ಫಿಫಾ ಫುಟ್ಬಾಲ್ ವಿಶ್ವಕಪ್ ಮೆಲುಕು- 1938 ರಲ್ಲಿ ಕಪ್ ಉಳಿಸಿಕೊಂಡ ಇಟಲಿ

 |  First Published May 29, 2018, 11:14 AM IST

ಫುಟ್ಬಾಲ್ ವಿಶ್ವಕಪ್ ಕೂಟದ ಆರಂಭಿಕ ಹಂತದಲ್ಲೇ ಇಟಲಿ ಬಲಿಷ್ಠ ತಂಡವಾಗಿ ರೂಪುಗೊಂಡಿತ್ತು. 1938ರಲ್ಲಿ ನಡೆದ 3ನೇ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇಟಲಿ ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದು ದಾಖಲೆ ಬರೆಯಿತು.


ಬೆಂಗಳೂರು(ಮೇ.29): 3ನೇ ಫಿಫಾ ಫುಟ್ಬಾಲ್ ವಿಶ್ವಕಪ್ ನಡೆದಿದ್ದು 1938ರಲ್ಲಿ. ಈ ಬಾರಿ ಟೂರ್ನಿಗೆ ಆತಿಥ್ಯ ವಹಿಸಿದ್ದಿದ್ದು ಫ್ರಾನ್ಸ್. ಈ ಬಾರಿ 15 ತಂಡಗಳು ಪಾಲ್ಗೊಂಡಿದ್ದವು. 10 ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆದವು. ನೇರ ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಿತು. ನಿಗದಿತ 90 ನಿಮಿಷಗಳಲ್ಲಿ ಪಂದ್ಯ ಟೈ ಆದರೆ, 30 ನಿಮಿಷ ಹೆಚ್ಚುವರಿ ಸಮಯ ನೀಡಲಾಗುತ್ತಿತ್ತು. ಆಗಲೂ ವಿಜೇತ ತಂಡ
ನಿರ್ಧಾರವಾಗದಿದ್ದರೆ ಹೊಸದಾಗಿ ಪಂದ್ಯ ನಡೆಸಲಾಗುತ್ತಿತ್ತು. ನೇರ ನಾಕೌಟ್ ಮಾದರಿ ಅನುಸರಿಸಿದ ಕೊನೆ ವಿಶ್ವಕಪ್ ಇದು ಎನ್ನುವುದು ವಿಶೇಷ. 

ಕೇವಲ 16 ದಿನಗಳ ಕಾಲ ನಡೆದ ಟೂರ್ನಿಯ ಸೆಮೀಸ್‌ಗೆ ಇಟಲಿ, ಬ್ರೆಜಿಲ್, ಹಂಗೇರಿ ಹಾಗೂ ಸ್ವೀಡನ್ ಪ್ರವೇಶಿಸಿದವು. ಇಟಲಿ ಹಾಗೂ ಹಂಗೇರಿ ಸೆಮೀಸ್‌ನಲ್ಲಿ ಗೆದ್ದು ಫೈನಲ್‌ಗೇರಿದವು. ಫೈನಲ್‌ನಲ್ಲಿ ಇಟಲಿ ತಂಡ ಹಂಗೇರಿ ವಿರುದ್ಧ 4-2 ಗೋಲುಗಳ ಗೆಲುವು ಸಾಧಿಸಿ ಸತತ 2ನೇ ವರ್ಷ ಚಾಂಪಿಯನ್ ಆಯಿತು. 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸ್ವೀಡನ್ ವಿರುದ್ಧ ಬ್ರೆಜಿಲ್ 4-2 ಗೋಲುಗಳ ಜಯಗಳಿಸಿತು. ಸತತ 2 ವರ್ಷ ಒಂದೇ ಕೋಚ್ ಮಾರ್ಗದರ್ಶನದಲ್ಲಿ (ವಿಟ್ಟೊರಿಯೊ ಪೊಜೊ) ವಿಶ್ವಕಪ್ ಗೆದ್ದ ಏಕೈಕ ತಂಡ ಎನ್ನುವ ದಾಖಲೆಯನ್ನು ಇಟಲಿ ಬರೆಯಿತು.
 

Latest Videos

click me!