ಜಿನೇವಾ ಪ್ರಶಸ್ತಿ ಮುಡಿಗೇರಿಸಿಕೊಂಡ ವಾವ್ರಿಂಕಾ

By Suvarna Web DeskFirst Published May 27, 2017, 10:01 PM IST
Highlights

2017ನೇ ಸಾಲಿನಲ್ಲಿ ಚೊಚ್ಚಲ ಪ್ರಶಸ್ತಿಯೆತ್ತಿ ಹಿಡಿದ ಸ್ವಿಸ್ ಆಟಗಾರ, 2015ರ ಫ್ರೆಂಚ್ ಓಪನ್ ಸೇರಿದಂತೆ ಆವೆ ಮಣ್ಣಿನ ಅಂಕಣದಲ್ಲಿ ಏಳನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಜಿನೇವಾ(ಮೇ27): ಸ್ವಿಜರ್‌'ಲೆಂಡ್‌'ನ ಸ್ಟಾರ್ ಟೆನಿಸಿಗ ಸ್ಟಾನ್ ವಾವ್ರಿಂಕಾ, ಜಿನೇವಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಈ ಗೆಲುವಿನೊಂದಿಗೆ ಮುಂಬರುವ ಪ್ರತಿಷ್ಠಿತ ಫ್ರೆಂಚ್ ಓಪನ್ ಪಂದ್ಯಾವಳಿಗೆ ಆತ್ಮವಿಶ್ವಾಸದಿಂದ ಕಣಕ್ಕಿಳಿಯುತ್ತಿದ್ದಾರೆ.

ಇಲ್ಲಿನ ಟೆನಿಸ್ ಕೋರ್ಟ್‌ನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ವಾವ್ರಿಂಕಾ 4-6, 6-3, 6-3 ಸೆಟ್‌'ಗಳಿಂದ ಜರ್ಮನಿಯ ಮಿಸ್ಚಾ ಜ್ವೇರೆವ್ ಎದುರು ಗೆಲುವು ಸಾಧಿಸಿದರು.

ಮೊದಲ ಸೆಟ್'ನಲ್ಲಿ ಜರ್ಮನಿ ಆಟಗಾರನೆದುರು ಹಿನ್ನಡೆ ಅನುಭವಿಸಿದ ಅಗ್ರ ಶ್ರೇಯಾಂಕಿತ ಆಟಗಾರ ವಾವ್ರಿಂಕಾ ನಂತರದ ಎರಡು ಸೆಟ್'ಗಳಲ್ಲಿ ಭರ್ಜರಿ ಕಮ್'ಬ್ಯಾಕ್ ಮಾಡುವ ಮೂಲಕ ವೃತ್ತಿಜೀವನದ 16 ಪ್ರಶಸ್ತಿಯನ್ನು ಎತ್ತಿಹಿಡಿದರು.

2017ನೇ ಸಾಲಿನಲ್ಲಿ ಚೊಚ್ಚಲ ಪ್ರಶಸ್ತಿಯೆತ್ತಿ ಹಿಡಿದ ಸ್ವಿಸ್ ಆಟಗಾರ, 2015ರ ಫ್ರೆಂಚ್ ಓಪನ್ ಸೇರಿದಂತೆ ಆವೆ ಮಣ್ಣಿನ ಅಂಕಣದಲ್ಲಿ ಏಳನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಭಾನುವಾರದಿಂದ ಆರಂಭವಾಗಲಿರುವ ಫ್ರೆಂಚ್ ಓಪನ್'ನಲ್ಲಿ ವಾವ್ರಿಂಕಾ ಮೊದಲ ಸುತ್ತಿನಲ್ಲಿ ಸ್ಲೋವಾಕಿಯಾದ ಜೋಸೆಫ್ ಕೊವಾಲಿಕ್ ಎದುರು ಸೆಣಸಲಿದ್ದಾರೆ.

click me!