ಯೂಟರ್ನ್ ಹೊಡೆದ ಯೂನಿಸ್..!

Published : Apr 23, 2017, 10:58 AM ISTUpdated : Apr 11, 2018, 01:13 PM IST
ಯೂಟರ್ನ್ ಹೊಡೆದ ಯೂನಿಸ್..!

ಸಾರಾಂಶ

ಯೂನಿಸ್ ಖಾನ್ 17 ವರ್ಷಗಳ ಟೆಸ್ಟ್ ವೃತ್ತಿ ಜೀವನದಲ್ಲಿ 115 ಟೆಸ್ಟ್ ಪಂದ್ಯಗಳನ್ನಾಡಿದ್ದು 9977ರನ್ ಬಾರಿಸಿದ್ದಾರೆ. ಇದರಲ್ಲಿ ಒಟ್ಟು 34 ಟೆಸ್ಟ್ ಶತಕಗಳೂ ಸೇರಿವೆ.

ಕಿಂಗ್ಸ್ಟನ್‌(ಏ.23): ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ತಮ್ಮ ಅಗತ್ಯವಿದ್ದು, ಮನವಿ ಮಾಡಿಕೊಂಡರೆ ನಿವೃತ್ತಿ ನಿರ್ಧಾರ ಹಿಂಪಡೆಯುವ ಬಗ್ಗೆ ಯೋಚಿಸುವುದಾಗಿ ಹಿರಿಯ ಬ್ಯಾಟ್ಸ್‌ಮನ್‌ ಯೂನಿಸ್‌ ಖಾನ್‌ ಹೇಳಿದ್ದಾರೆ.

ಜಮೈಕಾದಲ್ಲಿ ನಡೆಯುತ್ತಿರುವ ವೆಸ್ಟ್‌ಇಂಡೀಸ್‌ ವಿರುದ್ಧ ಮೊದಲ ಟೆಸ್ಟ್‌'ನ ಮೊದಲ ದಿನದಾಟದ ಬಳಿಕ ಅವರು ಈ ಮಾತನ್ನು ಹೇಳಿದ್ದಾರೆ.

ಮೂರು ಪಂದ್ಯಗಳ ಟೆಸ್ಟ್‌ ಸರಣಿ ಬಳಿಕ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದ ಅವರು, ‘‘ನನ್ನಲ್ಲಿ ಇನ್ನೂ ಕ್ರಿಕೆಟ್‌ ಆಡುವ ಶಕ್ತಿ ಇದೆ. ತಂಡ ಹಾಗೂ ಜನರು ನಾನು ಇನ್ನೂ ಕ್ರಿಕೆಟ್ ಆಡಲಿ ಎಂದು ಬಯಸಿದರೆ ನಿವೃತ್ತಿಯ ನಿರ್ಧಾರವನ್ನು ಮರುಪರಿಶೀಲಿಸುತ್ತೇನೆಂದು ಯೂನಿಸ್ ಹೇಳಿದ್ದಾರೆ.

ಜನ ನಾವು ಆಟದಲ್ಲಿ ಉಳಿಯಬೇಕು ಎಂದಾಗ ನಿವೃತ್ತಿ ಪಡೆಯಬೇಕೇ ಹೊರತು, ನಮ್ಮ ಸಮಯ ಮುಗಿದಿದೆ ಎಂದು ಅವರು ನಿರ್ಧರಿಸಿದಾಗಲ್ಲ. ಒಂದು ವೇಳೆ ತಂಡಕ್ಕೆ ನನ್ನ ಅಗತ್ಯವಿದ್ದರೆ, ನಿವೃತ್ತಿ ನಿರ್ಧಾರ ವಾಪಸ್‌ ಪಡೆಯುವೆ'' ಎಂದವರು ಹೇಳಿದ್ದಾರೆ.

ಯೂನಿಸ್ ಖಾನ್ 17 ವರ್ಷಗಳ ಟೆಸ್ಟ್ ವೃತ್ತಿ ಜೀವನದಲ್ಲಿ 115 ಟೆಸ್ಟ್ ಪಂದ್ಯಗಳನ್ನಾಡಿದ್ದು 9977ರನ್ ಬಾರಿಸಿದ್ದಾರೆ. ಇದರಲ್ಲಿ ಒಟ್ಟು 34 ಟೆಸ್ಟ್ ಶತಕಗಳೂ ಸೇರಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ತಂಡದಿಂದ ಗಿಲ್‌ಗೆ ಔಟ್: ಅಷ್ಟಕ್ಕೂ ಕೊನೆಯ ಕ್ಷಣದಲ್ಲಿ ಆಯ್ಕೆ ಸಮಿತಿ ಈ ತೀರ್ಮಾನ ಮಾಡಿದ್ದೇಕೆ?
ಎರಡು ಮ್ಯಾಚ್ ಬಾಕಿ ಇರುವಂತೆಯೇ ಆ್ಯಶಸ್ ಕಿರೀಟ ಗೆದ್ದ ಆಸ್ಟ್ರೇಲಿಯಾ! ಇಂಗ್ಲೆಂಡ್‌ಗೆ ರೋಚಕ ಸೋಲು