ಯುಸ್ರಾ 16 ವರ್ಷದವರಾಗಿದ್ದಾಗ ಅಂದರೆ 2015ರ ಆಗಸ್ಟ್‌ನಲ್ಲಿ ಸಿರಿಯಾದಲ್ಲಿ ಸಿವಿಲ್ ವಾರ್ ಶುರುವಾಯಿತು. ಆಗ ನಿರಾಶ್ರಿತಳಾದ ಈಕೆ ತನ್ನ ಸಹೋದರಿ ಜತೆ ಪಲಾಯನ ಮಾಡಿದಳು. ಈಕೆಯ ಬದುಕಿನ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ
ಜಾಗತಿಕ ಕ್ರೀಡಾ ಹಬ್ಬ ಎಂದೇ ಕರೆಸಿಕೊಳ್ಳುವ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜುಲೈ 26ರಿಂದ ಅಧಿಕೃತ ಚಾಲನೆ ಸಿಗಲಿದೆ. ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ನಂಬಲಸಾಧ್ಯವಾದ ಅಡೆತಡೆಗಳನ್ನು ಮೆಟ್ಟಿನಿಂತು ಕ್ರೀಡಾಕೂಟದಲ್ಲಿ ಪಾಲ್ಗೊಂಡ ನಿರಾಶ್ರಿತ ಅಥ್ಲೀಟ್‌ಗಳನ್ನು ಪ್ಯಾರಿಸ್ ಒಲಿಂಪಿಕ್ಸ್ ಆಯೋಜಕರು ಸಹಕಾರ ಒದಗಿಸಿದ್ದಾರೆ. ಅಂತಹ ಅಥ್ಲೀಟ್‌ಗಳ ಪೈಕಿ ಯುಸ್ರಾ ಮರ್ದಿನಿ ಕೂಡಾ ಒಬ್ಬರಾಗಿದ್ದಾರೆ. ಹದಿಹರೆಯದವಳಿದ್ದಾಗಲೇ ಯುದ್ದಪೀಡಿತ ಸಿರಿಯಾದಿಂದ ಪಲಾಯನ ಮಾಡಿ 2016 ಹಾಗೂ 2020ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು
ಯುಸ್ರಾ 16 ವರ್ಷದವರಾಗಿದ್ದಾಗ ಅಂದರೆ 2015ರ ಆಗಸ್ಟ್‌ನಲ್ಲಿ ಸಿರಿಯಾದಲ್ಲಿ ಸಿವಿಲ್ ವಾರ್ ಶುರುವಾಯಿತು. ಆಗ ನಿರಾಶ್ರಿತಳಾದ ಈಕೆ ತನ್ನ ಸಹೋದರಿ ಜತೆ ಪಲಾಯನ ಮಾಡಿದಳು. ಗ್ರೀಸ್‌ಗೆ ಹೋಗುವ ದೋಣಿ ಹತ್ತುವ ಮೊದಲು ಸಿರಿಯಾದಿಂದ ಲೆಬನಾನ್‌ಗೆ ಆ ನಂತರ ಟರ್ಕಿಗೆ ವಿಮಾನದಲ್ಲಿ ಪ್ರಯಾಣಿಸಿದರು.
ಯುಸ್ರಾ ಹೊರಟ 10 ಕಿಲೋಮೀಟರ್‌ಗಳ ಸಣ್ಣ ಪ್ರಯಾಣವು ಕೇವಲ 45 ನಿಮಿಷಗಳನ್ನು ತೆಗೆದುಕೊಳ್ಳಬೇಕಾಗಿತ್ತು, ಆದರೆ ಈಗಾಗಲೇ ದುರಸ್ತಿಯಲ್ಲಿದೆ ಮತ್ತು 20 ಜನರಿಂದ ತುಂಬಿ ತುಳುಕುತ್ತಿದ್ದ ಹಡಗು ಕೇವಲ 20 ನಿಮಿಷಗಳಲ್ಲಿ ಕುಸಿಯಲು ಪ್ರಾರಂಭಿಸಿತು. ಆಗ ಯುಸ್ರಾ, ಆಕೆಯ ಸಹೋದರಿ ಹಾಗೂ ಇನ್ನಿಬ್ಬರನ್ನು ಬೋಟ್‌ನಿಂದ ಕೆಳಗಿಳಿಸಿ, ಬೋಟ್ ಅನ್ನು ದಡಕ್ಕೆ ತಳ್ಳಲು ಒತ್ತಾಯಿಸಲಾಯಿತು. ಈ ಕಷ್ಟಸಾಧ್ಯ ಸಾಹಸಕ್ಕೆ ಮೂರು ಗಂಟೆ ಸಮಯ ತೆಗೆದುಕೊಂಡಿತು.
