
ಕೋಲ್ಕತಾ(ನ.24): ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ತಾವು ರಾಷ್ಟ್ರೀಯ ಕೋಚ್ ಆಗಲು ಪರಿತಪ್ಪಿಸುತ್ತಿದ್ದಾಗಿ ಬಹಿರಂಗಗೊಳಿಸಿದ್ದಾರೆ. ‘ಎಂದಿಗೂ ನಮ್ಮಿಂದ ಸಾಧ್ಯವಾಗುವ ಕೆಲಸವನ್ನು ಮಾಡಬೇಕು. ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. 1999ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಾನು ಉಪ ನಾಯಕ ಸಹ ಆಗಿರಲಿಲ್ಲ. ಆದರೆ ವಾಪಸಾದ ಮೂರೇ ತಿಂಗಳಲ್ಲಿ ನಾಯಕನಾದೆ.
ನಾನು ಆಡಳಿತಕ್ಕೆ ಕಾಲಿರಿಸಿದಾಗ, ಕೋಚ್ ಆಗಬೇಕು ಎಂದು ಪರಿತಪ್ಪಿಸುತ್ತಿದ್ದೆ. ಆಗ ಜಗಮೋಹನ್ ದಾಲ್ಮೀಯ ನನ್ನನ್ನು ಕರೆದು, 6 ತಿಂಗಳು ಆಡಳಿತ ನೋಡಿಕೋ ಮುಂದಕ್ಕೆ ನೋಡೋಣ ಎಂದಿದ್ದರು. ಕೆಲವೇ ದಿನಗಳಲ್ಲಿ ಅವರು ನಿಧನರಾದರು. ನಾನು ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷನಾದೆ. ಎಷ್ಟೋ ಜನರಿಗೆ 20 ವರ್ಷ ಕಾಯ್ದರೂ ಅಧ್ಯಕ್ಷರಾಗಲು ಸಾಧ್ಯವಾಗಿಲ್ಲ. ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ’ ಎಂದು ಗಂಗೂಲಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.