ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌: 4ನೇ ಸುತ್ತಿಗೆ ಆಲ್ಕರಜ್‌, ಸಬಲೆಂಕಾ

Naveen Kodase   | Kannada Prabha
Published : Jul 06, 2025, 09:42 AM IST
Carlos Alcaraz

ಸಾರಾಂಶ

ವಿಂಬಲ್ಡನ್‌ನಲ್ಲಿ ಪುರುಷರ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಆಲ್ಕರಜ್‌ 4ನೇ ಸುತ್ತಿಗೆ ಪ್ರವೇಶ, ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಕ್ರೇಜಿಕೋವಾ 3ನೇ ಸುತ್ತಿನಲ್ಲೇ ಸೋತು ನಿರ್ಗಮನ. ಸಿನ್ನರ್‌, ಸಬಲೆಂಕಾ ಮತ್ತು ಸ್ವಿಯಾಟೆಕ್‌ 4ನೇ ಸುತ್ತಿಗೆ ಲಗ್ಗೆ.

ಲಂಡನ್‌: ವಿಂಬಲ್ಡನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಕಾರ್ಲೋಸ್‌ ಆಲ್ಕರಜ್‌ 4ನೇ ಸುತ್ತಿಗೆ ಪ್ರವೇಶಿಸಿದರೆ, ಮಹಿಳಾ ಸಿಂಗಲ್ಸ್‌ನ ಹಾಲಿ ಚಾಂಪಿಯನ್‌ ಬಾರ್ಬೊರಾ ಕ್ರೇಜಿಕೋವಾ 3ನೇ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.

ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಸ್ಪೇನ್‌ನ ಆಲ್ಕರಜ್‌, ಜರ್ಮನಿಯ ಶ್ರೇಯಾಂಕ ರಹಿತ ಆಟಗಾರ ಜಾನ್‌ ಲೆನ್ನಾರ್ಡ್‌ ಸ್ಟ್ರಫ್‌ ವಿರುದ್ಧ 6-1, 3-6, 6-3, 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿ ಮುನ್ನಡೆದರು. ಮಹಿಳಾ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ಕ್ರೇಜಿಕೋವಾ, ಅಮೆರಿಕದ ಎಮ್ಮಾ ನವಾರೊ ವಿರುದ್ಧ 6-2, 3-6, 4-6 ಸೆಟ್‌ಗಳಲ್ಲಿ ಸೋತು ಹೊರಬಿದ್ದರು.

ಇನ್ನು, ವಿಶ್ವ ನಂ.1 ಟೆನಿಸಿಗರಾದ ಯಾನ್ನಿಕ್‌ ಸಿನ್ನರ್‌ ಹಾಗೂ ಅರೈನಾ ಸಬಲೆಂಕಾ ಸಹ 4ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಸ್ಪೇನ್‌ನ ಮಾರ್ಟಿನೆಜ್‌ ವಿರುದ್ಧ ಸಿನ್ನರ್‌ 6-1, 6-3, 6-1 ಸೆಟ್‌ಗಳಲ್ಲಿ ಗೆದ್ದರೆ, ಸಬಲೆಂಕಾ, ಬ್ರಿಟನ್‌ನ ತಾರಾ ಆಟಗಾರ್ತಿ ಹಾಗೂ ಮಾಜಿ ಚಾಂಪಿಯನ್‌ ಎಮ್ಮಾ ರಾಡುಕಾನು ವಿರುದ್ಧ 7-6(6), 6-4 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಮಾಜಿ ನಂ.1 ಇಗಾ ಸ್ವಿಯಾಟೆಕ್‌ ಸಹ 4ನೇ ಸುತ್ತಿಗೇರಿದರು.

