ಟೀಂ ಇಂಡಿಯಾದ ಈ ಕ್ರಿಕೆಟಿಗನನ್ನು ಮೃಗಕ್ಕೆ ಹೋಲಿಸಿದ ಯುವಿ..!

By Web DeskFirst Published Oct 13, 2018, 2:59 PM IST
Highlights

ಒಂದು ಹಂತದಲ್ಲಿ ವೆಸ್ಟ್ ಇಂಡೀಸ್ ತಂಡ 113 ರನ್’ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಆದರೆ ರೋಸ್ಟನ್ ಚೇಸ್ ಹಾಗೂ ಶೇನ್ ಡೌರಿಚ್ ಅರ್ದಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಬೇರ್ಪಡಿಸಲು ಉಮೇಶ್ ಯಶಸ್ವಿಯಾದರು.

ಬೆಂಗಳೂರು[ಅ.13]: ಟೀಂ ಇಂಡಿಯಾದ ಬಲಿಷ್ಠ ಕ್ರಿಕೆಟಿಗ ಉಮೇಶ್ ಯಾದವ್ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್’ನಲ್ಲಿ 6 ವಿಕೆಟ್ ಕಬಳಿಸುವ ಮೂಲಕ ಭರ್ಜರಿಯಾಗಿ ಫಾರ್ಮ್’ಗೆ ಮರಳಿದ್ದಾರೆ. ಟೆಸ್ಟ್’ಗೆ ಪದಾರ್ಪಣೆ ಮಾಡಿದ ಶಾರ್ದೂಲ್ ಠಾಕೂರ್ ಕೇವಲ 10 ಎಸೆತಗಳನ್ನು ಹಾಕುವುದರೊಳಗಾಗಿ ಗಾಯಗೊಂಡು ಹೊರ ನಡೆದರು. ಆ ಬಳಿಕ ವೇಗದ ಬೌಲಿಂಗ್ ಜವಾಬ್ದಾರಿ ಹೊತ್ತುಕೊಂಡ ಉಮೇಶ್ 6 ವಿಕೆಟ್ ಕಬಳಿಸುವ ಮೂಲಕ ವಿಂಡೀಸ್ ತಂಡವನ್ನು ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 311 ರನ್’ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಒಂದು ಹಂತದಲ್ಲಿ ವೆಸ್ಟ್ ಇಂಡೀಸ್ ತಂಡ 113 ರನ್’ಗಳಿಗೆ 5 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಆದರೆ ರೋಸ್ಟನ್ ಚೇಸ್ ಹಾಗೂ ಶೇನ್ ಡೌರಿಚ್ ಅರ್ದಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಬೇರ್ಪಡಿಸಲು ಉಮೇಶ್ ಯಶಸ್ವಿಯಾದರು. ಇದಾದ ಬಳಿಕ ಚೇಸ್ ಹಾಗೂ ನಾಯಕ ಹೋಲ್ಡರ್ ಶತಕದ ಜತೆಯಾಟವಾಡಿ ತಂಡ ಮೊತ್ತವನ್ನು 280ರ ಗಡಿ ದಾಟಿಸಿದರು. ಈ ಸಂದರ್ಭದಲ್ಲಿ ಮತ್ತೆ ದಾಳಿಗಿಳಿದ ಉಮೇಶ್ ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಹೋಲ್ಡರ್ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಇಂದು ಶತಕ ಸಿಡಿಸಿದ ಚೇಸ್ ವಿಕೆಟ್ ಪಡೆಯುವಲ್ಲೂ ಉಮೇಶ್ ಯಶಸ್ವಿಯಾದರು.

ಉಮೇಶ್ ಪ್ರದರ್ಶನವನ್ನು ಕೊಂಡಾಡಿರುವ ಅನುಭವಿ ಕ್ರಿಕೆಟಿಗ ಯುವರಾಜ್ ಸಿಂಗ್, ಮೃಗ ಭರ್ಜರಿಯಾಗಿಯೇ ಕಮ್’ಬ್ಯಾಕ್ ಮಾಡಿದೆ. ಕಠಿಣ ಪರಿಶ್ರಮ ಯಾವತ್ತಿಗೂ ವ್ಯರ್ಥವಾಗುವುದಿಲ್ಲ. ಗ್ರೇಟ್ ಸ್ಪೆಲ್ ಎಂದು ಟ್ವೀಟ್ ಮಾಡಿದ್ದಾರೆ.

The beast is back with a bang ! Hard work never goes in vain. Great spell 👍

— yuvraj singh (@YUVSTRONG12)
click me!