ಟೆನಿಸ್ ಅಂಕಣದಲ್ಲಿ ಕ್ರಿಕೆಟ್ ಆಡಿದ ಫೆಡರರ್..! ವಿಡಿಯೋ ವೈರಲ್..!

Published : Jul 10, 2018, 12:04 PM IST
ಟೆನಿಸ್ ಅಂಕಣದಲ್ಲಿ ಕ್ರಿಕೆಟ್ ಆಡಿದ ಫೆಡರರ್..! ವಿಡಿಯೋ ವೈರಲ್..!

ಸಾರಾಂಶ

ಕೆಲವೇ ನಿಮಿಷಗಳಲ್ಲಿ ಫೆಡರರ್‌ ಕ್ರಿಕೆಟ್‌ ಶಾಟ್‌ ವಿಡಿಯೋ ಟ್ವೀಟರ್‌ನಲ್ಲಿ ಅಪ್‌ಲೋಡ್‌ ಆಯಿತು. ವಿಶ್ವದ ಶ್ರೇಷ್ಠ ಟೆನಿಸಿಗ ಕ್ರಿಕೆಟ್‌ ಕಲೆ ಪ್ರದರ್ಶಿಸಿದ್ದನ್ನು ಅಭಿಮಾನಿಗಳು ಕೊಂಡಾಡಿದರು. 

ಲಂಡನ್‌[ಜು.10]: ವಿಶ್ವ ನಂ.2 ರೋಜರ್‌ ಫೆಡರರ್‌ ಸೋಮವಾರ ವಿಂಬಲ್ಡನ್‌ ಅಂಕಣದಲ್ಲಿ ಕ್ರಿಕೆಟ್‌ ಕಲೆ ಪ್ರದರ್ಶಿಸಿದರು. ಎದುರಾಳಿ ಏಡ್ರಿಯನ್‌ ಬಾರಿಸಿದ ಚೆಂಡನ್ನು ಫೆಡರರ್‌, ಕ್ರಿಕೆಟ್‌ನಲ್ಲಿ ಡಿಫೆಂಡ್‌ ಮಾಡುವ ರೀತಿಯಲ್ಲಿ ಹೊಡೆದಿದ್ದು ನೆರೆದಿದ್ದ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. 

ಕೆಲವೇ ನಿಮಿಷಗಳಲ್ಲಿ ಫೆಡರರ್‌ ಕ್ರಿಕೆಟ್‌ ಶಾಟ್‌ ವಿಡಿಯೋ ಟ್ವೀಟರ್‌ನಲ್ಲಿ ಅಪ್‌ಲೋಡ್‌ ಆಯಿತು. ವಿಶ್ವದ ಶ್ರೇಷ್ಠ ಟೆನಿಸಿಗ ಕ್ರಿಕೆಟ್‌ ಕಲೆ ಪ್ರದರ್ಶಿಸಿದ್ದನ್ನು ಅಭಿಮಾನಿಗಳು ಕೊಂಡಾಡಿದರು. ಫೆಡರರ್‌, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌, ಭಾರತ ತಂಡದ ನಾಯಕ ಕೊಹ್ಲಿ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ರೋಜರ್ ಫೆಡಡರ್ ಇದೀಗ ಎಂಟರ ಘಟ್ಟದಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್’ಸನ್ ಅವರನ್ನು ಎದುರಿಸಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?