#INDvSA ಟಿ20 ಪಂದ್ಯಕ್ಕೆ ಯಡಿಯೂರಪ್ಪ; ಅಭಿಮಾನಿಗಳಲ್ಲಿ ವಿಶೇಷ ಮನವಿ !

By Web DeskFirst Published Sep 22, 2019, 5:49 PM IST
Highlights

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 3ನೇ ಟಿ20 ಪಂದ್ಯಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಜರಾಗುತ್ತಿದ್ದಾರೆ. ಈ ಬಾರಿ ಯಡಿಯೂರಪ್ಪ ವಿಶೇಷ ಮನವಿಯೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಾರೆ. 

ಬೆಂಗಳೂರು(ಸೆ.22): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ 3ನೇ ಹಾಗೂ ಅಂತಿಮ ಟಿ20 ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಸರಣಿಯಲ್ಲಿ 1-0 ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಅಂತಿಮ ಪಂದ್ಯದಲ್ಲೂ ಗೆಲುವಿನ ವಿಶ್ವಾಸದಲ್ಲಿದೆ.  ಅಭಿಮಾನಿಗಳು ಈಗಲೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದತ್ತ ಧಾವಿಸುತ್ತಿದ್ದಾರೆ. ಇದೀಗ ಈ ಪಂದ್ಯಕ್ಕೆ ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕೂಡ ಆಗಮಿಸುತ್ತಿದ್ದಾರೆ. 

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಪರೂಪದ ದಾಖಲೆ ಬರೆಯಲು ಸಜ್ಜಾದ ಕೊಹ್ಲಿ!

ಮಹತ್ವದ ಟಿ20 ಪಂದ್ಯಕ್ಕೆ ಯಡಿಯೂರಪ್ಪ ಕೂಡ ಹಾಜರಾಗಲಿದ್ದಾರೆ. ಆದರೆ ಈ ಬಾರಿ ಸಿಎಂ ಪಂದ್ಯ ವೀಕ್ಷಣೆಗಿಂತ ವಿಶೇಷ ಮನವಿಯೊಂದಿಗೆ ಪ್ರತ್ಯಕ್ಷರಾಗುತ್ತಿದ್ದಾರೆ. ಯಡಿಯೂರಪ್ಪ,  ಪ್ರವಾಹದಿಂದ ತತ್ತರಿಸಿರುವ ಕರ್ನಾಟಕವನ್ನು ಪುನರ್ ನಿರ್ಮಾಣಮಾಡಲು ಆರ್ಥಿಕ ನೆರವು ನೀಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಲಿದ್ದಾರೆ.

 

Will be at the Chinnaswamy Stadium today before the India vs South Africa match to seek funds for flood relief on behalf of the State in association with . Looking forward to your generous contribution. Help pic.twitter.com/FA2HShEA6n

— B.S. Yediyurappa (@BSYBJP)

ಪಂದ್ಯ ಆರಂಭಕ್ಕೂ ಮುನ್ನ ಬಿಎಸ್ ಯಡಿಯೂರಪ್ಪ ಭಾರತ ಹಾಗೂ ಸೌತ್ ಆಫ್ರಿಕಾ ಕ್ರಿಕೆಟಿಗರ ಸಮ್ಮುಖದಲ್ಲಿ ವಿಶೇಷ ಮನವಿ ಮಾಡಲಿದ್ದಾರೆ. ಈ ಮೂಲಕ ನವ ಕರ್ನಾಯಕ ಕಟ್ಟಲು ಯುವ ಜನತೆ ಹಾಗೂ ಕ್ರಿಕೆಟ್ ಅಭಿಮಾನಿಗಳ ನೆರವು ಕೋರಲಿದ್ದಾರೆ. ಸೆ.22 ರ ಸಂಜೆ 7 ಗಂಟೆಗೆ ಅಂಟಿಮ ಟಿ20 ಪಂದ್ಯ ನಡೆಯಲಿದೆ. 
 

click me!