ನನಗೆ ತಲೆಕೆಟ್ಟಿದೆಯಾ ಎಂದು ಸ್ಟಾರ್ ಬೌಲರ್ ಮೇಲೆ ಎಂ ಎಸ್ ಧೋನಿ ಹರಿಹಾಯ್ದಿದ್ದೇಕೆ?

First Published Jul 10, 2018, 3:47 PM IST
Highlights

ನನಗೆ ತೆಲೆಕಟ್ಟು 300 ಪಂದ್ಯ ಆಡಿದ್ದೇನಾ? ಇದು ಟೀಂ ಇಂಡಿಯಾ ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ ತಾಳ್ಮೆ ಕಳೆದುಕೊಂಡ ರೀತಿ. ಇಡೀ ಪಂದ್ಯದಲ್ಲಿ ಕೂಲ್ ಆಗಿರೋ ಧೋನಿ ಹಲವು ಬಾರಿ ತಾಳ್ಮೆ ಕಳೆದುಕೊಂಡಿದ್ದಾರೆ. ಇಲ್ಲಿದೆ ಧೋನಿಯ ಇನ್‌ಸೈಡ್ ಸ್ಟೋರಿ.

ಲಂಡನ್(ಜು.10): ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ, ಕೂಲ್ ಕ್ಯಾಪ್ಟನ್ ಎಂದೇ ಗುರುತಿಸಿಕೊಂಡವರು. ಆದರೆ ಧೋನಿ ಹಲವು ಬಾರಿ ಮೈದಾನದಲ್ಲಿ ತಾಳ್ಮೆ ಕಳೆದುಕೊಂಡ ಉದಾಹರಣೆಗಳಿವೆ. ಇದೇ ರೀತಿ ಧೋನಿ ಗರಂ ಆಗಿದ್ದ ಸಂದರ್ಭವನ್ನ ಟೀಂ ಇಂಡಿಯಾ ಯುವ ಸ್ಪಿನ್ನರ್ ಕುಲದೀಪ್ ಯಾದವ್ ಬಹಿರಂಗ ಪಡಿಸಿದ್ದಾರೆ.

ಇಂದೋರ್‌ನಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಪಂದ್ಯದಲ್ಲಿ ಧೋನಿ ತಮ್ಮ ಟೆಂಪರ್ ಕಳೆದುಕೊಂಡಿದ್ದರು. ಕಳೆದ ಡಿಸೆಂಬರ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಂಗ್ ಮಾಡಿ 260 ರನ್ ಸಿಡಿಸಿತ್ತು. ಚೇಸ್ ಮಾಡಲು ಕಣಕ್ಕಿಳಿದ ಶ್ರೀಲಂಕಾ ನಿರಾಯಾಸವಾಗಿ ರನ್ ಕಲೆಹಾಕುತ್ತಿತ್ತು.

ತಂಡದ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಹಾಗೂ ಯಜುವೇಂದ್ರ ಚೆಹಾಲ್‌ಗೆ , ಧೋನಿ ಸೂಚನೆ ನೀಡುತ್ತಲೇ ಇದ್ದರು. ಕುಲದೀಪ್ ಯಾದವ್ ಬೌಲಿಂಗ್ ಮಾಡಲು ಬಂದಾಗ, ಧೋನಿ ಕವರ್ ಫೀಲ್ಡರ್ ತೆಗೆದು ಪಾಯಿಂಟ್‌ನಲ್ಲಿ ಫೀಲ್ಡರ್ ಹಾಕುವಂತೆ ಕುಲದೀಪ್‌ಗೆ ಸೂಚಿಸಿದ್ದಾರೆ. ಆದರೆ ಕುಲದೀಪ್ ಪರವಾಗಿಲ್ಲ ಸದ್ಯ ಇರೋ ಹಾಗೇ ಇರಲಿ ಎಂದಿದ್ದಾರೆ.

ಅಷ್ಟರಲ್ಲೇ ಧೋನಿ ಗರಂ ಆಗಿದ್ದಾರೆ. ನನಗೆ ತಲೆಕೆಟ್ಟಿದೆಯಾ? 300 ಪಂದ್ಯ ಸುಮ್ಮನೆ ಆಡಿದ್ದೇನಾ ಎಂದು ಕುಲದೀಪ್ ಯಾದವ್‌ ವಿರುದ್ದ ಹರಿಹಾಯ್ದಿದ್ದಾರೆ. ಅಷ್ಟರಲ್ಲೇ ಕುಲದೀಪ್ ಬೆಚ್ಚಿ ಬಿದ್ದು ಫೀಲ್ಡಿಂಗ್ ಚೇಂಜ್ ಮಾಡಿದರು. ಇಷ್ಟೇ ಅಲ್ಲ ಮರು ಎಸೆತದಲ್ಲೇ ವಿಕೆಟ್ ಪಡೆದರು.

 ವಿಕೆಟ್ ಪಡೆದ ಸಂಭ್ರಮಾಚರಣೆಯಲ್ಲಿ ಧೋನಿ ಇದೇ ನಾನು ಹೇಳಿದ್ದು ಎಂದು ಕುಲದೀಪ್‌ಗೆ ಹೇಳಿದ್ದಾರೆ.  ಧೋನಿ ಗರಂ ಆಗೋರಿ ವಿಚಾರವನ್ನ ಕುಲದೀಪ್ ಯಾದವ್ ಇತ್ತೀಚೆಗೆ ವಾಟ್ ದಿ ಡಕ್ ಚಾಟ್ ಶೋನಲ್ಲಿ ಹೇಳಿದ್ದಾರೆ.

click me!