ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಐಪಿಎಲ್ ಸ್ಯಾಲರಿಯಲ್ಲಿ ಮಾಡಿದ್ದೇನು?

Published : Jun 08, 2018, 09:52 PM IST
ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಐಪಿಎಲ್ ಸ್ಯಾಲರಿಯಲ್ಲಿ ಮಾಡಿದ್ದೇನು?

ಸಾರಾಂಶ

ಹನ್ನೊಂದನೇ ಆವೃತ್ತಿ ಐಪಿಎಲ್ ಟೂರ್ನಿಗಾಗಿ 3.2 ಕೋಟಿ ರೂಪಾಯಿ ಸಂಭಾವನೆ ಪಡೆದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್, ಸ್ಯಾಲರಿ ದುಡ್ಡಲ್ಲಿ ಏನು ಮಾಡಿದರು. ಸೂರ್ಯಕುಮಾರ್ ಯಾದವ್ ಖರ್ಚು ಮಾಡಿದ ಹಣವೆಷ್ಟು? ಇಲ್ಲಿದೆ ವಿವರ

ಮುಂಬೈ(ಜೂನ್.8): ಮುಂಬೈ ಇಂಡಿಯನ್ಸ್  ತಂಡಕ್ಕೆ ಈ ಬಾರಿಯ ಐಪಿಎಲ್ ಹೆಚ್ಚಿನ ಯಶಸ್ಸು ನೀಡಲಿಲ್ಲ.  ಆದರೆ ಆರಂಭಿಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್‌ಗೆ ಹನ್ನೊಂದನೇ ಆವೃತ್ತಿ ಐಪಿಎಲ್ ಸ್ಮರಣೀಯವಾಗಿತ್ತು. ಈ ಬಾರಿ 512 ರನ್ ಸಿಡಿಸಿ, ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಈ ಮೂಲಕ 3.2 ಕೋಟಿ ಮೊತ್ತ ಪಡೆದ ಸೂರ್ಯಕುಮಾರ್ ಯಾದವ್ ನ್ಯಾಯ ಸಲ್ಲಿಸಿದ್ದಾರೆ.

11ನೇ ಆವೃತ್ತಿ ಐಪಿಎಲ್ ಟೂರ್ನಿಗಾಗಿ 3.2 ಕೋಟಿ ರೂಪಾಯಿ ಪಡೆದ ಸೂರ್ಯಕುಮಾರ್ ಆ ದುಡ್ಡನ್ನ ಏನು ಮಾಡಿದರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸೂರ್ಯಕುಮಾರ್ ಯಾದವ್ ಐಪಿಎಲ್ ಸ್ಯಾಲರಿಯಲ್ಲಿ ಪೋಷಕರಿಗೆ ಕಾರೊಂದನ್ನ ಗಿಫ್ಟ್ ಆಗಿ ನೀಡಿದ್ದಾರೆ.

ಕಾರು ನೀಡಿ ಭಾವುಕರಾಗಿರುವ ಸೂರ್ಯಕುಮಾರ್ ಯಾದವ್, ಇದಕ್ಕಿಂತ ಸಂತಸದ ಸಂದರ್ಭ ಮತ್ತೊಂದಿಲ್ಲ. ನಾನೀಗ ಈ ಸ್ಥಾನದಲ್ಲಿರಲು ನನ್ನ ಪೋಷಕರೇ ಕಾರಣ ಎಂದಿದ್ದಾರೆ. ಸೂರ್ಯುಕುಮಾರ್ ಯಾದವ್ ಸ್ಪೆಷಲ್ ಗಿಫ್ಟ್‌ಗೆ ಕ್ರೀಡಾಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?
T20I ನೂರು ಸಿಕ್ಸರ್ ಕ್ಲಬ್ ಸೇರಿದ ಹಾರ್ದಿಕ್ ಪಾಂಡ್ಯ; ರೋಹಿತ್ ರೆಕಾರ್ಡ್ ಮುರಿತಾರಾ ಈ ಆಲ್ರೌಂಡರ್?