ಈ ಬಾರಿಯ ಐಪಿಎಲ್'ಗೆ ಅಕ್ರಂ ಅಲಭ್ಯ

By Suvarna Web Desk  |  First Published Dec 11, 2016, 3:50 AM IST

2010ರಿಂದ ಅಕ್ರಂ ಕೆಕೆಆರ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪಾಕ್ ಎಡಗೈ ವೇಗಿಯ ಗರಡಿಯಲ್ಲಿ ಪಳಗಿದ್ದ ಕೆಕೆಆರ್ ತಂಡ 2012 ಹಾಗೂ 2014ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಮೆರೆದಿತ್ತು.

ಕೋಲ್ಕತಾ(ಡಿ.11): ಪ್ರತಿಷ್ಠಿತ ಇಂಡಿಯನ್ ಪ್ರೀಮಿಯರ್ ಲೀಗ್‌'ನ (ಐಪಿಎಲ್) ತಂಡವಾದ ಕೋಲ್ಕತಾ ನೈಟ್‌ರೈಡರ್ಸ್‌ನ (ಕೆಕೆಆರ್) ತರಬೇತುದಾರರಾದ ವಾಸೀಂ ಅಕ್ರಂ, 2017ರ ಐಪಿಎಲ್‌'ನಲ್ಲಿ ಕೆಕೆಆರ್ ತಂಡಕ್ಕೆ ಸೇವೆ ಸಲ್ಲಿಸಲಾಗುವುದಿಲ್ಲವೆಂದು ತಂಡದ ಆಡಳಿತ ಮಂಡಳಿಯು ಅಧಿಕೃತವಾಗಿ ತಿಳಿಸಿದೆ.

ಅಕ್ರಂ ಅವರು ಇತರ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು ಸಮಯ ಹೊಂದಾಣಿಕೆ ಆಗದಿರುವುದರಿಂದ ಅವರು 2017ರ ಐಪಿಎಲ್‌ನಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಕೆಕೆಆರ್‌ನ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಿ ಮೈಸೂರು ತಿಳಿಸಿದ್ದು, ಅವರ ಇತರ ಕಾರ್ಯಗಳಿಗೆ ಯಶಸ್ಸು ಸಿಗಲೆಂದೂ ಹಾರೈಸಿದ್ದಾರೆ.

Tap to resize

Latest Videos

2010ರಿಂದ ಅಕ್ರಂ ಕೆಕೆಆರ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪಾಕ್ ಎಡಗೈ ವೇಗಿಯ ಗರಡಿಯಲ್ಲಿ ಪಳಗಿದ್ದ ಕೆಕೆಆರ್ ತಂಡ 2012 ಹಾಗೂ 2014ರಲ್ಲಿ ಐಪಿಎಲ್ ಚಾಂಪಿಯನ್ ಆಗಿ ಮೆರೆದಿತ್ತು.

10ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮುಂದಿನ ವರ್ಷ ಏಪ್ರಿಲ್ 5ರಿಂದ ಆರಂಭವಾಗಲಿದೆ.

click me!