ದೆಹಲಿಯಲ್ಲಿ ಮುಂದುವರಿದ ಕುಸ್ತಿಪಟುಗಳ ಪ್ರತಿಭಟನೆ!

By Santosh NaikFirst Published Jan 19, 2023, 1:34 PM IST
Highlights

ಕುಸ್ತಿ ಫೆಡರೇಷನ್‌ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಕುಸ್ತಿಪಟುಗಳ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟ ನಡುವೆಯೇ ಸರ್ಕಾರ ಕೂಡ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿದೆ.
 

ನವದೆಹಲಿ (ಜ.19): ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಹಾಗೂ ಉತ್ತರ ಪ್ರದೇಶದ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಜಂತರ್‌ ಮಂತರ್‌ನಲ್ಲಿ ಕುಸ್ತಿಪಟುಗಳ ಪ್ರತಿಭಟನೆ ಮುಂದುವರಿದಿದೆ. ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದ್ದು. ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯ, ಆಕ್ಷೇಪಾರ್ಹ ಪದಗಳ ಬಳಕೆ, ಕುಸ್ತಿಪಟುಗಳ ಮೇಲೆ ಹಲ್ಲೆಯಂಥ ಆರೋಪಗಳನ್ನು ಹೊರಿಸಿದ್ದಾರೆ. ಕುಸ್ತಿಪಟುಗಳನ್ನು ನಿಂದಿಸಿ, ಹಲ್ಲೆ ನಡೆಸಿದ ಆರೋಪವೂ ಅವರ ಮೇಲಿದೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಫೆಡರೇಷನ್‌ನಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಸರ್ವಾಧಿಕಾರಿ ಧೋರಣೆಯನ್ನು ಸಹಿಸಲ್ಲ ಎಂದು ಒಲಿಂಪಿಕ್‌ ಪದಕ ವಿಜೇತ ಭಜರಂಗ್‌ ಪೂನಿಯಾ ಹೇಳಿದ್ದಾರೆ. 2011 ರಿಂದ ಬ್ರಿಜ್ ಭೂಷಣ್ ಶರಣ್‌ ಸಿಂಗ್ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿದ್ದಾರೆ. ಕ್ರೀಡಾಪಟುಗಳನ್ನು ಹಿಂಸಿಸಲು ಏಕಪಕ್ಷೀಯವಾಗಿ ನಿಯಮ ರಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸರಿತಾ ಮೋರ್, ಸಂಗೀತಾ ಪೋಗಟ್, ಸತ್ಯವ್ರತ್ ಮಲ್ಲಿಕ್, ಸುಮಿತ್ ಮಲ್ಲಿಕ್, ಅನ್ಷು ಮಲ್ಲಿಕ್ ಸೇರಿ 30 ಕುಸ್ತಿಪಟುಗಳಿಂದ ಪ್ರತಿಭಟನೆ ನಡೆಯುತ್ತಿದೆ.

ಕೇಂದ್ರದ ಸಚಿವರು ಈ ಬಗ್ಗೆ ಗಮನ ಹರಿಸಬೇಕು ಎಂದು ಪ್ರತಿಭಟನೆ ನಡೆಸಲಾಗುತ್ತಿದೆ. ಇಂದು  ಪ್ರತಿಭಟನಾಕಾರರು  ಮತ್ತೊಂದು ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.  ಫೆಡರೇಶನ್ ಮುಖ್ಯಸ್ಥರು ಮತ್ತು ತರಬೇತುದಾರರ ವಿರುದ್ಧ ಕುಸ್ತಿಪಟುಗಳ ಆರೋಪಗಳ ಕುರಿತು ಕ್ರೀಡಾ ಸಚಿವಾಲಯವು "ಮುಂದಿನ 72 ಗಂಟೆಗಳ ಒಳಗೆ" ಕುಸ್ತಿ ಫೆಡರೇಶನ್ ಆಫ್ ಇಂಡಿಯಾದಿಂದ (ಡಬ್ಲ್ಯುಎಫ್‌ಐ) ಪ್ರತಿಕ್ರಿಯೆಯನ್ನು ಕೋರಿದೆ. ಇನ್ನೊಂದೆಡೆ "ಸರ್ಕಾರದಿಂದ ಸಂದೇಶ" ದೊಂದಿಗೆ, ಒಲಿಂಪಿಯನ್ ಬಬಿತಾ ಫೋಗಟ್ ಗುರುವಾರ ಸಹ ಕುಸ್ತಿಪಟುಗಳ ಗುಂಪನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.

