್ಕೆ ಸಾಮಾಜಿಕ ಜಾಲತಾಣದ ಬಲ ಸಿಕ್ಕಿದೆ. 

click me!