ಮಹಿಳಾ ಟಿ20 ವಿಶ್ವಕಪ್: ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾಗೆ ಆಘಾತ!

By Web DeskFirst Published Nov 23, 2018, 9:31 AM IST
Highlights

ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಹೋರಾಟ ಅಂತ್ಯಗೊಂಡಿದೆ. ಲೀಗ್ ಹಂತದಲ್ಲಿ ಬಲಿಷ್ಠ ತಂಡಗಳನ್ನ ಮಣಿಸಿ ಗೆಲುವಿನ ನಾಗಾಲೋಟದಲ್ಲಿದ್ದ ಟೀಂ ಇಂಡಿಯಾ ಸೆಮಿಫೈನಲ್ ಹೋರಾಟದಲ್ಲಿ ಎಡವಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್!

ಆ್ಯಂಟಿಗುವಾ(ನ.23): ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾನಾಗಿ ಸೆಮಿಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾ ಹೋರಾಟ ಅಂತ್ಯವಾಗಿದೆ. ಇಂಗ್ಲೆಂಡ್ ವಿರುದ್ಧ ಸೆಮೀಸ್ ಹೋರಾಟದಲ್ಲಿ ಭಾರತ ಮುಗ್ಗರಿಸಿದೆ. ಈ ಮೂಲಕ 2017ರ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಳ್ಳಲು ಹೋದ ಭಾರತ ವನಿತೆಯರಿಗೆ ನಿರಾಸೆಯಾಗಿದೆ.

ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ ಮಹಿಳಾ ತಂಡ, ಮತ್ತೆ ಇಂಗ್ಲೆಂಡ್ ವಿರುದ್ಧ ಸೋಲು ಅನುಭವಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಯಿತು. ಸ್ಮೃತಿ ಮಂದನಾ ಹಾಗೂ ಜೆಮಿಮಾ ರೋಡ್ರಿಗ್ರಸ್ ಹೊರತು ಪಡಿಸಿದರೆ ಇತರ ಯಾವ ಆಟಗಾರ್ತಿಯರೂ ರನ್ ಸಿಡಿಸಲಿಲ್ಲ.

ಮಂದನಾ 34 ರನ್ ಸಿಡಿಸಿದರೆ, ರೊಡ್ರಿಗ್ರಸ್ 26 ರನ್‌ ಕಾಣಿಕೆ ನೀಡಿದರು. ಇನ್ನು ತಾನಿಯಾ ಭಾಟಿಯಾ, ನಾಯಕಿ ಹರ್ಮನ್‌ಪ್ರೀತ್ ಕೌರ್, ಕನ್ನಡತಿ ವೇದಾ ಕೃಷ್ಣಮೂರ್ತಿ ಸೇರಿದಂತೆ ಭಾರತ ತಂಡದ ಎಲ್ಲಾ ಆಟಗಾರ್ತಿಯರು ಹೋರಾಟ ನೀಡಲಿಲ್ಲ. ಹೀಗಾಗಿ ಟೀಂ ಇಂಡಿಯಾ 19.3 ಓವರ್‌ಗಳಲ್ಲಿ  112 ರನ್‌ಗೆ ಆಲೌಟ್ ಆಯಿತು.

113 ರನ್ ಸುಲಭ ಟಾರ್ಗೆಟ್ ಪಡೆದ ಇಂಗ್ಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ಡೇನಿಯಲ್ ವೈಟ್ ಟ್ಯಾಮಿ ಬೇಮೌಂಟ್ ಬಹುಬೇಗನೆ ಪೆವಿಲಿಯನ್ ಸೇರಿದರು. ಆದರೆ ಆ್ಯಮಿ ಎಲೆನ್ ಜೋನ್ಸ್ ಹಾಗೂ ನಟೇಲಿ ಸ್ಕಿವರ್ ಜೊತೆಯಾಟದಿಂದ ಇಂಗ್ಲೆಂಡ್ 17.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಇಂಗ್ಲೆಂಡ್ ಫೈನಲ್ ಪ್ರವೇಶಿತು. 
 

click me!