40 ಗಂಟೆ ಹೋಟೆಲ್‌ ಕೋಣೆಯಲ್ಲೇ ಇದ್ದ ಸಂತೋಷ್ ಶವ, ಪೋಸ್ಟ್‌ಮಾರ್ಟಂಗೆ ಮನವೊಲಿಸಲು ಹರಸಾಹಸ

By Suvarna News  |  First Published Apr 14, 2022, 5:59 AM IST

* ಈಶ್ವರಪ್ಪ ಬಂಧಿಸದೆ ಮರ​ಣೋ​ತ್ತರ ಪರೀಕ್ಷೆಗೆ ಬಿಡಲ್ಲವೆಂದು ಸಂಬಂಧಿ​ಕರ ಪಟ್ಟು

* ಪೋಸ್ಟ್‌ಮಾರ್ಟಂಗೆ ಕುಟುಂಬಸ್ಥರ ಮನವೊಲಿಸಲು ಹರಸಾಹಸ

* 40 ಗಂಟೆ ಹೋಟೆಲ್‌ ಕೋಣೆಯಲ್ಲೇ ಇದ್ದ ಶವ

* ಸಂಬಂಧಿಕರ ಒಪ್ಪಿಗೆ ಬಳಿಕ ಪಂಚನಾಮೆ, ವಿಷದ ಬಾಟಲ್‌ ಜಪ್ತಿ, ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ, ಬೆಳಗಾವಿ ಕಳೇಬರ ರವಾನೆ


ಉಡುಪಿIಏ.14): ಗ್ರಾಮೀ​ಣಾ​ಭಿ​ವೃದ್ಧಿ ಸಚಿವ ಕೆ.ಎ​ಸ್‌.​ಈಶ್ವರಪ್ಪ ಹೆಸರು ಬರೆ​ದಿಟ್ಟು ಇಲ್ಲಿನ ಲಾಡ್ಜ್‌​ವೊಂದ​ರಲ್ಲಿ ಸೋಮ​ವಾರ ರಾತ್ರಿ ಆತ್ಮ​ಹ​ತ್ಯೆ ಮಾಡಿ​ಕೊಂಡಿದ್ದ ಬೆಳಗಾವಿ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವ​ರ ಮರ​ಣೋ​ತ್ತರ ಪರೀ​ಕ್ಷೆಯನ್ನು ಬುಧ​ವಾರ ರಾತ್ರಿ ಮಣಿ​ಪಾ​ಲದ ಕಸ್ತೂರ್ಬಾ ಆಸ್ಪ​ತ್ರೆ​ಯಲ್ಲಿ ನೆರ​ವೇ​ರಿ​ಸ​ಲಾ​ಯಿತು. ನಂತ​ರ ರಾತ್ರಿ​ಯೇ ಮೃತ​ದೇ​ಹ​ವನ್ನು ಆ್ಯಂಬು​ಲೆನ್ಸ್‌ ಮೂಲಕ ಬೆಳ​ಗಾ​ವಿಗೆ ಕೊಂಡೊ​ಯ್ಯ​ಲಾ​ಯಿ​ತು.

ಮರ​ಣೋ​ತ್ತರ ಪರೀ​ಕ್ಷೆಗೆ ಕುಟುಂಬ​ಸ್ಥ​ರನ್ನು ಒಪ್ಪಿ​ಸಲು ಪೊಲೀ​ಸರು ಭಾರೀ ಪ್ರಯಾ​ಸ​ಪ​ಡ​ಬೇ​ಕಾ​ಯಿತು. ಈಶ್ವ​ರಪ್ಪ ಬಂಧನ ಆಗು​ವ​ವ​ರೆಗೆ ಮರ​ಣೋ​ತ್ತರ ಪರೀ​ಕ್ಷೆಗೆ ಅವ​ಕಾಶ ನೀಡಲ್ಲ ಎಂದು ಸಂಬಂಧಿ​ಕರು ಪಟ್ಟು ಹಿಡಿದು ಕೂತಿ​ದ್ದ​ರು. ಅಧಿ​ಕಾ​ರಿ​ಗಳು ಎಷ್ಟೇ ಪಟ್ಟು​ಹಿ​ಡಿ​ದರೂ ಸಂಜೆ​ವ​ರೆಗೂ ಹಿಡಿದ ಪಟ್ಟು ಸಡಿ​ಸಿ​ರ​ಲಿಲ್ಲ. ಕೊನೆಗೆ ಸಂಜೆ 5.30ರ ವೇಳೆಗೆ ಅಧಿ​ಕಾ​ರಿ​ಗಳು ಸಂತೋಷ್‌ ಪಾಟೀ​ಲರ ಮನ​ವೊ​ಲಿಸುವಲ್ಲಿ ಯಶ​ಸ್ವಿ​ಯಾ​ದ​ರು. ಈ ತಿಕ್ಕಾ​ಟ​ದಲ್ಲಿ ಲಾಡ್ಜ್‌ನ ಕೊಠಡಿ ಸಂಖ್ಯೆ207ರಲ್ಲಿ ಸಂತೋಷ್‌ ಪಾಟೀಲ್‌ ಮೃತ​ದೇಹ ಸುಮಾರು 40 ಗಂಟೆ ಇತ್ತು.

