ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟ; ಪೃಥ್ವಿ ಶಾ ಶ್ರೇಯಾಂಕವೇನು..?

By Web DeskFirst Published Oct 12, 2018, 9:27 PM IST
Highlights

ವೆಸ್ಟ್ ಇಂಡೀಸ್ ವಿರುದ್ಧ 139 ಸಿಡಿಸಿದ ಕೊಹ್ಲಿ 937 ಅಂಕ ಕಲೆಹಾಕುವುದರೊಂದಿಗೆ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಇನ್ನು ಮೊದಲ ಟೆಸ್ಟ್’ನಲ್ಲಿ 6 ವಿಕೆಟ್ ಕಬಳಿಸಿದ ಕುಲ್ದೀಪ್ ಯಾದವ್ 16 ಸ್ಥಾನಗಳ ಏರಿಕೆ ಕಂಡು 52ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

ದುಬೈ[ಅ.12]: ಐಸಿಸಿ ನೂತನ ಟೆಸ್ಟ್ ರ‍್ಯಾಂಕಿಂಗ್ ಪ್ರಕಟಗೊಂಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದು, ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ ಪೃಥ್ವಿ ಶಾ 73ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧ 139 ಸಿಡಿಸಿದ ಕೊಹ್ಲಿ 937 ಅಂಕ ಕಲೆಹಾಕುವುದರೊಂದಿಗೆ ವೃತ್ತಿ ಜೀವನದ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಇನ್ನು ಮೊದಲ ಟೆಸ್ಟ್’ನಲ್ಲಿ 6 ವಿಕೆಟ್ ಕಬಳಿಸಿದ ಕುಲ್ದೀಪ್ ಯಾದವ್ 16 ಸ್ಥಾನಗಳ ಏರಿಕೆ ಕಂಡು 52ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ರಾಜ್’ಕೋಟ್ ಮೈದಾನದಲ್ಲಿ ಚೊಚ್ಚಲ ಶತಕ ಸಿಡಿಸಿದ ರವೀಂದ್ರ ಜಡೇಜಾ ಬ್ಯಾಟ್ಸ್’ಮನ್’ಗಳ ಶ್ರೇಯಾಂಕದಲ್ಲಿ 51ನೇ ಶ್ರೇಯಾಂಕಕ್ಕೆ ಭಡ್ತಿ ಪಡೆದರೆ, ಆಲ್ರೌಂಡ್ ವಿಭಾಗದಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ.

ಬೌಲರ್’ಗಳ ಪಟ್ಟಿಯಲ್ಲಿ ರಬಾಡ ಮೊದಲ ಸ್ಥಾನ ಉಳಿಸಿಕೊಂಡಿದ್ದರೆ, ಟ್ರೆಂಟ್ ಬೌಲ್ಟ್ ಒಂದು ಸ್ಥಾನ ಮೇಲೇರಿ 5ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಟಾಪ್ 5 ಬ್ಯಾಟ್ಸ್’ಮನ್’ಗಳ ಶ್ರೇಯಾಂಕ:
1. ವಿರಾಟ್ ಕೊಹ್ಲಿ
2. ಸ್ಟೀವ್ ಸ್ಮಿತ್
3. ಕೇನ್ ವಿಲಿಯಮ್ಸನ್
4. ಜೋ ರೂಟ್
5. ಡೇವಿಡ್ ವಾರ್ನರ್

ಟಾಪ್ 5 ಬೌಲರ್ ಶ್ರೇಯಾಂಕ:
1. ಜೇಮ್ಸ್ ಆ್ಯಂಡರ್’ಸನ್
2. ಕಗಿಸೋ ರಬಾಡ
3. ವೆರ್ನಾನ್ ಫಿಲಾಂಡರ್
4. ರವೀಂದ್ರ ಜಡೇಜಾ
5. ಟ್ರೆಂಟ್ ಬೌಲ್ಟ್

ಟಾಪ್ 5 ಆಲ್ರೌಂಡರ್’ಗಳು
1. ಶಕೀಬ್ ಅಲ್ ಹಸನ್
2. ರವೀಂದ್ರ ಜಡೇಜಾ
3. ವೆರ್ನಾನ್ ಫಿಲಾಂಡರ್
4. ಜೇಸನ್ ಹೋಲ್ಡರ್
5. ಆರ್. ಅಶ್ವಿನ್

click me!