ಟೀಕಾಕಾರರ ಮೇಲೆ ಕಿಡಿಕಾರಿದ ಕುಸ್ತಿಪಟು ವಿನೇಶ್ ಫೋಗಾಟ್
ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಕೂಟದಲ್ಲಿ ಕಂಚಿನ ಪದಕ ಜಯಿಸಿದ್ದ ವಿನೇಶ್
ಅಥ್ಲೀಟ್‌ಗಳು ಕೂಡಾ ಮನುಷ್ಯರೇ, ರೊಬೊಟ್‌ಗಳಲ್ಲ ಎಂದ ಫೋಗಾಟ್
ನವದೆಹಲಿ(ಸೆ.20): ವಿಶ್ವ ಕುಸ್ತಿ ಚಾಂಪಿಯನ್‌ಶಿಪ್ ಬಳಿಕ ತಮ್ಮನ್ನು ಟೀಕಿಸುತ್ತಿರುವವರ ವಿರುದ್ಧ ಭಾರತದ ತಾರಾ ಕುಸ್ತಿ ಪಟು ವಿನೇಶ್ ಫೋಗಾಟ್ ಖಾರವಾಗಿ ಪ್ರತಿಕ್ರಿಯಿಸಿದ್ದು, ಅಥ್ಲೀಟ್‌ಗಳು ರೋಬೋಟ್‌ಗಳಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಸೋಮವಾರ ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡಿರುವ ಅವರು, ‘ಅಥ್ಲೀಟ್‌ಗಳು ಕೂಡಾ ಮನುಷ್ಯರೇ. ಎಲ್ಲಾ ಟೂರ್ನಿಗಳಲ್ಲೂ ನಮಗೆ ರೋಬೋಟ್ ರೀತಿ ಆಡಲು ಸಾಧ್ಯವಿಲ್ಲ. ಅಥ್ಲೀಟ್‌ಗಳು ಕಠಿಣ ಅಭ್ಯಾಸ ನಡೆಸಿ, ಬಹಳಷ್ಟುಕಷ್ಟದಿಂದ ಮೇಲೆ ಬಂದಿರುತ್ತಾರೆ. ಆದರೆ ಅವರ ಬಗ್ಗೆ ಸ್ವಯಂಘೋಷಿತ ಅಭಿಮಾನಿಗಳು, ಕ್ರೀಡಾ ತಜ್ಞರು ಮನೆಯಲ್ಲೇ ಕುಳಿತು ಕಾಮೆಂಟ್ ಮಾಡುತ್ತಾರೆ. ಅಥ್ಲೀಟ್‌ಗಳು ಕೆಲವೊಮ್ಮೆ ಸೋತರೆ ಅವರು ಗೆಲ್ಲಲು ಪ್ರಯತ್ನಿಸಲಿಲ್ಲ ಎಂದರ್ಥವಲ್ಲ ಎಂದು ಫೋಗಾಟ್ ಕಿಡಿಕಾರಿದ್ದಾರೆ.
ವಿಶ್ವ ಕುಸ್ತಿ: ಕಂಚು ಗೆದ್ದು ಭಜರಂಗ್!
ಟೋಕಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಜರಂಗ್ ಪೂನಿಯಾ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲೂ ಪದಕ ಸಾಧನೆ ಮಾಡಿದ್ದಾರೆ. ಪುರುಷರ 65 ಕೆ.ಜಿ. ಫ್ರೀ ಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದರೊಂದಿಗೆ ಈ ಆವೃತ್ತಿಯನ್ನು ಭಾರತ 2 ಪದಕಗಳೊಂದಿಗೆ ಮುಕ್ತಾಯಗೊಳಿಸಿದೆ. ಮಹಿಳೆಯರ ವಿಭಾಗದಲ್ಲಿ ವಿನೇಶ್ ಫೋಗಾಟ್ ಕಂಚಿನ ಪದಕ ಜಯಿಸಿದ್ದರು. ಭಾನುವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪ್ಯುರೆಟೊ ರಿಕೋದ ಸೆಬಾಸ್ಟಿಯನ್ ರಿವೆಲಾ ವಿರುದ್ಧ 11-9 ಅಂಕಗಳಲ್ಲಿ ರೋಚಕ ಗೆಲುವು ಸಾಧಿಸಿದರು.
ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಜಾನ್ ಮೈಕಲ್ ವಿರುದ್ಧ ಸೋತು ನಿರಾಸೆ ಅನುಭವಿಸಿದ್ದ ಭಜರಂಗ್‌ಗೆ ಕಂಚಿನ ಪದಕಕ್ಕೆ ಹೋರಾಟ ನಡೆಸುವ ಅವಕಾಶ ದೊರೆಯಿತು. ಜಾನ್ ಫೈನಲ್ ಪ್ರವೇಶಿಸಿದ ಕಾರಣ ಭಜರಂಗ್ ರಿಪಿಕೇಜ್ ಸುತ್ತಿನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದರು. ರಿಪಿಕೇಜ್ ಸುತ್ತಿನಲ್ಲಿ ಅರ್ಮೇನಿಯಾದ ಟೆವನ್‌ಯಾನ್ ವಿರುದ್ಧ 7-6 ಅಂಕಗಳಲ್ಲಿ ರೋಚಕ ಗೆಲುವು ಸಂಪಾದಿಸಿ ಕಂಚಿನ ಪದಕದ ಪಂದ್ಯಕ್ಕೆ ಪ್ರವೇಶಿಸಿದ್ದರು.
World Wrestling championships: ಎರಡನೇ ಬಾರಿಗೆ ಕಂಚು ಗೆದ್ದು ಇತಿಹಾಸ ಬರೆದ ವಿನೇಶ್ ಫೋಗಾಟ್
ಫೈನಲ್‌ನಲ್ಲೂ ಭಜರಂಗ್‌ಗೆ ಸೋಲುವ ಭೀತಿ ಎದುರಾಗಿತ್ತು. ಒಂದು ಹಂತದಲ್ಲಿ 0-6 ಅಂಕಗಳಿಂದ ಹಿಂದಿದ್ದ ಭಜರಂಗ್, 2ನೇ ಅವಧಿಯಲ್ಲಿ ಪುಟಿದೆದ್ದರು. ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದು ಭಜರಂಗ್‌ಗೆ ಲಾಭವಾಯಿತು. ಕೊನೆಯಲ್ಲಿ ಭಜರಂಗ್ ಗಳಿಸಿದ ಅಂಕದ ವಿರುದ್ಧ ಸೆಬಾಸ್ಟಿಯನ್ ಚಾಲೆಂಜ್ ಮಾಡಿದರೂ, ರೆಫ್ರಿಗಳ ಪುರಸ್ಕಾರ ದೊರೆಯಲಿಲ್ಲ. ಇದರಿಂದಾಗಿ ಭಜರಂಗ್ ಗೆಲುವು ಖಚಿತವಾಯಿತು.
4ನೇ ಬಾರಿಗೆ ವಿಶ್ವ ಕೂಟದಲ್ಲಿ ಪದಕ
2013ರಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಸಾಧನೆ ಮಾಡಿದ್ದ ಭಜರಂಗ್, 2018ರಲ್ಲಿ ಬೆಳ್ಳಿ ಗೆದ್ದಿದ್ದರು. 2019, 2022ರಲ್ಲಿ ಕಂಚಿನ ಪದಕಕ್ಕೆ ಅವರು ಕೊರಳ್ಳೊಡ್ಡಿದ್ದಾರೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ , ಏಷ್ಯನ್ ಚಾಂಪಿಯನ್‌ಶಿಪ್, ವಿಶ್ವ ಅಂಡರ್-23 ಚಾಂಪಿಯನ್‌ಶಿಪ್, ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್, ಏಷ್ಯನ್ ಒಳಾಂಗಣ ಹಾಗೂ ಮಾರ್ಷಲ್ ಆಟ್ಸ್‌ರ್ ಗೇಮ್ಸ್‌ಗಳಲ್ಲೂ ಭಜರಂಗ್ ಪದಕ ಗೆದ್ದಿದ್ದಾರೆ.