ಈ ಘಟನೆಯ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಯುಸ್ರಾ, "ಇಡೀ ಸಮಯ, ನೀವು ನಮ್ಮ ಎಲ್ಲಾ ಪ್ರಾರ್ಥನೆಗಳನ್ನು ಒಂದೇ ಧ್ವನಿಯಲ್ಲಿ ಕೇಳಬಹುದು" ಎಂದು ಹೇಳಿದ್ದರು. ಆಕೆಯ ಪಯಣದ ಅಂತಿಮ ಗುರಿ ಜರ್ಮನಿಯಾಗಿತ್ತು. ಇದಕ್ಕಾಗಿ ಆಕೆ ಕಷ್ಟಕರವಾದ ಕಾಲ್ನಡಿಗೆ, ಬಸ್ಸುಗಳಲ್ಲಿ ಹಾಗೂ ಕಳ್ಳಸಾಗಾಣಿಕೆದಾರರ ನೆರವಿನಿಂದ ಜೆರ್ಮನಿ ತಲುಪಿದರು. ಇದಾಗಿ ಒಂದು ವರ್ಷ ತುಂಬುವುದರೊಳಗಾಗಿ ಮರ್ದಿನಿ 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಮೊದಲ ನಿರಾಶ್ರಿತ ಕ್ರೀಡಾಪಟು ಎನಿಸಿಕೊಂಡರು.
2016ರ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 100 ಮೀಟರ್ ಬಟರ್‌ಪ್ಲೈ ಹೀಟ್ ಸ್ಪರ್ಧೆಯಲ್ಲಿ ಭಾಗವಹಿಸಿದ ಯುಸ್ರಾ ಅವರನ್ನು ಕೆಳ ಶ್ರೇಯಾಂಕದಲ್ಲಿ ಇರಿಸಿದ್ದರೂ, ಆಕೆ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದರು. ಇದಾದ ಬಳಿಕ ಮಾತನಾಡಿದ ಯುಸ್ರಾ, ನಾನು ಕೇವಲ ಓಲಿಂಪಿಕ್ ಧ್ವಜವನ್ನು ಹಿಡಿದಿಲ್ಲ, ಜಾಗತಿಕ ಸಮುದಾಯದ ಕನಸು ಹಾಗೂ ಭರವಸೆಯನ್ನು ಹೊತ್ತಿದ್ದೇನೆ ಎಂದು ಹೇಳಿದ್ದರು.
ಅವರು ಈಗ ನಿರಾಶ್ರಿತರ ಹಕ್ಕುಗಳಿಗಾಗಿ ಪ್ರತಿಪಾದಿಸುತ್ತಾ ಸಾಗಿದ್ದು, ವಿಶ್ವಸಂಸ್ಥೆಯ ಅತ್ಯಂತ ಕಿರಿಯ ಮಾನವ ಹಕ್ಕುಗಳ ಸದ್ಭಾವನಾ ರಾಯಭಾರಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ. ಇತ್ತೀಚೆಗಷ್ಟೇ ತೆರೆ ಕಂಡ 'ದಿ ಸ್ವಿಮ್ಮರ್' ಎನ್ನುವ ಸಿನಿಮಾವು ಯುಸ್ರಾ ಅವರ ಜೀವಾನಾಧಾರಿತ ಸಿನಿಮಾವಾಗಿದೆ. ಇನ್ನು 2023ರಲ್ಲಿ ಟೈಮ್ಸ್ ಮ್ಯಾಗ್ಸಿನ್ ಪ್ರಕಟಿಸಿದ ಜಗತ್ತಿನ 100 ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಯುಸ್ರಾ ಮರ್ದಿನಿ ಕೂಡಾ ಒಬ್ಬರಾಗಿದ್ದಾರೆ.