
ಮುಂಬೈ(ಅ.15): ಟೀಂ ಇಂಡಿಯಾದ ಅನುಭವಿ ಕ್ರಿಕೆಟಿಗ ಯುವರಾಜ್ ಸಿಂಗ್ ಭಾರತ ತಂಡಕ್ಕೆ ವಾಪಸಾಗುವುದು ಮತ್ತಷ್ಟು ಕಠಿಣಗೊಂಡಂತಿದೆ. ಮೂಲಗಳ ಪ್ರಕಾರ ಯುವರಾಜ್ ಮತ್ತೊಮ್ಮೆ ‘ಯೋ ಯೋ’ ಫಿಟ್ನೆಸ್ ಟೆಸ್ಟ್'ನಲ್ಲಿ ಅನುತ್ತೀರ್ಣರಾಗಿದ್ದಾರೆ ಎನ್ನಲಾಗಿದೆ.
35 ವರ್ಷದ ಯುವಿ ಮಂಗಳವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ‘ಯೋ ಯೋ’ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಿದ್ದರೆ ‘ಯೋ ಯೋ’ ಟೆಸ್ಟ್‌ನಲ್ಲಿ ಕಡ್ಡಾಯವಾಗಿ ಉರ್ತ್ತೀಣರಾಗಬೇಕು ಎಂದು ಬಿಸಿಸಿಐ ಇತ್ತೀಚೆಗಷ್ಟೇ ನಿಯಮ ಜಾರಿಗೊಳಿಸಿತ್ತು. ಪರೀಕ್ಷೆಯಲ್ಲಿ ಕನಿಷ್ಠ 16.1 ಅಂಕ ಗಳಿಸಬೇಕಿದ್ದು ಯುವಿ, ಕೆಲವೇ ಅಂಕಗಳ ಅಂತರದಲ್ಲಿ ಅವರು ಅನುತ್ತೀರ್ಣರಾದರು ಎಂದು ಮೂಲಗಳು ತಿಳಿಸಿವೆ.
ಇನ್ನು ಟೆಸ್ಟ್ ಪರಿಣಿತ ಬ್ಯಾಟ್ಸ್'ಮನ್ ಚೇತೇಶ್ವರ ಪೂಜಾರ, ಸ್ಪಿನ್ನರ್ ಆರ್. ಅಶ್ವಿನ್ ಯೋ ಯೋ ಟೆಸ್ಟ್'ನಲ್ಲಿ ಪಾಸ್ ಆಗಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.