
ದುಬೈ(ಮಾ.19): ಐಸಿಸಿ ನೂತನವಾಗಿ ಬಿಡುಗಡೆ ಮಾಡಿದ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಇದೇ ಮೊದಲ ಬಾರಿಗೆ ನಂ.2 ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಆಫ್ಘಾನಿಸ್ತಾನದ ಯುವ ಸ್ಪಿನ್ನರ್ ರಶೀದ್ ಖಾನ್ ನಂ.1 ಸ್ಥಾನದಲ್ಲಿ ಭದ್ರವಾಗಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಯಶಸ್ವಿ ಬೌಲಿಂಗ್ ದಾಳಿ ಸಂಘಟಿಸುತ್ತಿರುವ ಚಾಹಲ್ 708 ಅಂಕಗಳೊಂದಿಗೆ ನಂ.2 ಸ್ಥಾನ ಪಡೆದಿದ್ದಾರೆ.
ಇನ್ನು ಬ್ಯಾಟಿಂಗ್'ನಲ್ಲಿ ವಿರಾಟ್ ಕೊಹ್ಲಿ 8ನೇ ಸ್ಥಾನಕ್ಕೆ ಕುಸಿದಿದ್ದರೆ, ಧವನ್ ಇದೇ ಮೊದಲ ಬಾರಿಗೆ 11 ಅಂಕಗಳ ಏರಿಕೆ ಕಂಡು 17ನೇ ಸ್ಥಾನಕ್ಕೇರಿದ್ದಾರೆ. ಕಾಲಿನ್ ಮನ್ರೋ, ಗ್ಲೇನ್ ಮ್ಯಾಕ್ಸ್'ವೆಲ್ ಹಾಗೂ ಬಾಬರ್ ಅಜಂ ಮೊದಲ ಮೂರು ಸ್ಥಾನದಲ್ಲಿ ಭದ್ರವಾಗಿದ್ದಾರೆ. ಬೌಲಿಂಗ್'ನಲ್ಲಿ ರಶೀದ್ ಖಾನ್, ಚಾಹಲ್ ಹಾಗೂ ಇಶ್ ಸೋದಿ ಮೊದಲ ಮೂರು ಸ್ಥಾನ ಹಂಚಿಕೊಂಡಿದ್ದಾರೆ
ಟಾಪ್ 10 ಪಟ್ಟಿಯಲ್ಲಿ ಚಾಹಲ್ ಹಾಗೂ ಕೊಹ್ಲಿ ಹೊರತುಪಡಿಸಿ ಮತ್ತೆ ಯಾವ ಟೀಂ ಇಂಡಿಯಾ ಆಟಗಾರರು ಸ್ಥಾನಪಡೆದಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.