ಕೆನಡಾ ಓಪನ್‌: ಸೆಮಿಗೆ ಭಾರತದ ಶ್ರೀಕಾಂತ್‌ ಲಗ್ಗೆ

ಕಾಲ್ಗರಿ: ಭಾರತದ ಕಿದಂಬಿ ಶ್ರೀಕಾಂತ್‌ ಇಲ್ಲಿ ನಡೆಯುತ್ತಿರುವ ಕೆನಡಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರಿಸಿದ್ದು, ಪುರುಷರ ಸಿಂಗಲ್ಸ್‌ನ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಕ್ವಾರ್ಟರ್‌ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಚೈನೀಸ್‌ ತೈಪೆಯ ಚೌ ಟಿಯನ್‌ ಚೆನ್‌ ವಿರುದ್ಧ 21-18, 21-9 ಗೇಮ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಶ್ರೀಕಾಂತ್‌ಗೆ ಸಮೀಸ್‌ನಲ್ಲಿ ಜಪಾನ್‌ನ ಕೆಂಟೊ ನಿಶಿಮೊಟೊ ಎದುರಾಗಲಿದ್ದಾರೆ. ಮತ್ತೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಶಂಕರ್‌ ಸುಬ್ರಮಣಿಯನ್‌ 15-21, 21-5, 17-21ರಲ್ಲಿ ನಿಶಿಮೊಟೊ ವಿರುದ್ಧ ಸೋತರು. ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ನಲ್ಲಿ ಶ್ರಿಯಾನ್ಶಿ ವಲಿಶೆಟ್ಟಿ ಡೆನ್ಮಾರ್ಕ್‌ನ ಅಮಾಲಿ ಸಲ್ಕ್ಜ್‌ ವಿರುದ್ಧ ಪರಾಭವಗೊಂಡರು.

ಎಎಫ್‌ಸಿ ಏಷ್ಯನ್‌ ಕಪ್‌ ಫೈನಲ್ಸ್‌ಗೆ ಭಾರತ ಮಹಿಳಾ ತಂಡ ಪ್ರವೇಶ

ಚಿಯಾಂಗ್‌ ಮೈ (ಥಾಯ್ಲೆಂಡ್‌): ಭಾರತ ಮಹಿಳಾ ಫುಟ್ಬಾಲ್‌ ತಂಡ 2026ರ ಎಎಫ್‌ಸಿ ಏಷ್ಯನ್‌ ಕಪ್‌ ಫೈನಲ್ಸ್‌ ಟೂರ್ನಿಗೆ ಅರ್ಹತೆ ಪಡೆದಿದೆ. ಅರ್ಹತಾ ಟೂರ್ನಿಯ ಅಂತಿಮ ಪಂದ್ಯದಲ್ಲಿ ಶನಿವಾರ ಥಾಯ್ಲೆಂಡ್‌ ವಿರುದ್ಧ ಭಾರತ 2-1 ಗೋಲುಗಳ ಗೆಲುವು ಸಾಧಿಸಿತು. ಇದರೊಂದಿಗೆ ಆಡಿದ ನಾಲ್ಕೂ ಪಂದ್ಯಗಳಲ್ಲಿ ಗೆದ್ದು ಗುಂಪಿನಲ್ಲಿ ಮೊದಲ ಸ್ಥಾನ ಪಡೆಯಿತು. ಅರ್ಹತಾ ಟೂರ್ನಿಯ ಮುಖಾಂತರ ಭಾರತ ಏಷ್ಯನ್‌ ಕಪ್‌ ಫೈನಲ್ಸ್‌ಗೇರಿದ್ದ ಇದೇ ಮೊದಲು. ಟೂರ್ನಿಯ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ವೇದಿಕೆ ರೆಡಿ; ಸೆಮೀಸ್‌, ಫೈನಲ್‌ಗೆ ಭಾರತವೇ ಆತಿಥ್ಯ!
ಕ್ರೀಡಾಲೋಕದ ಮೇಲೆ ಯುದ್ದದ ಕಾರ್ಮೊಡ; ನಾವಿದ್ದ ಸ್ಥಳದ ಸಮೀಪವೇ ಸ್ಪೋಟವಾಯಿತು ಎಂದ ಸಿಂಧು!