* 864 ಬೋಧಕ, 2609 ಬೋಧಕೇತರ ಹುದ್ದೆ ಭರ್ತಿ ಬಾಕಿ
* ವಿಧಾನ ಪರಿಷತ್ತಲ್ಲಿ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ
* ಆದಷ್ಟು ಬೇಗ ಭರ್ತಿ ಮಾಡಲು ಕ್ರಮ
ಬೆಂಗಳೂರು(ಸೆ.18): ರಾಜ್ಯದ ನಾಲ್ಕು ಗಳಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು, ಈ ಪೈಕಿ ಶೇ. 50ರಷ್ಟು ಬೋಧಕ ಹುದ್ದೆ ಭರ್ತಿ ಮಾಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಸದಸ್ಯ ಬಸವರಾಜ ಪಾಟೀಲ್ ಇಟಗಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ಕೃಷಿ ವಿವಿಯಲ್ಲಿ 212, ಧಾರವಾಡ ಕೃಷಿ ವಿವಿಯಲ್ಲಿ 225, ರಾಯಚೂರು ಕೃಷಿ ವಿವಿ 245 ಹಾಗೂ ಶಿವಮೊಗ್ಗ ವಿವಿಯಲ್ಲಿ 182 ಹುದ್ದೆಗಳು ಖಾಲಿ ಇವೆ. ಒಟ್ಟಾರೆ 864 ಬೋಧಕ ಹುದ್ದೆ ಹಾಗೂ 2609 ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿದೆ ಎಂದರು.\
undefined
ಶಿಕ್ಷಕರಾಗಬೇಕೆನ್ನುವ ಆಕಾಂಕ್ಷಿಗಳಿಗೆ ಶಿಕ್ಷಕರ ದಿನಾಚರಣೆಯಂದೇ ಸಿಎಂ ಸಿಹಿ ಸುದ್ದಿ
ಖಾಲಿ ಇರುವ ಹುದ್ದೆಗಳಿಗೆ ಸಂಬಂಧ ಪಟ್ಟಂತೆ ವಿವಿಗಳಿಗೆ ಕೆಲವು ಅಂಶಗಳ ಬಗ್ಗೆ ಮಾಹಿತಿ ಕೇಳಲಾಗಿದ್ದು, ಈ ಬಗ್ಗೆ ಅವರಿಂದ ಮಾಹಿತಿ ಬಂದ ನಂತರ ಆದಷ್ಟು ಬೇಗ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಬಸವರಾಜ ಪಾಟೀಲ್ ಇಟಗಿ, ರೈತರ ಆದಾಯವನ್ನು ದ್ವಿಗುಣ ಮಾಡಲು ಸರ್ಕಾರ ಹೊರಟಿದೆ. ಆದರೆ ಕೃಷಿ ವಿವಿಯಲ್ಲಿ ಸಂಶೋಧನೆ ಮಾಡಬೇಕಾದ ವಿಜ್ಞಾನಿಗಳ ನೇಮಕ ಆಗುತ್ತಿಲ್ಲ? ಕೀಟಗಳನ್ನು ನಿಯಂತ್ರಿಸುವ ಕುರಿತು ಸಂಶೋಧನೆ ಕೆಲಸ ನಡೆಯುತ್ತಿಲ್ಲ? ಹಾಗಾಗಿ ಮೊದಲು ಕೃಷಿ ವಿವಿಯಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಆಗ್ರಹಿಸಿದರು.