ಸೌತ್ ಆಫ್ರಿಕಾ-ವೆಸ್ಟ್ ಇಂಡೀಸ್ ವಿಶ್ವಕಪ್ ಪಂದ್ಯ- ಆತಂಕದಲ್ಲಿ ಡುಪ್ಲೆಸಿಸ್ ಸೈನ್ಯ!

Published : Jun 10, 2019, 05:35 PM IST
ಸೌತ್ ಆಫ್ರಿಕಾ-ವೆಸ್ಟ್ ಇಂಡೀಸ್ ವಿಶ್ವಕಪ್ ಪಂದ್ಯ- ಆತಂಕದಲ್ಲಿ ಡುಪ್ಲೆಸಿಸ್ ಸೈನ್ಯ!

ಸಾರಾಂಶ

ಸೌಥಾಂಪ್ಟನ್‌ನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಸದ್ಯದ ಪರಿಸ್ಥಿತಿ ಏನು? ಪಂದ್ಯ ಮತ್ತೆ ಆರಂಭವಾಗುತ್ತಾ? ಇಲ್ಲಿದೆ ವಿವರ.

ಸೌಥಾಂಪ್ಟನ್(ಜೂ.10): ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹೋರಾಟಕ್ಕೆ ಮಳೆ ಕಾಟ ಜೋರಾಗಿದೆ. ಈಗಾಗಲೇ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಸಂಪೂರ್ಣ ಮಳೆಗೆ ಆಹುತಿಯಾಗಿದೆ. ಇದೀಗ ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ. ಹೀಗಾಗಿ ಪಂದ್ಯ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ನಿರಂತವಾಗಿ ಸುರಿಯುತ್ತಿರುವ ಮಳೆ ಸೌತ್ಆಫ್ರಿಕಾ ತಂಡದ ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ: ಯುವರಾಜ್ ಸಿಂಗ್ ನಿವೃತ್ತಿ- ವಿಶ್ವಕಪ್ ಹೀರೋಗೆ ಶುಭಕೋರಿದ ಲೆಜೆಂಡ್ಸ್!

ಟಾಸ್ ಸೋತು ಬ್ಯಾಟಿಂಗ್ ಇಳಿದ ಸೌತ್ ಆಫ್ರಿಕಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತು. ಹಶೀಮ್ ಅಮ್ಲಾ ಹಾಗೂ ಏಡೈನ್ ಮಕ್ರಾಂ ಒಂಕಿಂಗೆ ಪೆವಿಲಿಯನ್ ಸೇರಿಕೊಂಡರು. ಸೌತ್ ಆಫ್ರಿಕಾ 7.3 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 29 ರನ್‌ ಸಿಡಿಸಿತು. ಈ ವೇಳೆ ಸುರಿದ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು.

ಪಂದ್ಯ ಪುನರ್ ಆರಂಭಕ್ಕೆ ಮಳೆ ಅವಕಾಶ ನೀಡುತ್ತಿಲ್ಲ. ಸದ್ಯ ಮಳೆ ಕಡಿಮೆಯಾಗಿದೆ. ಆದರೆ ಸಂಪೂರ್ಣವಾಗಿ ನಿಂತಿಲ್ಲ. ಈಗಾಗಲೇ ಆಡಿದ 3 ಪಂದ್ಯದಲ್ಲಿ ಮೂರರಲ್ಲೂ ಸೋತಿರುವ ಸೌತ್ ಆಫ್ರಿಕಾಗೆ ಈ ಪಂದ್ಯ ಮಹತ್ವದ್ದಾಗಿದೆ. ಈ ಪಂದ್ಯ ರದ್ದಾದರೆ ಸೌತ್ಆಫ್ರಿಕಾ ವಿಶ್ವಕಪ್ ಪಯಣ ಮತ್ತಷ್ಟು ಕಠಿಣವಾಗಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?