ಎರಡನೇ ಟೆಸ್ಟ್'ಗೆ ನಾಯಕ ಸಸ್ಪೆಂಡ್; ಉಳಿದ ಆಟಗಾರರಿಗೆ ದಂಡ..!

By Suvarna Web DeskFirst Published Dec 5, 2017, 4:11 PM IST
Highlights

ಮಂದಗತಿಯ ಬೌಲಿಂಗ್ ನಡೆಸಿದ ತಪ್ಪಿಗೆ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ವೆಸ್ಟ್'ಇಂಡಿಸ್ ತಂಡದ ನಾಯಕ ಜೇಸನ್ ಹೋಲ್ಡರ್ ಅಮಾನತ್ತಾಗಿದ್ದಾರೆ.

ವೆಲ್ಲಿಂಗ್ಟನ್(ಡಿ.05): ಈಗಾಗಲೇ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 0-1 ಅಂತರದಲ್ಲಿ ಹಿನ್ನಡೆ ಅನುಭವಿಸಿರುವ ವೆಸ್ಟ್'ಇಂಡಿಸ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಹೌದು, ಮಂದಗತಿಯ ಬೌಲಿಂಗ್ ನಡೆಸಿದ ತಪ್ಪಿಗೆ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ವೆಸ್ಟ್'ಇಂಡಿಸ್ ತಂಡದ ನಾಯಕ ಜೇಸನ್ ಹೋಲ್ಡರ್ ಅಮಾನತ್ತಾಗಿದ್ದಾರೆ. ಮೊದಲ ಪಂದ್ಯದ ವೇಳೆ ಮಂದಗತಿಯ ಬೌಲಿಂಗ್ ನಡೆಸಿದ್ದಕ್ಕಾಗಿ ಒಂದು ಪಂದ್ಯದ ಮಟ್ಟಿಗೆ ಹೋಲ್ಡರ್ ಅವರನ್ನು ಅಮಾನತು ಮಾಡಲಾಗಿದ್ದು, ಸಂಭಾವನೆಯ ಶೇ.60% ಮೊತ್ತವನ್ನು ದಂಡ ವಿಧಿಸಲಾಗಿದೆ. ಇನ್ನು ತಂಡದ ಉಳಿದ ಆಟಗಾರರ ಸಂಭಾವನೆಯ 30% ದಂಡ ವಿಧಿಸಲಾಗಿದೆ.

ವೆಲ್ಲಿಂಗ್ಟನ್'ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ವೆಸ್ಟ್'ಇಂಡಿಸ್ ತಂಡವು ಇನಿಂಗ್ಸ್ ಹಾಗೂ 67 ರನ್'ಗಳಿಂದ ಸೋಲು ಕಂಡಿತ್ತು.

12 ತಿಂಗಳಲ್ಲಿ ಎರಡನೇ ಬಾರಿಗೆ ಐಸಿಸಿ ನಿಯಮ ಉಲ್ಲಂಘಿಸಿದ್ದರಿಂದ ಹೋಲ್ಡರ್ ಅವರನ್ನು ಒಂದು ಪಂದ್ಯದ ಮಟ್ಟಿಗೆ ಅಮಾನತು ಮಾಡಲಾಗಿದೆ.

 

click me!