ಐಸಿಸಿ ಏಕದಿನ ವಿಶ್ವಕಪ್‌: 200 ದೇಶಗಳಲ್ಲಿ ಪ್ರಸಾರ

By Web DeskFirst Published May 22, 2019, 5:35 PM IST
Highlights

12ನೇ ಆವೃತ್ತಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಕ್ರಿಕೆಟ್ ಮಹಾ ಕದನ ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಭಾರತ ಸೇರಿದಂತೆ 200 ದೇಶಗಳಲ್ಲಿ ವಿಶ್ವಕಪ್ ಕ್ರಿಕೆಟ್ ನೇರ ಪ್ರಸಾರಗೊಳ್ಳಲಿದೆ. ಯಾವ ದೇಶಗಳಲ್ಲಿ ಯಾವ ಚಾನಲ್’ನಲ್ಲಿ ವಿಶ್ವಕಪ್ ಪ್ರಸಾರವಾಗಲಿದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಲಂಡನ್‌[ಮೇ.22]: ಮೇ 30ರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಭಾರತ, ಆಸ್ಪ್ರೇಲಿಯಾ ಸೇರಿದಂತೆ ಒಟ್ಟು 200 ದೇಶಗಳಲ್ಲಿ ನೇರ ಪ್ರಸಾರವಾಗಲಿದೆ ಎಂದು ಐಸಿಸಿ ತಿಳಿಸಿದೆ. 

ಈ ವರ್ಷ ಚೀನಾ, ದಕ್ಷಿಣ ಕೊರಿಯಾ, ಫಿಲಿಪ್ಪೀನ್ಸ್‌, ಥಾಯ್ಲೆಂಡ್‌, ವಿಯೆಟ್ನಾಂ, ಕೆನಡಾ ಸೇರಿದಂತೆ ಇನ್ನೂ ಹಲವು ರಾಷ್ಟ್ರಗಳಲ್ಲಿ ಪಂದ್ಯಗಳು ಪ್ರಸಾರವಾಗಲಿವೆ. ಇದೇ ಮೊದಲ ಬಾರಿಗೆ ಆಫ್ಘಾನಿಸ್ತಾನದಲ್ಲಿ ವಿಶ್ವಕಪ್‌ ಪಂದ್ಯಗಳು ನೇರ ಪ್ರಸಾರವಾಗಲಿದ್ದು, ಅಲ್ಲಿನ ಅಭಿಮಾನಿಗಳು ಉತ್ಸುಕರಾಗಿದ್ದಾರೆ.
ಇದಷ್ಟೇ ಅಲ್ಲದೇ ಭಾರತದಲ್ಲಿ ಒಟ್ಟು 7 ಭಾಷೆಗಳಲ್ಲಿ ಪಂದ್ಯಗಳ ವೀಕ್ಷಕ ವಿವರಣೆ ದೊರೆಯಲಿದೆ. ಸ್ಟಾರ್ ಸ್ಪೋರ್ಟ್ಸ್’ನ ಒಟ್ಟು 50 ವೀಕ್ಷಕ ವಿವರಣೆಗಾರರು ಹಿಂದಿ, ಕನ್ನಡ, ತಮಿಳು, ತೆಲುಗು, ಬಾಂಗ್ಲಾ ಮತ್ತು ಮರಾಠಿ ಭಾಷೆಗಳಲ್ಲಿ ಕಾಮೆಂಟ್ರಿ ನೀಡಲಿದ್ದಾರೆ.  

ಯಾವ ದೇಶದಲ್ಲಿ, ಯಾವ ಚಾನೆಲ್’ನಲ್ಲಿ ವಿಶ್ವಕಪ್ ಕ್ರಿಕೆಟ್: ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್

ಸ್ಟಾರ್ ಸ್ಪೋರ್ಟ್ಸ್: [ಭಾರತ ಮತ್ತು ಭಾರತೀಯ ಉಪಖಂಡ]

ಸ್ಕೈ ಸ್ಪೋರ್ಟ್ಸ್[SKY]: (ಯುನೈಟೆಡ್ ಕಿಂಗ್’ಡಂ[UK] ಮತ್ತು ರಿಪಬ್ಲಿಕ್ ಆಫ್ ಐರ್ಲೆಂಡ್)

ಸೂಪರ್ ಸ್ಪೋರ್ಟ್: [ದಕ್ಷಿಣ ಆಫ್ರಿಕಾ ಮತ್ತು ಆಫ್ರಿಕಾದ ಸಹರಾ ಉಪಖಂಡಗಳಲ್ಲಿ]

OSN: [ಆಫ್ರಿಕಾದ ಉತ್ತರ ಮತ್ತು ಮಧ್ಯ ಪೂರ್ವ ದೇಶಗಳಲ್ಲಿ]

ಫಾಕ್ಸ್ ಸ್ಪೋರ್ಟ್ಸ್ ಆಸ್ಟ್ರೇಲಿಯಾ ಮತ್ತು ಚಾನೆಲ್ 9: [ಆಸ್ಟ್ರೇಲಿಯಾ]

ವಿಲ್ಲೋ ಟಿವಿ: [USA]

ಸ್ಕೈ ಟಿವಿ ಮತ್ತು ಪ್ರೈಮ್: [ನ್ಯೂಜಿಲೆಂಡ್]

ಟೆನ್ ಸ್ಪೋರ್ಟ್ಸ್ ಮತ್ತು P ಟಿವಿ: [ಪಾಕಿಸ್ತಾನ]

ESPN: [ಕೆರಿಬಿಯನ್]

ಗಾಜಿ ಟಿವಿ, ಮಾಸರಂಗ ಮತ್ತು ಬಿಟಿವಿ: [ಬಾಂಗ್ಲಾದೇಶ]

SLRC: [ಶ್ರೀಲಂಕಾ]

ಫಾಕ್ಸ್ ನೆಟ್’ವರ್ಕ್ ಗ್ರೂಫ್: [ಚೀನಾ ಹಾಗೂ ಏಷ್ಯಾ ಈಶಾನ್ಯ]

ಡಿಜಿಸೆಲ್: [ಏಷ್ಯಾ ಫೆಸಿಫಿಕ್]

ರೇಡಿಯೋ ಟಿವಿ ಆಫ್ಘಾನಿಸ್ತಾನ: [ಆಫ್ಘಾನಿಸ್ತಾನ]

ಯುಪ್ ಟಿವಿ: (ಯೂರೋಪ್ ಹಾಗೂ ಏಷ್ಯಾದ ಕೇಂದ್ರದ ಭಾಗಗಳಲ್ಲಿ)

ಏಕದಿನ ವಿಶ್ವಕಪ್’ನ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...


 

click me!