ಮತ್ತಷ್ಟು ಕಠಿಣಗೊಳ್ಳಲಿದೆ ಯೋ-ಯೋ ಟೆಸ್ಟ್..!

By Suvarna Web DeskFirst Published Dec 31, 2017, 11:05 AM IST
Highlights

ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿದ್ದಾಗ ಆಟಗಾರರಿಗೆ ಯೋ-ಯೋ ಟೆಸ್ಟ್ ಪಾಸ್ ಮಾಡುವುದು ಕಡ್ಡಾಯ ಮಾಡಿದ್ದರು

ನವದೆಹಲಿ(ಡಿ.31): ಭಾರತೀಯ ಕ್ರಿಕೆಟಿಗರ ಆಯ್ಕೆಗೆ ಮಾನದಂಡವಾಗಿರುವ ‘ಯೋ-ಯೋ’ ಫಿಟ್ನೆಸ್ ಪರೀಕ್ಷೆಯನ್ನು ಮತ್ತಷ್ಟು ಕಠಿಣಗೊಳಿಸಲು ತಂಡದ ಟ್ರೈನರ್‌'ಗಳು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಸತತ ಪರಿಶ್ರಮದಿಂದ ಯೋ-ಯೋ ಟೆಸ್ಟ್ ಪಾಸ್ ಮಾಡಿದ್ದ ಹಿರಿಯ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ ಅವರಿಗರ ಮತ್ತೊಮ್ಮೆ ಸವಾಲು ಎದುರಾದಂತಾಗಿದೆ.

ಸದ್ಯ ಇರುವ 16.1 ಅಂಕಗಳ ಮಿತಿಯನ್ನು 16.5 ಇಲ್ಲವೇ 17ಕ್ಕೆ ಏರಿಕೆ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಆಟಗಾರರ ಫಿಟ್ನೆಸ್ ಮಟ್ಟ ಹೆಚ್ಚಿಸುವ ದೃಷ್ಟಿಯಿಂದ ಇದರ ಅವಶ್ಯಕತೆ ಇದೆ ಎಂದು ತಂಡದ ಮೂಲಗಳು ತಿಳಿಸಿವೆ. ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

ವಿವಿಧ ತಂಡಗಳು ವಿವಿಧ ಅಂಕ ಮಿತಿಯನ್ನು ಇರಿಸಿಕೊಂಡಿವೆ. ಭಾರತ 16.1 ಅಂಕಗಳ ಮಿತಿ ಹೊಂದಿದ್ದರೆ, ಪಾಕಿಸ್ತಾನ 17.4 ಹಾಗೂ ನ್ಯೂಜಿಲೆಂಡ್ 20.1 ಅಂಕಗಳ ಮಿತಿ ನಿಗದಿ ಪಡಿಸಿದೆ.

ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿದ್ದಾಗ ಆಟಗಾರರಿಗೆ ಯೋ-ಯೋ ಟೆಸ್ಟ್ ಪಾಸ್ ಮಾಡುವುದು ಕಡ್ಡಾಯ ಮಾಡಿದ್ದರು

 

click me!