Tap to resize

Latest Videos

ಮಣಿ​ಪಾ​ಲ​ ಆಸ್ಪ​ತ್ರೆ​ಯಲ್ಲಿ ಸುಮಾ​ರು 3 ಗಂಟೆ ಮರಣೋತ್ತರ ಪರೀಕ್ಷೆ ನಡೆ​ಸಿದ ವೈದ್ಯರು ನಂತರ ಶವ​ವನ್ನು ಕುಟುಂಬ​ಸ್ಥ​ರಿಗೆ ಹಸ್ತಾಂತ​ರಿ​ಸಿ​ದರು. ಗುರುವಾರ ಪರೀಕ್ಷೆಯ ಮಾಹಿತಿಗಳು ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಪೊಲೀಸರ ಕೈಗೆ ಸೇರಲಿವೆ.

ಇದಕ್ಕೂ ಮುನ್ನ, ಮಂಗಳವಾರ ಮಧ್ಯರಾತ್ರಿ ಹೊತ್ತಿಗೆ ಸಂತೋಷ್‌ ಪಾಟೀಲ್‌ ಸಹೋದರ ಬಸವನಗೋಡ ಪಾಟೀಲ…, ಸಹೋದರ ಸಂಬಂಧಿ ಪ್ರಶಾಂತ್‌ ಪಾಟೀಲ್‌ ಮತ್ತಿತರು ಉಡುಪಿ ನಗರ ಠಾಣೆಗೆ ತೆರಳಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಅವರ ಇಬ್ಬರು ಆಪ್ತರ ಮೇಲೆ ದೂರು ಸಲ್ಲಿ​ಸಿ​ದ​ರು.

ವಿಧಿ​ವಿ​ಜ್ಞಾನ ತಜ್ಞರ ಭೇಟಿ: ನಂತರ ಸಂತೋಷ್‌ ಉಳಿ​ದು​ಕೊಂಡಿದ್ದ ಲಾಡ್ಜ್‌ನ 207ನೇ ಕೊಠಡಿಯನ್ನು ತನಿಖಾಧಿಕಾರಿ ಮೃತರ ಸಂಬಂಧಿಕರು, ಗೆಳೆಯರ ಸಮ್ಮುಖದಲ್ಲಿ ತೆರೆದು ಪಂಚನಾಮೆ ನಡೆಸಲಾ​ಯಿ​ತು. ಮಂಗಳೂರಿನಿಂದ ರಾಜ್ಯ ಗೃಹ ಇಲಾಖೆಯ ಪ್ರಾದೇಶಿಕ ವಿಧಿವಿಜ್ಞಾನ (ಫೋರೆನ್ಸಿಕ್‌) ಪರಿಣಿತರು ಹಾಗೂ ಮಣಿಪಾಲದ ತಜ್ಞರು ಕೊಠಡಿಯ ಕಸದಬುಟ್ಟಿಯಲ್ಲಿದ್ದ ವಿಷದ ಬಾಟಲು, ಸಂತೋಷ್‌ ಅವರ ಮೊಬೈಲ್‌ ಇತ್ಯಾದಿ ಸಾಕ್ಷ್ಯಗಳನ್ನು ಸಂಗ್ರಹಿಸಿ, ಮಂಗಳೂರು ಪ್ರಯೋಗಾಲಯಕ್ಕೆ ಸಾಗಿಸಿದರು. ಈ ಎಲ್ಲಾ ಪ್ರಕ್ರಿಯೆಗಳಿಗೆ ಸುಮಾರು 4 ಗಂಟೆ ತಗಲಿತು. ನಂತರ ಸಂತೋಷ್‌ ಉಡುಪಿಗೆ ಬಂದಿದ್ದ ಹುಂಡೈ ಐ10 ಕಾರಿನ ಪಂಚನಾಮೆಯನ್ನೂ ನಡೆಸಲಾಯಿತು. ನಂತರ ಕುಟುಂಬ​ದ​ವರ ಮನ​ವೊ​ಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳು​ಹಿ​ಸಿ​ಕೊ​ಡ​ಲಾ​ಯಿ​ತು.