ಈವರೆಗೆ ಆಗಿರುವ ಬೆಳವಣಿಗೆಗಳು..
- ''ನಾನು ಮೊದಲು ಕುಸ್ತಿಪಟು, ಬಿಜೆಪಿ ಸರಕಾರ ಕುಸ್ತಿಪಟುಗಳ ಜೊತೆಗಿದೆ, ಇಂದೇ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳುತ್ತೇನೆ, ನಾನೊಬ್ಬ ಕುಸ್ತಿಪಟು, ಸರಕಾರದಲ್ಲಿಯೂ ಇದ್ದೇನೆ ಹಾಗಾಗಿ ಮಧ್ಯಸ್ಥಿಕೆ ವಹಿಸುವ ಜವಾಬ್ದಾರಿ ನನ್ನದು. .ನನ್ನ ವೃತ್ತಿಜೀವನದಲ್ಲಿ ನಿಂದನೆಯ ನಿದರ್ಶನಗಳನ್ನು ನಾನು ಕೇಳಿದ್ದೇನೆ. ಬೆಂಕಿಯಿಲ್ಲದೆ ಹೊಗೆ ಆಡೋದಿಲ್ಲ ಎಂದು ಬಬಿತಾ ಫೋಗಟ್ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಎರಡನೇ ದಿನ ಹೇಳಿದ್ದಾರೆ.

- ಮೂರು ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ, ಭಾರತದ ಅತ್ಯಂತ ಶ್ರೇಷ್ಠ ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರಾದ ಮತ್ತು ಬಬಿತಾ ಫೋಗಟ್ ಅವರ ಸೋದರಸಂಬಂಧಿ ವಿನೇಶ್ ಫೋಗಟ್ ಅವರು ಆರೋಪಗಳನ್ನು ಬಹಿರಂಗಗೊಳಿಸಿದ ನಂತರ ದೇಶದ ಕ್ರೀಡಾ ಸಚಿವಾಲಯವು ಬುಧವಾರ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಆರೋಪಗಳಿಗೆ 72 ಗಂಟೆಗಳ ಒಳಗೆ ಪ್ರತಿಕ್ರಿಯಿಸುವಂತೆ ಕೇಳಿದೆ.

- ಬಿಜೆಪಿ ಸಂಸದರಾಗಿರುವ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಆರೋಪವನ್ನು ತಳ್ಳಿಹಾಕಿದ್ದಾರೆ. "ಎಲ್ಲಾ ಲೈಂಗಿಕ ಕಿರುಕುಳದ ಆರೋಪಗಳು ಸುಳ್ಳು, ಮತ್ತು ಅವು ನಿಜವೆಂದು ಕಂಡುಬಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ನಾನು ಬಜರಂಗ್ ಪುನಿಯಾ ಸೇರಿದಂತೆ ಕುಸ್ತಿಪಟುಗಳನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಅದು ಸಾಧ್ಯವಾಗಲಿಲ್ಲ" ಎಂದು 66 ವರ್ಷದ ಸಂಸದ ಹೇಳಿದ್ದಾರೆ. 

- ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಪೂನಿಯಾ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಸಿಂಗ್ ಅವರು ಫೆಡರೇಶನ್ ಅನ್ನು ಏಕಪಕ್ಷೀಯವಾಗಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಫೆಡರೇಶನ್‌ನ ಕೆಲಸವೆಂದರೆ ಆಟಗಾರರನ್ನು ಬೆಂಬಲಿಸುವುದು ಮತ್ತು ಅವರ ಕ್ರೀಡಾ ಅಗತ್ಯಗಳನ್ನು ನೋಡಿಕೊಳ್ಳುವುದು. ಸಮಸ್ಯೆಯಿದ್ದರೆ ಅದನ್ನು ಪರಿಹರಿಸಬೇಕು" ಎಂದು ಅವರು ಟ್ವೀಟ್ ಮಾಡಿದ್ದಾರೆ.

ರೆಸ್ಲಿಂಗ್‌ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ವಿರುದ್ಧ ದೌರ್ಜನ್ಯದ ಆರೋಪ!

- ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಾರ್ವಜನಿಕ ಪ್ರತಿಭಟನೆಯಲ್ಲಿ 28 ವರ್ಷದ ವಿನೇಶ್ ಫೋಗಟ್ ಅವರು ಸಿಂಗ್ ಮತ್ತು ತರಬೇತುದಾರರ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ, ಇದನ್ನು ಹಲವಾರು ಇತರ ಕುಸ್ತಿಪಟುಗಳನ್ನು ಬೆಂಬಲಿಸಿದ್ದಾರೆ. "ಮಹಿಳಾ ಕುಸ್ತಿಪಟುಗಳಿಗೆ ರಾಷ್ಟ್ರೀಯ ಶಿಬಿರಗಳಲ್ಲಿ ತರಬೇತುದಾರರು ಮತ್ತು ಡಬ್ಲ್ಯುಎಫ್‌ಐ ಅಧ್ಯಕ್ಷರು ಲೈಂಗಿಕ ಕಿರುಕುಳ ನೀಡಿದ್ದಾರೆ. ರಾಷ್ಟ್ರೀಯ ಶಿಬಿರದಲ್ಲಿ ಕನಿಷ್ಠ 10-20 ಹುಡುಗಿಯರು ನನ್ನ ಬಳಿ ಬಂದು ತಮ್ಮ ಕಥೆಗಳನ್ನು ಹೇಳಿದ್ದಾರೆ" ಎಂದು ಅವರು ಕಣ್ಣೀರು ಹಾಕಿದರು.

Commonwealth Games 2022: ಭಜರಂಗ್‌ ಪೂನಿಯಾಗೆ ಸ್ವರ್ಣ, ಜನ್ಮದಿನದಂದೇ ಬೆಳ್ಳಿ ಗೆದ್ದ ಅನ್ಶು ಮಲೀಕ್‌!

- ಲೈಂಗಿಕ ಕಿರುಕುಳ ಆರೋಪದ ನಂತರ ದೇಶದ ರಾಷ್ಟ್ರೀಯ ಸೈಕ್ಲಿಂಗ್ ತಂಡದ ಕೋಚ್ ಅನ್ನು ವಜಾಗೊಳಿಸಿದ ತಿಂಗಳುಗಳ ನಂತರ ಈ ಆರೋಪಗಳು ಬಂದಿವೆ.

- ಮಹಿಳೆಯರ ಸಮಸ್ಯೆಗಳನ್ನು ನೋಡಿಕೊಳ್ಳುವ ಸ್ಥಳೀಯ ಸಂಸ್ಥೆಯಾದ ದೆಹಲಿ ಮಹಿಳಾ ಆಯೋಗವು ಕ್ರೀಡಾ ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿದ್ದು, ಪ್ರಕರಣ ದಾಖಲಿಸುವಂತೆ ನಗರ ಪೊಲೀಸರಿಗೆ ಸೂಚಿಸಿದೆ. ಸಂಘಟನೆಯ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರು ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಭೇಟಿ ಮಾಡಿದರು.

click me!