ಫುಟ್ಬಾಲ್ ಮ್ಯಾಚ್'ಗೆ ಡ್ರಗ್ಸ್ ಒಯ್ಯಲು ಅನುಮತಿ..!

By Suvarna Web DeskFirst Published Mar 3, 2018, 4:06 PM IST
Highlights

ವೈದ್ಯರ ಶಿಫಾರಸು ಪತ್ರವಿದ್ದರೆ ಗಾಂಜಾ, ಕೊಕೇನ್ ಸೇರಿದಂತೆ 7 ಮಾದಕ ದ್ಯವ್ಯಗಳನ್ನು ಕ್ರೀಡಾಂಗಣಗಳಿಗೆ ಒಯ್ಯಬಹುದಾಗಿದೆ.

ಮಾಸ್ಕೊ(ಮಾ.03): ಇದೇ ವರ್ಷ ಜು.14ರಿಂದ ರಷ್ಯಾದಲ್ಲಿ ಆರಂಭಗೊಳ್ಳಲಿರುವ ಫೀಫಾ ಫುಟ್ಬಾಲ್ ವಿಶ್ವಕಪ್ ವೇಳೆ ಕ್ರೀಡಾಂಗಣಗಳಿಗೆ ಮಾದಕ ದ್ರವ್ಯಗಳನ್ನು ಕೊಂಡೊಯ್ಯಲು ಅಭಿಮಾನಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ವೈದ್ಯರ ಶಿಫಾರಸು ಪತ್ರವಿದ್ದರೆ ಗಾಂಜಾ, ಕೊಕೇನ್ ಸೇರಿದಂತೆ 7 ಮಾದಕ ದ್ಯವ್ಯಗಳನ್ನು ಕ್ರೀಡಾಂಗಣಗಳಿಗೆ ಒಯ್ಯಬಹುದಾಗಿದೆ.

ಆದರೆ ಫುಟ್ಬಾಲ್ ಅಭಿಮಾನಿಗಳು ಡ್ರಗ್ಸ್ ಅನ್ನು ಸ್ಟೇಡಿಯಂ ಒಳಗೆ ಉಪಯೋಗಿಸುವಂತಿಲ್ಲ. ಅಲ್ಲದೇ ಹಾಲಿ ಆಲ್ಕೋಹಾಲ್ ಹಾಗೂ ಡ್ರಗ್ಸ್'ನಿಂದ ಹಾನಿಯುಂಟಾಗುತ್ತದೆ ಎಂಬ ಬಗ್ಗೆ ಫೀಫಾ ಸ್ಟೇಡಿಯಂ ಕಮಿಟಿಯು ಮೈದಾನ ಪ್ರವೇಶಿಸುವ ಗೇಟ್'ಗಳಲ್ಲೇ ಅರಿವು ಮೂಡಿಸುವ ಕೆಲಸವನ್ನು ಮಾಡಲಿದೆ ಎಂದು ಮಾಸ್ಕೋ ಟೈಮ್ಸ್ ವರದಿ ಮಾಡಿದೆ.

 

click me!