ಕೇಸರಿ ಶಾಲು ಸುತ್ತಿಕೊಂಡೇ ಆತ್ಮಹತ್ಯೆ!

ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಸಕ್ರಿಯ ಕಾರ್ಯಕರ್ತನಾಗಿದ್ದ ಸಂತೋಷ್‌ ಪಾಟೀಲ್‌ ಗೆಳೆಯರೊಂದಿಗೆ ಪ್ರವಾಸಕ್ಕೆಂದು ಉಡುಪಿಗೆ ಬರುವಾಗ ಕೇಸರಿ ಶಾಲನ್ನು ತಂದಿದ್ದು, ಅದನ್ನು ಕುತ್ತಿಗೆಗೆ ಸುತ್ತಿಕೊಂಡೇ ವಿಷ ಸೇವಿಸಿ, ಮಂಚದ ಮೇಲೆ ಮಲಗಿದ್ದರು. ಸೊಂಟದವರೆಗೆ ಬ್ಲಾಂಕೆಟ್‌ ಹೊದ್ದುಕೊಂಡಿದ್ದರು. ಬಾಯಲ್ಲಿ ನೊರೆ ಹೊರಗೆ ಬಂದಿತ್ತು.

ತಡರಾತ್ರಿ ಉಡುಪಿ ತಲುಪಿದ ಸಂತೋಷ್‌ ಕುಟುಂಬಸ್ಥರು

ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಪಾಟೀಲ್‌ ಕುಟುಂಬಿಕರು ಮಂಗಳವಾರ ತಡರಾತ್ರಿ ಉಡುಪಿಯ ಖಾಸಗಿ ಲಾಡ್ಜ್‌ ತಲುಪಿದರು.ಬೆಂಗಳೂರಿಂದ ಮತ್ತು ಬೆಳಗಾವಿಯಿಂದ ಬಂದಿರುವ ಸಹೋದರರು ಹಾಗೂ ಕುಟುಂಬಿಕರು ನೇರವಾಗಿ ಲಾಡ್ಜ್‌ನ 207ನೇ ಕೊಠಡಿಗೆ ತೆರಳಿದರು. ತಾವು ಬಾರದೆ ತನಿಖೆ ಮುಂದುವರಿಸಬೇಡಿ ಎಂದು ಸಂತೋಷ್‌ ಕುಟುಂಬಿಕರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಕಳೆದ 12 ಗಂಟೆಗಳಿಂದ ಸಹೋದರರಿಗೆ ಉಡುಪಿಯ ಪೊಲೀಸರು ಕಾಯುತ್ತಿದ್ದರು. ಮೃತದೇಹವನ್ನು ಕೊಠಡಿಯಲ್ಲೇ ಇರಿಸಲಾಗಿತ್ತು. ಕೊಠಡಿಗೆ ತೆರಳಿದ ಬಳಿಕ ಮೃತದೇಹವನ್ನು ವೀಕ್ಷಿಸಿದ ಬಳಿಕ ಕುಟುಂಬಿಕರು ಉಡುಪಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಬುಧವಾರ ಮುಂಜಾನೆ ಶವದ ಪಂಚನಾಮೆ ಮತ್ತು ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆಯಿದೆ.

click me!