
ನವದೆಹಲಿ(ಮೇ.13): ಪುಣೆ ಸೂಪರ್‌ಜೈಂಟ್ ಪ್ಲೇ-ಆಫ್ ಕನಸನ್ನು ಡೆಲ್ಲಿ ಡೇರ್'ಡೇವಿಲ್ಸ್ ಕಷ್ಟಗೊಳಿಸಿದೆ. ಡೆಲ್ಲಿ ವಿರುದ್ಧ ಪುಣೆ 7 ರನ್'ಗಳಿಂದ ಸೋಲು ಅನುಭವಿಸಿದ ಕಾರಣ ಪ್ಲೇ-ಆಫ್ ಹಂತಕ್ಕೇರಲು ಇನ್ನು ಒಂದು ಪಂದ್ಯ ಗೆಲ್ಲಬೇಕು ಅಥವಾ ಪಂಜಾಬ್ ಮುಂದಿನ ಪಂದ್ಯ ಸೋಲಬೇಕು. ಹಾಗಾದಾಗ ಮಾತ್ರ ಪುಣೆ ಕನಸು ನನಸಾಗುತ್ತದೆ.
ಟಾಸ್ ಗೆದ್ದ ಡೆಲ್ಲಿ ಡೇರ್'ಡೇವಿಲ್ಸ್ ಆರಂಭಿಕ ಆಟಗಾರ ಸಂಜು ಸ್ಯಾಮ್ಸ'ನ್ ಹಾಗೂ ಸ್ಫೋಟಕ ದಾಂಡಿಗ ಶ್ರೇಯಸ್ಸ ಅಯ್ಯರ್ ಅವರ ವಿಕೇಟ್ ಕಳೆದುಕೊಂಡಿತು. ಕನ್ನಡಿಗ ಕರುಣಾ ನಾಯರ್(64:45 ಎಸತ,9 ಬೌಂಡರಿ) , ವಿಕೇಟ್ ಕೀಪರ್ ರಿಷಬ್ ಪಂತ್(36:22 ಎಸೆತ, 4 ಬೌಂಡರಿ ಹಾಗೂ 2 ಸಿಕ್ಸ್'ರ್) ಅವರ ಸ್ಪೋಟಕ ಆಟ ಹಾಗೂ ಮಾರ್ವಿನ್ ಸ್ಯಾಮುವೆಲ್ಸ್(27:21 ಎಸೆತ,2 ಸಿಕ್ಸ್'ರ್, 1 ಬೌಂಡರಿ) ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 20 ಓವರ್'ಗಳಲ್ಲಿ 8 ವಿಕೇಟ್ ನಷ್ಟಕ್ಕೆ 168 ರನ್ ಗಳಿಸಿತು.
169 ರನ್‌ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಪುಣೆ ತಂಡ 4 ಓವರ್ ಆಗುವಷ್ಟರಲ್ಲಿಯೇ ಇಬ್ಬರು ಆರಂಭಿಕ ಆಟಗಾರರನ್ನು ಕಳೆದು ಕೊಂಡಿತು. ನಾಯಕ ಸ್ಟೀವನ್ ಸ್ಮಿತ್(38:32 ಎಸೆತ, 4 ಬೌಂಡರಿ ಹಾಗೂ 1 ಸಿಕ್ಸ್'ರ್) ರಕ್ಷಣಾತ್ಮಕವಾಗಿ ಆಟವಾಡಿದರೆ ಮನೋಜ್ ತಿವಾರಿ (60:45 ಎಸೆತ,3 ಸಿಕ್ಸ್'ರ್, 5 ಬೌಂಡರಿ) ಬಿರುಸಿನ ಆಟವಾಡಿದರು. ಆಲ್'ರೌಂಡರ್ ಸ್ಟೋಕ್ಸ್ ಕೂಡ (33:25 ಎಸೆತ,2 ಸಿಕ್ಸ್'ರ್ ಹಾಗೂ 3 ಬೌಂಡರಿ) ಭರ್ಜರಿ ಆಟವಾಡಿದರು.
ಆದರೆ ಕೊನೆ ವೇಳೆಯಲ್ಲಿ ವಿಕೇಟ್ ಪತನ ಹಾಗೂ ರನ್ ಗಳಿಕೆ ಕಡಿಮೆಯಾದ ಕಾರಣ ಕೊನೆ ಓವರಲ್ಲಿ ಬೇಕಾದ 25 ರನ್ ಬಾರದೆ 17 ರನ್ ಮಾತ್ರವೇ ಗಳಿಸಲು ಸಾಧ್ಯವಾದ ಕಾರಣ ತಂಡವು 161/7 ರನ್'ಗಳಿಸಲಷ್ಟೆ ಸಾಧ್ಯವಾಯಿತು.
ಸ್ಕೋರ್:
ಡೆಲ್ಲಿ 20 ಓವರ್‌ಗಳಲ್ಲಿ 168/8
(ಕರುಣ್ 64, ಪಂತ್ 36, ಉನಾದ್ಕತ್ 2-29)
ಪುಣೆ 20 ಓವರ್‌ಗಳಲ್ಲಿ 161/7
(ತಿವಾರಿ 60, ಸ್ಮಿತ್ 38, ಜಹೀರ್ 2-25)
ಪಂದ್ಯ ಶ್ರೇಷ್ಠ: ಕರುಣಾ ನಾಯರ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.