ಐಪಿಎಲ್ ಹರಾಜು: ದಾಖಲೆ ಬರೀತಾರ ಈ ಐವರು ಕ್ರಿಕೆಟಿಗರು?

By Web DeskFirst Published Dec 12, 2018, 3:24 PM IST
Highlights

ಐಪಿಎಲ್ ಟೂರ್ನಿಯ ಹರಾಜಿನಲ್ಲಿ ಕೆಲ ಆಟಗಾರರ ಮೇಲೆ ಎಲ್ಲರು ಚಿತ್ತ ನೆಟ್ಟಿದ್ದಾರೆ. ಕೆಲವರು ಗರಿಷ್ಠ ಮೊತ್ತಕ್ಕೆ ಸೇಲಾಗುವ ಸಾಧ್ಯತೆ ಹೆಚ್ಚಿದ್ದರೆ, ಇನ್ನೂ ಕೆಲವರು ಮಾರಾಟವಾಗ್ತಾರ ಅನ್ನೋ ಕುತೂಹಲ ಮೂಡಿದೆ. ಹೀಗೆ ಕುತೂಹಲ ಮೂಡಿಸಿದ ಐವರು ಕ್ರಿಕೆಟಿಗರ ಪಟ್ಟಿ ಇಲ್ಲಿದೆ.

ಜೈಪುರ(ಡಿ.12): ಐಪಿಎಲ್ ಟೂರ್ನಿಗಾಗಿ ನಡೆಯಲಿರುವ ಹರಾಜು ಪ್ರಕ್ರಿಯೆ ಭಾರಿ ಕುತೂಹಲ ಕೆರಳಿಸಿದೆ. 12ನೇ ಆವೃತ್ತಿ ಐಪಿಎಲ್ ಟೂರ್ನಿಗಾಗಿ ಡಿಸೆಂಬರ್ 18 ರಂದು ಜೈಪುರದಲ್ಲಿ ನಡೆಯಲಿರುವ ಹರಾಜಿನಲ್ಲಿ ಓಟ್ಟು 346 ಕ್ರಿಕೆಟಿಗರು ಕಣದಲ್ಲಿದ್ದಾರೆ. 226 ಭಾರತೀಯ ಕ್ರಿಕೆಟಿಗರಲ್ಲಿ ಕೆಲ ಕ್ರಿಕೆಟಿಗರ ಹರಾಜು ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದೆ. ಹೀಗೆ ಕುತೂಹಲ ಮೂಡಿಸಿರವು ಐವರು ಕ್ರಿಕೆಟಿಗರ ಪಟ್ಟಿ ಇಲ್ಲಿ ನೀಡಲಾಗಿದೆ.

1  ಬ್ರೆಂಡನ್ ಮೆಕ್‌ಕಲಂ (ಮೂಲ ಬೆಲೆ :2 ಕೋಟಿ)
2018ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದ ನ್ಯೂಜಿಲೆಂಡ್ ಕ್ರಿಕೆಟಿಗ ಬ್ರೆಂಡನ್ ಮೆಕ್‌ಕಲಂ 12ನೇ ಆವೃತ್ತಿಗೆ ಮತ್ತೆ ಹರಾಜಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆರ್‌ಸಿಬಿ ತಂಡದ ರಿಲೀಸ್ ಆಗಿರುವ ಮೆಕ್‌ಕಲಂ, ಎಷ್ಟು ಮೊತ್ತಕಕ್ಕೆ ಹರಾಜಾಗಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.

2 ಜಯದೇವ್ ಉನಾದ್ಕಟ್(ಮೂಲ ಬೆಲೆ: 1.5 ಕೋಟಿ)
2018ರ ಐಪಿಎಲ್ ಹರಾಜಿನಲ್ಲಿ ಬರೋಬ್ಬರಿ 11.5 ಕೋಟಿ ರೂಪಾಯಿಗೆ ಹರಾಜಾಗೋ ಮೂಲಕ ದಾಖಲೆ ಬರೆದಿದ್ದ ವೇಗಿ ಜಯದೇವ್ ಉನಾದ್ಕಟ್ ಈ ಬಾರಿಯೂ ಗರಿಷ್ಠ ಮೊತ್ತಕ್ಕೆ ಹರಾಜಾಗ್ತಾರ ಅನ್ನೋ ಕುತೂಹಲ ಮನೆ ಮಾಡಿದೆ.

3 ಸ್ಯಾಮ್ ಕುರ್ರನ್ (ಮೂಲ ಬೆಲೆ :2 ಕೋಟಿ)
ಇಂಗ್ಲೆಂಡ್ ಆಲ್ರೌಂಡರ್ ಸ್ಯಾಮ್ ಕುರ್ರನ್ ಈ ಬಾರಿ ಐಪಿಎಲ್ ಟೂರ್ನಿಗೆ ಪಾದಾರ್ಪಣೆ ಮಾಡುವ ಎಲ್ಲಾ ಸಾಧ್ಯತೆ ಇದೆ. ಭಾರತ ವಿರುದ್ಧದ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡೋ ಮೂಲಕ ಗಮನಸೆಳೆದಿರುವ ಸ್ಯಾಮ್ ಈ ಬಾರಿ ಗರಿಷ್ಠ ಮೊತ್ತಕ್ಕೆ ಹರಾಜಾಗೋ ಸಾಧ್ಯತೆ ಇದೆ.

4 ಇಶಾಂತ್ ಶರ್ಮಾ(ಮೂಲ ಬೆಲೆ :75 ಲಕ್ಷ)
2018ರ ಹರಾಜಿನಲ್ಲಿ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾರನ್ನ ಯಾರು ಕೂಡ ಖರೀದಿಸಿರಲಿಲ್ಲ. ಇದೀಗ ಈ ಬಾರಿ ಐಪಿಎಲ್ ಹರಾಜಿನಲ್ಲಿ ಪಾಲ್ಗೊಂಡಿರುವ ಇಶಾಂತ್ ಮಾರಾಟವಾಗುತ್ತಾರ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

5 ಯುವರಾಜ್ ಸಿಂಗ್(ಮೂಲ ಬೆಲೆ :1 ಕೋಟಿ)
ಕಳೆದ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದ ಯುವರಾಜ್ ಸಿಂಗ್ ಇದೀಗ ತಂಡದಿಂದ ರಿಲೀಸ್ ಆಗಿದ್ದಾರೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಯುವಿ ಹೆಸರು ಕೂಡ ಇದೆ. ಆದರೆ ಕಳಪೆ ಪ್ರದರ್ಶನ ನೀಡಿರುವ ಯುವಿಯನ್ನ ಈ ಬಾರಿ ಯಾರು ಖರೀದಿಸುತ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ.

click me!