ಇಂಡೋ-ವಿಂಡೀಸ್ ಟೆಸ್ಟ್: ಕೊಹ್ಲಿ ಸೈನ್ಯ 297 ರನ್‌ಗೆ ಆಲೌಟ್!

By Web DeskFirst Published Aug 23, 2019, 9:58 PM IST
Highlights

ವಿಂಡೀಸ್ ತಂಡದ ಕಮೆರ್ ರೋಚ್ ಹಾಗೂ ಗೆಬ್ರಿಯಲ್ ದಾಳಿಗೆ ತತ್ತರಿಸಿದ ಭಾರತ, ಮೊದಲ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸುವಲ್ಲಿ ವಿಫಲವಾಗಿದೆ. ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಹೋರಾಟದಿಂದ ಟೀಂ ಇಂಡಿಯಾ 297 ರನ್ ಸಿಡಿಸಿದೆ.

ಆ್ಯಂಟಿಗಾ(ಆ.23): ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಹೊರತು ಪಡಿಸಿದರೆ ಟೀಂ ಇಂಡಿಯಾದ ಇತರರ ಬ್ಯಾಟ್ಸ್‌‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬಂದಿಲ್ಲ. ರಹಾನೆ 81 ಹಾಗೂ ರವೀಂದ್ರ ಜಡೇಜಾ 58 ರನ್ ತಂಡದ ಗರಿಷ್ಠ ಮೊತ್ತ. ಈ ಇನಿಂಗ್ಸ್‌ನಲ್ಲಿ ಯಾವ ಭಾರತೀಯನೂ ಸೆಂಚುರಿ ದಾಖಲಿಸಿಲ್ಲ. ಹೀಗಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 297 ರನ್‍‌ಗೆ ಆಲೌಟ್ ಆಗಿದೆ.  

ಇದನ್ನೂ ಓದಿ: ಎಡವಿದ ಟೀಂ ಇಂಡಿಯಾ ಮೇಲೆತ್ತಿದ ರಹಾನೆ..!

6 ವಿಕೆಟ್ ನಷ್ಟಕ್ಕೆ 203 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಟೀಂ ಇಂಡಿಯಾಗೆ ರವೀಂದ್ರ ಜಡೇಜಾ ಆಸರೆಯಾದರು. ಮೊದಲ ದಿನ ಅಜಿಂಕ್ಯ ರಹಾನೆ ಹಾಫ್ ಸೆಂಚುರಿ ಸಿಡಿಸಿ ಆಸರೆಯಾಗಿದ್ದರೆ, ದ್ವಿತೀಯ ದಿನ ರವೀಂದ್ರ ಜಡೇಜಾ ಸರದಿ. ದಿಟ್ಟ ಹೋರಾಟ ನೀಡಿದ ರವೀಂದ್ರ ಜಡೇಜಾ ಅರ್ಧಶತಕ ಸಿಡಿಸಿ ನೆರವಾದರು. ರಿಷಬ್ ಪಂತ್ 24 ರನ್ ಕಾಣಿಕೆ ನೀಡಿದರು.

ಇಶಾಂತ್ ಶರ್ಮಾ 19 ರನ್ ಸಿಡಿಸಿದರು. ಮೊಹಮ್ಮದ್ ಶಮಿ ಸೊನ್ನೆ ಸುತ್ತಿದರೆ, ಜಸ್ಪ್ರೀತ್ ಬುಮ್ರಾ 4 ರನ್ ಸಿಡಿಸಿದರು. ರವೀಂದ್ರ ಜಡೇಜಾ 58 ರನ್ ಸಿಡಿಸಿ ಔಟಾಗೋ ಮೂಲಕ ಟೀಂ ಇಂಡಿಯಾ 297 ರನ್‌ಗಳಿಗೆ ಆಲೌಟ್ ಆಯಿತು. ಕೆಮರ್ ರೋಚ್ 4, ಶಾನನ್ ಗೇಬ್ರಿಯಲ್ 3 ,  ರೋಸ್ಟನ್ ಚೇಸ್ 2 ಹಾಗೂ ನಾಯಕ ಜಾಸನ್ ಹೋಲ್ಡರ್ 1 ವಿಕೆಟ್ ಕಬಳಿಸಿದರು.

ಇದನ್ನೂ ಓದಿ: ಕನ್ನಡಿಗ ಅನಿಲ್ ಕುಂಬ್ಳೆ ಟೀಂ ಇಂಡಿಯಾ ಆಯ್ಕೆಗಾರ ಆಗಬೇಕು: ಸೆಹ್ವಾಗ್‌!

ಭಾರತ ಮೊದಲ ಇನ್ನಿಂಗ್ಸ್ ಸಂಕ್ಷಿಪ್ತ ಸ್ಕೋರ್:
ಕೆಎಲ್ ರಾಹುಲ್ 44
ಅಜಿಂಕ್ಯ ರಹಾನೆ 81
ಹನುಮಾ ವಿಹಾರಿ 32
ರವೀಂದ್ರ ಜಡೇಜಾ 58
ರಿಷಬ್ ಪಂತ್  24

click me!